ಕೋಟಿ ಕೋಟಿ ಕೊಟ್ರೂ ಈ ಅದ್ಭುತ, ಸುಂದರ ತಾಣಗಳಿಗೆ ಹೋಗಲಾರಿರಿ!
First Published | Aug 19, 2020, 5:15 PM ISTಚಂದ್ರನ ಮೇಲೆ ಕಾಲಿಟ್ಟು ಮಂಗಳ ಗ್ರಹಕ್ಕೆ ಹೋಗುವ ಯೋಜನೆ ಹಾಕುವವರೆಗೆ ನಮ್ಮ ತಂತ್ರಜ್ಞಾನ ಬೆಳೆದಿದೆ. ಆದರೂ, ನಮ್ಮದೇ ಗ್ರಹದ ಕೆಲ ಸ್ಥಳಗಳಿಗೆ ಮಾತ್ರ ನಾವು ಹೋಗಲು ಸಾಧ್ಯವಿಲ್ಲ ಅಂದರೆ ನಂಬೋದು ಕಷ್ಟವಾಗಬಹುದು. ಆದರೆ ಇದೇ ನಿಜ. ಭೂಮಿ ಮೇಲೆ ಇನ್ನೂ ಕೆಲ ಸ್ಥಳಗಳು ಮನುಷ್ಯ ಕಾಲಿಡಲು ಮುಕ್ತವಾಗಿಲ್ಲವಾದರೆ, ಮತ್ತೆ ಕೆಲವು ಸುರಕ್ಷತೆ ದೃಷ್ಟಿಯಿಂದ, ಪರಿಸರದ ಕ್ಲಿಷ್ಟ ಬೆಳವಣಿಗೆಯಿಂದ, ವೈಜ್ಞಾನಿಕ ಕಾರಣಗಳಿಂದ, ಮನುಷ್ಯ ಸಂಬಂಧಿ ಕಾರಣಗಳಿಂದ ಟ್ರಾವೆಲ್ಲರ್‌ಗಳಿಗೆ ನಿಷೇಧಿತ ಪ್ರದೇಶಗಳಾಗಿ ಉಳಿದಿವೆ. ಅಂಥ ನಿಗೂಢತೆ, ವೈಜ್ಞಾನಿಕ ಗುಟ್ಟು, ಇತಿಹಾಸದ ಗುಟ್ಟು, ಧರ್ಮಗಳ ಗುಟ್ಟು ಇತ್ಯಾದಿಗಳನ್ನೊಳಗೊಂಡ ಕೆಲ ಸ್ಥಳಗಳು ಇಲ್ಲಿವೆ.