ಪಡ್ಡೆ ಮಂದಿ ಕಣ್ಣಿಗೆ ಹಬ್ಬ, ಮಾರುತಿ ಜಿಮ್ನಿ ಖರೀದಿಸಿ ವಿಡಿಯೋ ಹರಿಬಿಟ್ಟ ನೀಲಿ ಚಿತ್ರ ತಾರೆ ಸಶಾ!

By Chethan Kumar  |  First Published Nov 22, 2024, 8:41 AM IST

ಸಶಾ ಪ್ರಸಾದ್ ಸೋಶಿಯಲ್ ಮೀಡಿಯಾ ಸೇರಿದಂತೆ ಕೆಲ ವೆಬ್‌ಸೈಟ್ ಮೂಲಕ ಭಾರಿ ಜನಪ್ರಿಯತೆಗಳಿಸಿದ್ದರೆ. ತಿಳಿ ನೀಲ ಚಿತ್ರದ ತಾರೆಯಾಗಿರುವ ಸಶಾ ಪ್ರಸಾದ್ ಇದೀಗ ಮಾರುತಿ ಸುಜುಕಿ ಜಿಮ್ನಿ ಕಾರು ಖರೀದಿಸಿದ್ದಾರೆ. ಜೊತೆಗೊಂಡು ವಿಡಿಯೋವನ್ನು ಹರಿಬಿಟ್ಟಿದ್ದಾರೆ.
 


ಸಶಾ ಪ್ರಸಾದ್ ಬಹುತೇಕ ಪಡ್ಡೆ ಮಂದಿಗೆ ಈ ಹೆಸರು, ಈ ತಾರೆಯ ವಿಡಿಯೋ, ಫೋಟೋಗಳ ಮೂಲಕ ಪರಿಚಯವಿದೆ. ನೀಲಿ ಚಿತ್ರ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿರುವ ಚೆಲುವೆ. ಸೋಶಿಯಲ್ ಮೀಡಿಯಾ, ಇತರ ಕೆಲ ವೆಬ್‌ಸೈಟ್ ಮೂಲಕ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಹಲವರ ನಿದ್ದೆಗೆಡಿಸಿದ ಈ ನಟಿಗೆ ಇದೀಗ ರೆಡ್ ಬ್ಯೂಟಿ ಜೊತೆಯಾಗಿದ್ದಾರೆ. ಹೌದು, ಭಾರತೀಯ ಮೂಲದ ಸಶಾ ಪ್ರಸಾದ್ ಇದೀಗ  ಹೊಚ್ಚ ಹೊಸ ಮಾರುತಿ ಜಿಮ್ನಿ ಕಾರು ಖರೀದಿಸಿದ್ದಾರೆ. ರೆಡ್ ಬ್ಯೂಟಿ ಖರೀದಿಸಿದ ತಾರೆ ಸಶಾ ಪ್ರಸಾದ್ ಫೋಟೋ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 

ವಿದೇಶದಲ್ಲೇ ಮೊದಲು ಹೆಚ್ಚು ಸುದ್ದಿಯಾದ ಸಶಾ ಪ್ರಸಾದ್ ಬಳಿಕ ಭಾರತದಲ್ಲೂ ಮಾರುಕಟ್ಟೆ ಆಕ್ರಮಿಸಿಕೊಂಡಿದ್ದಾರೆ. ತನ್ನ ಕಾರ್ಯಕ್ಷೇತ್ರ ವಿದೇಶವಾದರೂ ಭಾರತದಲ್ಲೂ ನಿಕಟ ಸಂಪರ್ಕವಿದೆ. ಸಶಾ ಪ್ರಸಾದ್ ಕೆಂಪು ಬಣ್ಣದ ಮಾರುತಿ ಸುಜುಕಿ ಜಿಮ್ನಿ ಕಾರು ಖರೀದಿಸಿದ್ದಾರೆ. ಹೊಸ ಕಾರು ಖರೀದಿಸಿದ ಸಶಾ ಪ್ರಸಾದ್‌ಗೆ ಶೋ ರೂಂ ಸಿಬ್ಬಂದಿಗಳು ಹೂಗುಚ್ಚ ನೀಡಿ ಗೌರವಿಸಿದ್ದಾರೆ. ಇತ್ತ ಸಶಾ ತಮ್ಮ ಹೊಸ ಕಾರಿನ ಮುಂದೆ ಫೋಟೋ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಹೊಸ ಕಾರಿನ ಮುಂದೆ ನಿಂತು ವಿಡಿಯೋ ಒಂದನ್ನು ಮಾಡಿದ್ದಾರೆ.

Tap to resize

Latest Videos

undefined

ಮೆಕ್ಲೆರೆನ್ ಒಕೆ ಮಗಾ ಎಂದ ಅಜ್ಜಿ, ಮರುದಿನ ₹12 ಕೋಟಿ ಕೊಟ್ಟು ಕಾರು ಮನೆಗೆ ತಂದ ಮೊಮ್ಮಗ!

ಇದು ನನ್ನ ಹೊಸ ಕಾರು, ನಾನು ಕೆಲ ವಿಚಾರಗಳನ್ನು ನಿಮ್ಮಲ್ಲಿ ಹೇಳಬೇಕು, ಅದಕ್ಕೂ ಮೊದಲು ನನ್ನ ಹೊಸ ಕಾರು ನೋಡಿ. ಈಕೆ ಎಷ್ಟು ಸುಂದರವಾಗಿದ್ದಾಳೆ. ನಾನು ತುಂಬಾ ಇಷ್ಟಪಡುತ್ತೇನೆ ಎಂದು ಸಶಾ ಪ್ರಸಾದ್ ಹೇಳಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಹಲವರು ಸಶಾ ಪ್ರಸಾದ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಸಶಾ ಪ್ರಸಾದ್ ತಮ್ಮ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಪ್ರತಿ ಫೋಟೋ ಹಾಗೂ ವಿಯೋಗಳು ಮಿಲಿಯನ್ ವೀಕ್ಷಣೆ, ಸಾವಿರಾರು ಕಮೆಂಟ್ ಪಡೆದಿದೆ. ಬಾಲಿವುಡ್, ದಕ್ಷಿಣ ಭಾರತದ ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡಿಯೂ ಸಶಾ ಪ್ರಸಾದ್ ಭಾರಿ ಜನಪ್ರಿಯತೆ ಪಡೆದಿದ್ದಾರೆ. 

ಭಾರತದಲ್ಲಿ ಜಿಮ್ನಿ ಕಾರಿನ ಬೆಲೆ 12.74 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಿಂದ ಆರಂಭಗೊಳ್ಳುತ್ತಿದೆ. ಮಹೀಂದ್ರ ಥಾರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಂದ ಜಿಮ್ನಿ ಮಾರುತಿ ಕಾರುಗಳ ಪೈಕಿ ಪವರ್‌ಫುಲ್ ಎಂಜಿನ್ ಹೊಂದಿದೆ. 1.5 ಲೀಟರ್ K15B,  1462 cc ಪೆಟ್ರೋಲ್ ಎಂಜಿನ್ ಹೊಂದಿದೆ. ಇನ್ನು ಸುರಕ್ಷತೆಯಲ್ಲೂ ಮಾರುತಿ ಈ ಕಾರಿಗೆ ಮಹತ್ವ ನೀಡಿದೆ. ಫ್ರಂಟ್ ಹಾಗೂ ಸೈಡ್ ಸೇರಿದಂತೆ ಒಟ್ಟು 6 ಏರ್‌ಬ್ಯಾಗ್ ನೀಡಿದೆ. ಎಬಿಎಸ್, ಇಬಿಡಿ, ಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಫಂಕ್ಷನ್, ರೇರ್ ವೀವ್ಯೂ ಕ್ಯಾಮೆರಾ, ಸೈಡ್ ಇಂಪಾಕ್ಟ್ ಡೋರ್ ಬೀಮ್ಸ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

4x4 ಜೀಪ್ ಇದಾಗಿದೆ. ಪ್ರಮುಖವಾಗಿ ಆಫ್ ರೋಡ್ ಸಾಮರ್ಥ್ಯಕ್ಕೆ ತಕ್ಕಂತೆ ಈ ಕಾರು ವಿನ್ಯಾಸ ಮಾಡಲಾಗಿದೆ. ಮಾರುತಿಯ ರೆಟ್ರೋ ಶೈಲಿಯ ವಿನ್ಯಾಸಕ್ಕೆ ಹೊಸತನ ನೀಡಿ ಈ ಕಾರು ಮಾರುಕಟ್ಟೆಗೆ ಪರಿಚಯಿಸಲಾಗಿದೆ. 5 ಡೋರ್ ಕಾರು ಇದಾಗಿದೆ. ಜಿಮ್ನಿ ಬಿಡುಗಡೆಯಾದ ಬಳಿಕ ಮಹೀಂದ್ರ ಥಾರ್ ತನ್ನ 5 ಡೋರ್ ರಾಕ್ಸ್ ಕಾರನ್ನು ಬಿಡುಗಡೆ ಮಾಡಿತ್ತು. ಮಾರುತಿ ಜಮ್ನಿ ವಿದೇಶಿ ಮಾರುಕಟ್ಟೆಯಲ್ಲೂ ಭಾರಿ ಬೇಡಿಕೆ ಪಡೆದುಕೊಂಡಿದೆ.

ನಟ ವಿಜಯ್ ಹೊಸ ಕಾರಿನಲ್ಲಿದೆ ವಿಮಾನದ ರೀತಿ ಸವಲತ್ತು, ಖರೀದಿಗಿದೆ ವಿಶೇಷ ಕಾರಣ!
 

click me!