ದೇವಸ್ಥಾನ ಇರಲಿ ಇಲ್ಲ ಸ್ಮಶಾನ ಇರಲಿ, ಈಗ ಎಲ್ಲಿ ನೋಡಿದ್ರೂ ರೀಲ್ಸ್ ಹಾವಳಿ. ಅಪಾಯಕಾರಿ ಸ್ಥಳಗಳಲ್ಲಿ ಕ್ಯಾಮರಾ ಹಿಡಿದು ನಿಲ್ಲುವ ಜನರಿಗೆ ಬುದ್ಧಿ ಕಲಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.
ಸೋಶಿಯಲ್ ಮೀಡಿಯಾ (social media)ದಲ್ಲಿ ಪ್ರಸಿದ್ಧಿ ಪಡೆಯಲು ಜನರು ಸಾಹಸಕ್ಕೆ ಕೈ ಹಾಕ್ತಿದ್ದಾರೆ. ಅದ್ರಲ್ಲಿ ರೈಲು (train) ಹಾಗೂ ರೈಲ್ವೆ ಹಳಿಗಳು (railway tracks) ಜನರ ಫೆವರೆಟ್ ಜಾಗಗಳಾಗಿವೆ. ಇನ್ನೇನು ರೈಲು ಬರ್ತಿದೆ ಎನ್ನುವ ಟೈಂನಲ್ಲಿ ರೈಲು ಹಳಿ ಮೇಲೆ ನಿಂತು ರೀಲ್ಸ್ (reels) ಮಾಡಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ರೈಲಿನ ಬಾಗಿಲಿನಲ್ಲಿ ನಿಂತು ಫೋಟೋ, ವಿಡಿಯೋ ಮಾಡಲು ಹೋಗಿ, ಪ್ರಾಣಕ್ಕೆ ಅಪಾಯ ತಂದುಕೊಂಡವರಿದ್ದಾರೆ. ಕಣ್ಮುಂದೆಯೇ ಇಂಥ ಅನೇಕ ಘಟನೆ ನಡೆದ್ರೂ ಜನರಿಗೆ ಬುದ್ದಿ ಬಂದಿಲ್ಲ. ಜನರ ರೀಲ್ಸ್ ಹುಚ್ಚಿಗೆ ಸಹ ಪ್ರಯಾಣಿಕರು ತೊಂದರೆ ಅನುಭವಿಸೋದಲ್ಲದೆ, ರೈಲ್ವೆ ಮಂಡಳಿ ಕೂಡ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ, ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಭಾರತೀಯ ರೈಲ್ವೇಯು ರೈಲ್ವೆ ಹಳಿಗಳು, ರೈಲುಗಳು ಮತ್ತು ರೈಲ್ವೆ ಆವರಣಗಳಲ್ಲಿ ರೀಲ್ಸ್ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಈ ನಿಟ್ಟಿನಲ್ಲಿ ರೈಲ್ವೆ ಮಂಡಳಿ ಎಲ್ಲಾ ವಲಯ ಕಚೇರಿಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನೆ ಮಾಡಿದೆ. ಸುರಕ್ಷಿತ ರೈಲು ಕಾರ್ಯಾಚರಣೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ರೈಲ್ವೆ ಆವರಣ ಅಥವಾ ಹಳಿಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ರೈಲ್ವೆ ಕಾರ್ಯಾಚರಣೆಗೆ ಅಡ್ಡಿಪಡಿಸುವ ಚಟುವಟಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ.
undefined
ರೈಲಿನ ಜನರಲ್ ಕೋಚಿನಲ್ಲಿ ಪ್ರಯಾಣಿಸೋ ಯಾತ್ರಿಗಳೇ ಗಮನಿಸಿ, ನಿಮಗಿಲ್ಲಿದೆ ಶುಭ ಸಮಾಚಾರ!
ರೈಲ್ವೆ ಹಳಿಗಳ ಮೇಲೆ ರೀಲ್ಸ್ ಮಾಡುವ ಜನರು ರೈಲು ಕಾರ್ಯಾಚರಣೆಯಲ್ಲಿ ಅಡಚಣೆಯುಂಟು ಮಾಡ್ತಿದ್ದಾರೆ. ಹಳಿಗಳ ಮೇಲಿನ ಇಂತಹ ಚಟುವಟಿಕೆಗಳು ರೈಲು ವೇಳಾಪಟ್ಟಿ ಮತ್ತು ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಹಾಗೆಯೇ ರೈಲು ಬೋಗಿ ಅಥವಾ ರೈಲ್ವೆ ಆವರಣದಲ್ಲಿ ರೀಲ್‌ಗಳನ್ನು ತಯಾರಿಸುವುದು ಇತರ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಿದೆ.
ರೈಲ್ವೆ ಮಂಡಳಿಯಿಂದ ಕಟ್ಟುನಿಟ್ಟಿನ ಸೂಚನೆ : ಎಲ್ಲ ಕಡೆ ಎಚ್ಚರಿಕೆ ಬೋರ್ಡ್ ಮೊದಲಿನಿಂದಲೂ ಇದೆ. ಆದ್ರೆ ಸೂಕ್ತ ಕಾನೂನು ಜಾರಿಯಲ್ಲಿಲ್ಲ. ಯಾವುದೇ ಶಿಕ್ಷೆ ಆಗ್ತಿರಲಿಲ್ಲ. ಹಾಗಾಗಿ ಜನರು ಅದನ್ನು ನಿರ್ಲಕ್ಷ್ಯ ಮಾಡ್ತಿದ್ದರು. ಇನ್ಮುಂದೆ ರೈಲ್ವೆ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ. ಯಾವುದೇ ವ್ಯಕ್ತಿ ಇಂಥ ಚಟುವಟಿಕೆಯಲ್ಲಿ ತೊಡಗಿದ್ದರೆ ಆತನ ವಿರುದ್ಧ ಎಫ್ ಐಆರ್ ದಾಖಲಿಸಲಾಗುವುದು. ರೈಲ್ವೆ ಹಳಿಗಳಲ್ಲಿ ಇಂತಹ ಚಟುವಟಿಕೆಗಳು ಅಪಾಯಕಾರಿ ಮತ್ತು ಕಾನೂನುಬಾಹಿರ ಎಂದು ಜನರಿಗೆ ಅರಿವು ಮೂಡಿಸಲು ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ರೈಲ್ವೆ ಆವರಣ ಮತ್ತು ಹಳಿಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆದ್ರೆ ಅದನ್ನು ರೈಲ್ವೆ ಕಾಯಿದೆ, 1989 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ ಗಳಿಸಲು ರೈಲ್ವೆ ಹಳಿಗಳ ಮೇಲೆ ರೀಲ್‌ಗಳನ್ನು ಮಾಡುವುದು ಅಪಾಯಕಾರಿ ಮಾತ್ರವಲ್ಲದೆ ಬೇಜವಾಬ್ದಾರಿ ಕೆಲಸ.
ಪಿರಿಯಡ್ಸ್ ಟೈಂನಲ್ಲಿ ನಾಗಾ ಸಾಧುಗಳು ಏನು ಮಾಡ್ತಾರೆ?
ರೈಲ್ವೆ ಆವರಣ ಮತ್ತು ಹಳಿಗಳಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ತಪ್ಪಿಸುವಂತೆ ರೈಲ್ವೆ ಜನರಿಗೆ ಮನವಿ ಮಾಡಿದೆ. ರೈಲ್ವೆಯು ಪ್ರಯಾಣಿಕರು ಮತ್ತು ಸಾಮಾಜಿಕ ಸಂಸ್ಥೆಗಳ ಸಹಯೋಗದೊಂದಿಗೆ ಜಾಗೃತಿ ಅಭಿಯಾನಗಳನ್ನು ಉತ್ತೇಜಿಸುತ್ತಿದೆ.
ಬರೀ ರೈಲು, ಹಳಿಗಳಲ್ಲಿ ಮಾತ್ರವಲ್ಲ ಪ್ರವಾಸಿ ತಾಣಗಳಲ್ಲಿ ರೀಲ್ಸ್ ಮಾಡಿ ಅಪಾಯ ತಂದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಕೂಡ ಎಚ್ಚರಿಕೆ ಬೋರ್ಡ್ ಕೇವಲ ಲೆಕ್ಕಕ್ಕೆ ಮಾತ್ರ ಇದೆ. ರೈಲ್ವೆ ಇಲಾಖೆಯಂತೆ, ರಾಜ್ಯ ಸರ್ಕಾರಗಳು ಸೂಕ್ತ ಕ್ರಮಕ್ಕೆ ಮುಂದಾದ್ರೆ, ದಂಡ ಅಥವಾ ಶಿಕ್ಷೆಯನ್ನು ವಿಧಿಸಲು ಶುರು ಮಾಡಿದ್ರೆ ಅಪಾಯಗಳನ್ನು ಕಡಿಮೆ ಮಾಡಬಹುದಾಗಿದೆ.