ಮತ್ತೊಮ್ಮೆ ಹಾಟ್ ಅವತಾರದಲ್ಲಿ ಕಾಣಿಸ್ಕೊಂಡು ಪಡ್ಡೆಗಳ ನಿದ್ದೆ ಕೆಡಿಸಿದ ಪೂನಂ ಪಾಂಡೆ…

First Published | Sep 20, 2024, 9:34 PM IST

ತನ್ನ ಸಾವಿನ ಸುದ್ದಿಯ ಮೂಲಕ ದೇಶದೆಲ್ಲೆಡೆ ಸುದ್ದಿ ಮಾಡಿದಂತಹ ನಟಿ ಪೂನಂ ಪಾಂಡೆ, ಇದೀಗ ತಮ್ಮ ಹಾಟ್ ಫೋಟೊಗಳ ಮೂಲಕ ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ. 
 

ಪೂನಂ ಪಾಂಡೆ (Poonam Pandey) ಅಂದ್ರೆ ನೆನಪಾಗೋದೆ ಆಕೆಯ ಮಾದಕ ಫೋಟೊಗಳು. ಸೋಶಿಯಲ್ ಮೀಡಿಯಾದಲ್ಲಿ ಯಾವಾಗ್ಲೂ ತಮ್ಮ ಹಾಟ್ ಫೋಟೊಗಳು, ವಿಡಿಯೋಗಳ ಮೂಲಕವೇ ಸದ್ದು ಮಾಡುವ ಚೆಲುವೆ, ತಮ್ಮ ಮೈಮಾಟ ಪ್ರದರ್ಶನದಲ್ಲಿ, ಕಾಂಟ್ರವರ್ಸಿ ಹೇಳಿಕೆ ನೀಡೋದ್ರಲ್ಲಿ ಪೂನಂ ಪಾಂಡೆ ಯಾವಾಗ್ಲೂ ಮುಂದು. 
 

ಕೆಲವು ತಿಂಗಳ ಹಿಂದೆ ಗರ್ಭ ಕಂಠದ ಕ್ಯಾನ್ಸರ್ ಗೆ (Colon Cancer) ಪೂನಂ ಬಲಿಯಾಗಿದ್ದಾರೆ ಎನ್ನುವ ಸುದ್ದಿ ಎಷ್ಟರ ಮಟ್ಟಿಗೆ ನಟಿ ಹರಡಿಸಿದ್ದರೆಂದರೆ, ದೇಶದ ಪ್ರತಿಷ್ಟಿತ ಚಾನೆಲ್ ನಿಂದ ಹಿಡಿದು, ದೇಶದ ಮೂಲೆ ಮೂಲೆಯಲ್ಲೂ ಜನ ಶ್ರದ್ಧಾಂಜಲಿ ಕೋರಿದ್ದರು. ಆದರೆ ತನ್ನ ಸಾವಿನ ಸುದ್ದಿಯನ್ನು ಇಡೀ ದೇಶವೇ ನಂಬುವಂತೆ ಮಾಡಿದ ನಟಿ ಎರಡು ದಿನಗಳ ಬಳಿಕ ಇದೆಲ್ಲಾ ಕ್ಯಾನ್ಸರ್ ಕುರಿತು ಜಾಗೃತಿಗಾಗಿ ಎಂದಿದ್ದರು. 
 

Tap to resize

ಇದೀಗ ಮತ್ತೆ ಪೂನಂ ಪಾಂಡೆ ತಮ್ಮ ಮಾದಕ ಫೋಟೊಗಳನ್ನು  (hot photoshoot) ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ನೀಲಿ ಬಣ್ಣದ ಜೀನ್ಸ್ ಧರಿಸಿರುವ ಪೂನಂ ಪಾಂಡೆ, ಅದಕ್ಕೆ ಟ್ಯೂಬ್ ಟಾಪ್ ನಂತಹ ಕಲರ್ ಫುಲ್ ಬ್ರಾ ಧರಿಸಿದ್ದು, ಕ್ಲೀವೇಜ್ ಕಾಣಿಸುವಂತೆ ಪೋಸ್ ನೀಡಿದ್ದಾರೆ. ಪೂನಂ ಪಾಂಡೆ ಮಾದಕ ಲುಕ್ ನೋಡಿ ನೆಟ್ಟಿಗರು ಫೈರ್ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. 
 

ಪೂನಂ ಪಾಂಡೆ ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ (Instagram page) ಈ ಫೋಟೊಗಳನ್ನು ಪೋಸ್ಟ್ ಮಾಡಿ ತಮ್ಡಿ ಚಮ್ಡೀ ಕಾ ಮತ್ ಲಬ್ ಕ್ಯಾ ಹೇ ಎಂದು ಕ್ಯಾಪ್ಶನ್ ಹಾಕಿದ್ದಾರೆ. ಈ ಫೋಟೋಗೆ ಲಕ್ಷಾಂತರ ಸಂಖ್ಯೆಯಲ್ಲಿ ಲೈಕ್ಸ್ ಮತ್ತು ಕಾಮೆಂಟ್ ಗಳು ಬಂದಿವೆ. ಪಡ್ಡೆ ಹುಡುಗರು ಕಾಮೆಂಟ್ ಮಾಡುವ ಮೂಲಕ ನಟಿ, ಅಂದ ಚಂದ, ಮೈಮಾಟವನ್ನು ಹೊಗಳಿದ್ದಾರೆ. 
 

ಪೂನಂ ಪಾಂಡೆಗೆ ಹಾಟೆಸ್ಟ್ ಬ್ಯೂಟಿ, ಸೆಕ್ಸಿ, ಗಾರ್ಜಿಯಸ್, ಎಲ್ಲಾ ಹುಡುಗರ ಕನಸಿನ ಹುಡುಗಿ, ತುಂಬಾನೆ ಹಾಟ್ ಆಗಿ ಕಾಣಿಸ್ತಿದ್ದೀರಿ, ಬೇಬಿ ಡಾಲ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ತನ್ನ ಈ ಅವತಾರಕ್ಕೆ ತಕ್ಕಂತೆ ನಟಿ ತಮ್ಮ ನೀಳ ಕೂದಲನ್ನು ಓಪನ್ ಆಗಿ ಬಿಟ್ಟಿದ್ದು ಸಖತ್ ಬೋಲ್ಡ್ ಮತ್ತು ಬ್ಯೂಟಿ ಫುಲ್ ಆಗಿ ಕಾಣಿಸ್ತಿದ್ದಾರೆ. 
 

ಪೂನಂ ಪಾಂಡೆ ರೂಪದರ್ಶಿಯೂ ಹೌದು, ಎರೋಟಿಕ್ ನಟಿಯೂ  ಹೌದು. ಆದರೆ ಈಕೆ ಖ್ಯಾತಿ ಗಳಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅರೆ ನಗ್ನ ಫೋಟೊಗಳನ್ನು ಶೇರ್ ಮಾಡುವ ಮೂಲಕ. ಇನ್ನು ನಶಾ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ, ಬಳಿಕ ಲವ್ ಈಸ್ ಪಾಯ್ಸನ್, ಅದಾಲತ್, ಮಾಲಿನಿ & ಕೋ, ಲವ್ ಇನ್ ಎ ಟ್ಯಾಕ್ಸಿ (love in a taxi) ಮೊದಲಾದ ಸಿನಿಮಾಗಳಲ್ಲಿ ನಟಿಸಿ ಹುಡುಗರ ಎದೆ ಬಡಿತ ಹೆಚ್ಚಿಸಿದ್ದರು. 
 

Latest Videos

click me!