'ನಿನ್ನ ನೋಡಿದ್ರೆ ನಂಗೆ ಜರ್ಕ್‌ ಹೊಡಿತಿದೆ, ಇನ್ನು ಹುಡುಗರಿಗೆ ಹೆಂಗಾಗಿರ್ಬೇಕು..' ಉಪೇಂದ್ರ ಮಾತಿಗೆ ಅನುಪಮಾ ಗೌಡ ಶಾಕ್‌!

Published : Sep 20, 2024, 09:10 PM IST
 'ನಿನ್ನ ನೋಡಿದ್ರೆ ನಂಗೆ ಜರ್ಕ್‌ ಹೊಡಿತಿದೆ, ಇನ್ನು ಹುಡುಗರಿಗೆ ಹೆಂಗಾಗಿರ್ಬೇಕು..' ಉಪೇಂದ್ರ ಮಾತಿಗೆ ಅನುಪಮಾ ಗೌಡ ಶಾಕ್‌!

ಸಾರಾಂಶ

ನಟ ಉಪೇಂದ್ರ ಅವರು ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್‌ ವೇದಿಕೆಯಲ್ಲಿ ನಟಿ ಅನುಪಮಾ ಗೌಡ ಅವರೊಂದಿಗೆ ತಮಾಷೆಯಾಗಿ ಮಾತನಾಡಿದ್ದಾರೆ. ಈ ವೇಳೆ ಅವರ ಮಾತಿಗೆ ಅನುಪಮಾ ಗೌಡ ಶಾಕ್ ಆದ ವಿಡಿಯೋ ವೈರಲ್ ಆಗಿದೆ.

ಪೇಂದ್ರ ಇತ್ತೀಚೆಗೆ ತಮ್ಮ 56ನೇ ವರ್ಷದ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ಈ ವೇಳೆ ವಿವಿಧ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಸಿನಿಮಾ ಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಅದರೊಂದಿಗೆ ಅವರು ನಟಿಸಿ ನಿರ್ದೇಶನ ಮಾಡಿದ್ದ ಉಪೇಂದ್ರ ಸಿನಿಮಾಗೂ 25 ವರ್ಷದ ಸಂಭ್ರಮವಾಗಿದೆ. ಈ ನಿಟ್ಟಿನಲ್ಲಿ ಸಿನಿಮಾ ಮತ್ತೆ ರೀ ರಿಲೀಸ್‌ ಆಗಿದ್ದು, ಶುಕ್ರವಾರ ಬೆಳಗ್ಗೆ ನರ್ತಕಿ ಥಿಯೇಟರ್‌ನಲ್ಲಿ ಅಭಿಮಾನಿಗಳೊಂದಿಗೆ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಇದರ ನಡುವೆ ಕಲರ್ಸ್ ಕನ್ನಡದ ಜನಪ್ರಿಯ ಅವಾರ್ಡ್ಸ್‌ ಶೋ ಅನುಬಂಧ ಅವಾರ್ಡ್ಸ್‌ ವೇದಿಕೆಗೂ ಉಪೇಂದ್ರ ಆಗಮಿಸಿದ್ದರು. ವಿಶೇಷ ಅತಿಥಿಯಾಗಿ ಆಗಮಿಸಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈ ಹಂತದಲ್ಲಿ ವೇದಿಕೆಯಲ್ಲಿ ಉಪೇಂದ್ರ ಹಾಗೂ ಅನುಪಮಾ ಗೌಡ ನಡುವಿನ ತಮಾಷೆಯ ಮಾತುಕತೆಯ ವಿಡಿಯೋ ವೈರಲ್‌ ಆಗಿವೆ. ಉಪೇಂದ್ರ ಅವರು ಹೇಳಿದ್ದ, 'ಪ್ರೀತಿ, ಪ್ರೇಮ.. ಪುಸ್ತಕದ ಬದನೆಕಾಯಿ.' ಅನ್ನೋ ಡೈಲಾಗ್‌ ಕಾರಣದಿಂದಾಗಿಯೇ ತಾವಿನ್ನೂ ಮದುವೆಯಾಗಿಲ್ಲ ಎಂದು ಅನುಪಮಾ ಗೌಡ ಹೇಳಿದ್ದರೆ, ಈ ಡೈಲಾಗೇ ಪುಸ್ತಕದ ಬದನೆಕಾಯಿ ಎಂದು ಉಪೇಂದ್ರ ಹೇಳಿದ್ದರು. ಇದರ ಮುಂದುವರಿದ ಭಾಗದ ಪ್ರೋಮೋವನ್ನು ಕಲರ್ಸ್‌ ಕನ್ನಡ ಬಿಡುಗಡೆ ಮಾಡಿದೆ.

ಸರ್‌, ನೀವು ಮಾತ್ರ ಮದುವೆಯಾಗಿ, ಮಕ್ಕಳು ಮಾಡಿಕೊಂಡು ಆ ಲೈಫ್‌ಅನ್ನು ನೋಡಿದ್ದೀರಿ, ನಮಗೆ ನಿಮ್ಮನ್ನು ನೋಡಿದರೆ ಹೊಟ್ಟೆ ಉರಿಯುತ್ತೆ ಎಂದು ಅನುಪಮಾ ಗೌಡ ಹೇಳಿದ್ದಾರೆ. ಇದಕ್ಕೆ ವೇದಿಕೆಯಲ್ಲಿಯೇ ಮಾತಿನಲ್ಲಿ ಉತ್ತರ ನೀಡಿದ ಉಪೇಂದ್ರ, 'ಇಷ್ಟು ಸುಂದರವಾದ ಹುಡುಗಿ, ನನ್ನ ನೋಡಿದ್ರೆ ಹೊಟ್ಟೆ ಉರ್ಕೊಂತೀನಿ ಅಂತಿದ್ದಾಳೆ.  ನೀವು ಯೆಸ್‌ ಅಂದ್ರೆ ಎಷ್ಟು ಜನ ಕ್ಯೂ ನಲ್ಲಿ ನಿಂತಿರ್ತಾರೆ..' ಅಂತಾ ರಕ್ತಕಣ್ಣೀರು ಸ್ಟೈಲ್‌ನಲ್ಲಿ ಡೈಲಾಗ್‌ ಉದುರಿಸಿದ್ದಾರೆ. ಇಲ್ಲ ಸರ್‌ ಹಾಗೆಲ್ಲ ಏನೂ ಇಲ್ಲ ಎಂದು ಅನುಪಮಾ ಉತ್ತರಿಸಿದ್ದಾರೆ.

ಮಾತು ಮುಂದುವರಿಸುವ ಉಪೇಂದ್ರ, 'ಬ್ಯೂಟಿ ಹಾಗೂ ಬುದ್ದಿವಂತಿಕೆಯ ಮಿಶ್ರಣ ನೀವು. ಒಳ್ಳೆ ತೊಂಡೆಕಾಯಿ ಇದ್ದಂಗೆ ಇದ್ದಿಯಲ್ಲಮ್ಮ..ನನಗೆ ಜರ್ಕ್‌ ಹೊಡಿತಾ ಇದೆ. ಇನ್ನು ಹುಡುಗರಿಗೆ ಹೆಂಗಾಗಿರರ್ಬೇಕು.' ಎಂದು ಉಪೇಂದ್ರ ಹೇಳುತ್ತಿದ್ದಂತೆ ಅನುಪಮಾ ಗೌಡ ಕೂಡ ಸಖತ್‌ ಶಾಕ್‌ ಆಗಿ ಬಿಟ್ಟರು. 

ನಿಮ್ಮದು ಏನೋ ಪ್ಲ್ಯಾನ್‌ ಇದೆ. ನಾನು ಮನೆಗೆ ಹೋದರೆ, ನನ್ನನ್ನ ಹೊರಗಡೆ ಹಾಕಿಸೋ ಪ್ಲ್ಯಾನ್‌ ಇದ್ದ ಹಾಗೆ ಕಾಣುತ್ತಿದೆ. ರೋಡಲ್ಲಿ ನಾನು ಮಲ್ಕೋಬೇಕು ಅನ್ನೋ ಪ್ಲ್ಯಾನ್‌ ಇದೆ ಎನ್ನುವಾಗಲೇ, ಇಲ್ಲಿಗೆ ಪ್ರಿಯಾಂಕಾ ಮೇಡಮ್‌ ಕೂಡ ಬರ್ತಿದ್ದಾರೆ ಎಂದು ಅನುಪಮಾ ಹೇಳಿದ್ದಾರೆ. 'ಹಾಗಿದ್ರೆ ಅವರ ಮುಂದೆ ಇದನ್ನೆಲ್ಲಾ ತೋರಿಸ್ತೀರಾ?' ಎಂದು ಉಪ್ರೇಂದ್ರ ಪ್ರಶ್ನಿಸಿದ್ದಕ್ಕೆ, ಅನುಪಮಾ ಹೌದು ಎಂದಿದ್ದಾರೆ. ಹಾಗಿದ್ದರೆ, ಈ ಪ್ರೋಗ್ರಾಮ್‌ನ ನೀವೇ ಮಾಡಿಕೊಳ್ಳಿ ನಾನು ಹೊರಡುತ್ತೇನೆ ಎಂದು ಉಪೇಂದ್ರ ಹೇಳಿದ್ದಾರೆ.

ನಟನೆ ಹಾಗೂ ನಿರೂಪಣೆ ಎರಡರಲ್ಲೂ ಸಖತ್‌ ಬ್ಯುಸಿ ಆಗಿರುವ ನಟು ಅನುಪಮಾ ಗೌಡ, ಅಕ್ಕ ಸೀರಿಯಲ್‌ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಬಿಗ್‌ಬಾಸ್‌ನಲ್ಲಿ ಎರಡು ಬಾರಿ ಸ್ಪರ್ಧೆ ಮಾಡಿದ್ದ ಈಕೆ ಹಲವಾರು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ ಅದರ ನಿರೂಪಣೆಯನ್ನೂ ಮಾಡಿದ್ದಾರೆ. ಈಗ ನಟಿ ಕಮ್‌ ನಿರೂಪಕಿ ಆಗಿರುವ ಅನುಪಮಾ ಜೀವನದಲ್ಲಿ ಬ್ರೇಕಪ್‌ ಆಗಿರುವ ವಿಚಾರ ಗೊತ್ತಿದೆ.  ತುಂಬಾ  ವರ್ಷಗಳ ಕಾಲ ಪ್ರೀತಿಸಿ, ಇನ್ನು ಮದುವೆಯಾಗಿ ಲೈಫ್‌ನಲ್ಲಿ ಸೆಟ್ಲ್ ಆಗುತ್ತೇನೆ ಎನ್ನುವಾಗ ನನ್ನ ಲವ್ ಮುರಿದುಬಿತ್ತು ಎಂದು ಹಿಂದೊಮ್ಮೆ ಹೇಳಿದ್ದರು. ಆ ಪ್ರೀತಿಯ ನೋವಿನಲ್ಲಿಯೇ ಅವರಿನ್ನೂ ಮದುವೆಯಾಗಿಲ್ಲ ಎನ್ನುವ ಮಾತುಗಳೂ ಇವೆ.

ಆ್ಯಂಕರ್​ ಅನುಪಮಾ ಗೌಡ ಮದ್ವೆಯಾಗದಿರೋದಕ್ಕೆ ಉಪೇಂದ್ರ ಕಾರಣ ಅಂತೆ! ಪತ್ನಿ ಎದುರೇ ರಿವೀಲ್​

'ನಾನು ಅಕ್ಷರಶಃ ಖಿನ್ನತೆಗೆ ಜಾರಿದ್ದ ವೇಳೆಯಲ್ಲಿ ನನ್ನನ್ನು ಕಾಪಾಡಿದ್ದು ನನ್ನ ಆತ್ಮೀಯ ಸ್ನೇಹಿತೆ ಹಾಗೂ ನನ್ನ ಗ್ರೇಟ್ ಫ್ರೆಂಡ್ಸ್ ಸರ್ಕಲ್ ಮಾತ್ರ. ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಲವ್ ಮಾಡುತ್ತಿದ್ದೆ ನಾನು. ಆದರೆ ಕಷ್ಟದ ಸಮಸಯದಲ್ಲಿ ಕೈ ಹಿಡಿದಿದ್ದು ಲವರ್ ಅಲ್ಲ, ಬದಲಿಗೆ ಫ್ರೆಂಡ್ಸ್. 'ಪ್ರೇಮಕ್ಕಿಂತ ಸ್ನೇಹ ದೊಡ್ಡದು' ಎಂಬ ಸತ್ಯವನ್ನು ನಾನು ಜೀವನದಲ್ಲಿ ಮೊದಲ ಬಾರಿಗೆ ಕಂಡುಕೊಂಡೆ..' ಎಂದು ಅನುಪಮಾ ಗೌಡ ಹಿಂದೊಮ್ಮೆ ಹೇಳಿದ್ದರು.

ಒಂದು ರೀಲ್ ಮಾಡೋಕೆ 20 ಸಾವಿರ ಕೇಳ್ತೀನಿ; ಬೇರೆ ಬೇರೆ ದುಡಿಮೆ ಬಗ್ಗೆ ರಿವೀಲ್ ಮಾಡಿದ ಅನುಪಮಾ ಗೌಡ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?