ಸೀತಾರಾಮ ಸಿಹಿಯಿಂದ ಇಂಥ ಡಾನ್ಸಾ? ಏನು ಸಂದೇಶ ಕೊಡ ಹೊರಟಿರುವಿರಿ- ವಿಡಿಯೋ ನೋಡಿ ನೆಟ್ಟಿಗರು ಗರಂ!

By Suchethana D  |  First Published Sep 20, 2024, 5:10 PM IST

ಡಾನ್ಸ್ ಕರ್ನಾಟಕ ಡಾನ್ಸ್​ ವೇದಿಕೆಯ ಮೇಲೆ ಸೀತಾರಾಮ ಸಿಹಿ ರೀತು ಸಿಂಗ್​ಗೆ ರೊಮ್ಯಾಂಟಿಕ್​ ಡಾನ್ಸ್​ ನೀಡಲಾಗಿದೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸೋಷಿಯಲ್​ ಮೀಡಿಯಾದಲ್ಲಿ ಟೀಕೆಗಳ ಸುರಿಮಳೆಯಾಗುತ್ತಿದೆ. 
 


ಸೀತಾರಾಮ ಸೀರಿಯಲ್​ ಜನರಿಗೆ ಇಷ್ಟವಾಗಲು ಮುಖ್ಯ ಕಾರಣ, ಸಿಹಿಯ ಪಾತ್ರ.  ಮೊದಲಿನಿಂದಲೂ ಈಕೆಯ ಆ್ಯಕ್ಟಿಂಗ್​ಗೆ ಮನಸೋಲದವರೇ ಇಲ್ಲ. ಸೋಷಿಯಲ್​ ಮೀಡಿಯಾಗಳಲ್ಲಿ ಈಕೆಯನ್ನು ಹಾಡಿ ಕೊಂಡಾಡುವವರೇ ಹೆಚ್ಚು.   ಐದು ವರ್ಷದ ಹೊಸ್ತಿಲಿನಲ್ಲಿಯೇ  ತನ್ನ  ಪಾತ್ರವನ್ನು ಅರಿತು ಅದರಂತೆ ನಡೆದುಕೊಂಡ ಸಿಹಿಯನ್ನು ಕಂಡು ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದ್ದಾಳೆ ಈ ಪುಟಾಣಿ. ಹಲವಾರು ದೃಶ್ಯಗಳಲ್ಲಿ ನಟನೆಯ ಮೂಲಕ ಕಣ್ಣೀರು ತರಿಸಿದ್ದಾರೆ ಈ ಕಂದ. ಆದರೆ,  ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವ ಗಾದೆ ಮಾತಿನಂತಾಗಿದೆ ಸಿಹಿಯ ಪಾತ್ರ ಎನ್ನುವುದು ಈಗ ಸೀರಿಯಲ್​ ಫ್ಯಾನ್ಸ್​ ಗಂಭೀರ ಆರೋಪ. 

ಇಂದಿನ ಹಲವು ಮಕ್ಕಳಿಗೆ ವಯಸ್ಸಿಗಿಂತಲೂ ಹೆಚ್ಚು ಮೆಚ್ಯುರಿಟಿ ಇರುತ್ತದೆ ಎನ್ನುವುದು ನಿಜವಾದರೂ ಸೀತಾರಾಮ ಸೀರಿಯಲ್​ನಲ್ಲಿ ಸಿಹಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ಮಕ್ಕಳಲ್ಲಿನ ಮುಗ್ಧತೆಯನ್ನು ಕಸಿದುಕೊಳ್ಳುವ ರೀತಿಯಲ್ಲಿ ತೋರಿಸಲಾಗುತ್ತಿದೆ, ಮಕ್ಕಳಿಗೆ ಸಾಮಾನ್ಯವಾಗಿ ಅರ್ಥವೇ ಆಗದಿರುವ ವಿಷಯಗಳಲ್ಲಿಯೂ ಸಿಹಿ ಪಾತ್ರವನ್ನು ಉದ್ದೇಶಪೂರ್ವಕವಾಗಿ ಟಿಆರ್​ಪಿಗೋಸ್ಕರ್​ ತೂರಿಸಲಾಗುತ್ತಿದೆ. ಹಲವು ಎಪಿಸೋಡ್​ಗಳಲ್ಲಿ ಸಿಹಿ ಎಲ್ಲದ್ದಕ್ಕೂ ಮೂಗು ತೂರಿಸುವಂತೆಯೇ ನಿರ್ದೇಶಕರು ತೋರಿಸುತ್ತಿದ್ದು, ಇದ್ಯಾಕೋ ಅತಿಯಾಗುತ್ತಿದೆ ಎಂದು ಬಹುದೊಡ್ಡ ವರ್ಗದ ನೆಟ್ಟಿಗರು ಸೋಷಿಯಲ್​ ಮೀಡಿಯಾಗಳಲ್ಲಿ ಕಮೆಂಟ್​ ಮೂಲಕ ಅಸಮಾಧಾನ ಹೊರಹಾಕಿದ್ದರು. ಆದರೆ ಇದೀಗ ಒಂದು ಹಂತ ಮುಂದಕ್ಕೆ ಹೋಗಿದ್ದು ಡಾನ್ಸ್​ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಸಿಹಿ ಕಾಣಿಸಿಕೊಂಡಿದ್ದಾಳೆ. 

Tap to resize

Latest Videos

undefined

ಭೂಮಿಕಾಗೆ ಮಗು ಆಗ್ಲಿಲ್ಲಾ ಅಂತಂದ್ರೆ ಗೌತಮ್​ ಸುಮ್ನೆ ಬಿಡ್ತಾನಾ? ತಲೆ ತಗ್ಗಿಸೇ ಬಿಟ್ರಲ್ಲಾ ಹೆಂಗಸ್ರು!

ಕೆಲವು ಸಂಚಿಕೆಗಳಲ್ಲಿ ಸಿಹಿ ಡಾನ್ಸ್​ಗಳಿಂದ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿದ್ದಾಳೆ. ಹಲವಾರು ರೀತಿಯಲ್ಲಿ, ವಿವಿಧ ಸ್ಟೈಲ್​ಗಳಲ್ಲಿ ಡಾನ್ಸ್​ ಮಾಡಿ ಭೇಷ್​ ಎನ್ನಿಸಿಕೊಂಡಿದ್ದಾಳೆ. ಆದರೆ ಇದೀಗ ಮತ್ತೆ ಸಿಹಿಯ ವಿರುದ್ಧವೇ ನೆಟ್ಟಿಗರು ಅಸಮಾಧಾನ ಆಗುವ ರೀತಿಯಲ್ಲಿ ರೊಮಾಂಟಿಕ್​ ಡಾನ್ಸ್​ ಮಾಡಿಸಲಾಗಿದೆ. ಕೋ-ಪಾರ್ಟನರ್​ ಜೊತೆ ಸಿಹಿ ರೊಮ್ಯಾಂಟಿಕ್​ ನೃತ್ಯದಲ್ಲಿ ಕಾಣಿಸಿಕೊಂಡಿದ್ದಾಳೆ. ಇವಳಿಗೆ ನಟನೆ, ಕಲೆ ಎನ್ನುವುದು ದೈವಿದತ್ತವಾದದ್ದು ಎನ್ನುವುದು ನಿಜ. ರೊಮ್ಯಾಂಟಿಕ್​ ಡಾನ್ಸ್​ನಲ್ಲಿಯೂ ಅದೇ ರೀತಿ ಭಾವನೆ ವ್ಯಕ್ತಪಡಿಸಿದ್ದಾಳೆ ಎನ್ನುವುದೂ ಸರಿಯೇ. ಆದರೆ ತೀರಾ ದೊಡ್ಡವರು ನಟಿಸುವ ರೀತಿಯಲ್ಲಿ ರೊಮ್ಯಾನ್ಸ್​ ಮಾಡಿಸಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಈ ರೀತಿ ಚಿಕ್ಕಮಕ್ಕಳಿಗೆ ಡಾನ್ಸ್​ ಮಾಡಿಸಿ ಏನನ್ನು ಹೇಳಲು ಹೊರಟಿರುವಿರಿ ಎಂದು ಪ್ರಶ್ನಿಸುತ್ತಿದ್ದಾರೆ. ಈಕೆ ಡಿಕೆಡಿ ವೇದಿಕೆಯ ಮೇಲೆ ಇದಾಗಲೇ ಅದ್ಭುತ ಡಾನ್ಸ್​ ಮಾಡಿದ್ದಾಳೆ, ಅಷ್ಟು ಟಿಆರ್​ಪಿ ಸಾಕಾಗಲ್ವಾ? ಇಂಥ ಅಸಭ್ಯ ಡಾನ್ಸ್​ ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. 

ಈಕೆಯ ನಿಜವಾದ ಹೆಸರು ರಿತು ಸಿಂಗ್​. ಡ್ರಾಮಾ ಜ್ಯೂನಿಯರ್ಸ್ ಸೀಸನ್ 4 ಶೋ ಮೂಲಕ ಕಿರುತೆರೆ ಜನರಿಗೆ ಪರಿಚಿತರಾದ ರಿತು ಸಿಂಗ್ ಕ್ರೇಜಿಸ್ಟಾರ್​  ರವಿಚಂದ್ರನ್ ಅವರ ಫೇವರೆಟ್​ ನಟಿ. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತ, ಸದಾ ರವಿಚಂದ್ರನ್ ಗರ್ಲ್‌ಫ್ರೆಂಡ್ ನಾನು ಎಂದು ಹೇಳುತ್ತಿದ್ದ ಈ ಪುಟ್ಟ ಪೋರಿ ಈಗ ಸೀರಿಯಲ್‌ನ ಕೇಂದ್ರ ಬಿಂದು ಆಗಿದ್ದಾಳೆ. ಐದು ವರ್ಷದ ಪೋರಿ ನಟನೆಗೆ, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಮನ ಸೋತಿದ್ದಾರೆ. ಅಂದಹಾಗೆ, ರೀತು ನೇಪಾಳದವಳು. ನೇಪಾಳ ಮೂಲದ ರಿತು ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು.

ಸೊಸೆಗಾಗಿ ಮಗನನ್ನೇ ಎಳೆದೊಯ್ದ ಅಮ್ಮ! ಜನ ಮೆಚ್ಚಿದ ಅತ್ತೆ ಇವಳೇ ಅಂತಿದ್ದಾರೆ ಫ್ಯಾನ್ಸ್: ನಿಮ್ಮ ಆಯ್ಕೆ ಯಾರು?

click me!