11ನೇ ಪ್ರೊ ಕಬಡ್ಡಿ: 11ನೇ ಸೋಲುಂಡ ಕೊನೆಯ ಸ್ಥಾನಕ್ಕೆ ಜಾರಿದ ಬೆಂಗಳೂರು ಬುಲ್ಸ್‌!

By Naveen Kodase  |  First Published Nov 22, 2024, 9:03 AM IST

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡವು 11ನೇ ಸೋಲು ಅನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ನೋಯ್ಡಾ: 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಸೋಲಿನ ಸರಪಳಿ ಕಳಚುವ ಲಕ್ಷಣಗಳು ಕಂಡುಬರುತ್ತಿಲ್ಲ. ಗುರುವಾರ ಹರ್ಯಾಣ ಸ್ಟೀಲರ್ಸ್‌ ವಿರುದ್ಧ ಬುಲ್ಸ್‌ 26-32 ಅಂಕಗಳಿಂದ ಸೋಲನುಭವಿಸಿತು. ತಂಡಕ್ಕಿದು 13 ಪಂದ್ಯಗಳಲ್ಲಿ 11ನೇ ಸೋಲು. ಹರ್ಯಾಣ 12ರಲ್ಲಿ 9ನೇ ಗೆಲುವಿನೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿತು. ಬುಲ್ಸ್‌ ನಾಯಕ ಪರ್ದೀಪ್‌ ನರ್ವಾಲ್‌ 7 ರೈಡ್‌ಗಳಲ್ಲಿ ಕೇವಲ 1 ಅಂಕ ಗಳಿಸಿದರು. ಹರ್ಯಾಣದ ವಿನಯ್‌ 12 ಅಂಕಗಳೊಂದಿಗೆ ಮತ್ತೆ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು.

ಈ ಸೋಲಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು 13 ಪಂದ್ಯಗಳಲ್ಲಿ 2 ಗೆಲುವು ಹಾಗೂ 11 ಸೋಲು ಸಹಿತ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಇನ್ನೊಂದೆಡೆ ಹರ್ಯಾಣ ಸ್ಟೀಲರ್ಸ್ ತಂಡವು 12 ಪಂದ್ಯಗಳಲ್ಲಿ 9 ಗೆಲುವು ಹಾಗೂ 3 ಸೋಲು ಸಹಿತ 46 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.

Find out who’s ruling the roost and who’s in the chase as we’re midway through 📊 pic.twitter.com/1TnC6h1eAp

— ProKabaddi (@ProKabaddi)

Tap to resize

Latest Videos

undefined

ದಿನದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ತೆಲುಗು ಟೈಟಾನ್ಸ್‌ 31-29 ಅಂಕಗಳಿಂದ ಜಯಗಳಿಸಿತು. ಟೈಟಾನ್ಸ್‌ 12ರಲ್ಲಿ 8ನೇ ಜಯ ದಾಖಲಿಸಿದರೆ, ಬೆಂಗಾಲ್‌ಗಿದು 11 ಪಂದ್ಯಗಳಲ್ಲಿ 6ನೇ ಸೋಲು.

ಇಂದಿನ ಪಂದ್ಯಗಳು

ತಲೈವಾಸ್‌-ಯೋಧಾಸ್‌, ರಾತ್ರಿ 8ಕ್ಕೆ

ದಬಾಂಗ್‌ ಡೆಲ್ಲಿ-ಜೈಪುರ, ರಾತ್ರಿ 9ಕ್ಕೆ

ಕಲಬುರಗಿ ಓಪನ್‌: ಭಾರತದ ನಾಲ್ವರು ಕ್ವಾರ್ಟರ್‌ ಫೈನಲ್‌ಗೆ

ಕಲಬುರಗಿ: ಭಾರತದ ನಾಲ್ವರು ಟೆನಿಸಿಗರು ಐಟಿಎಫ್‌ ಕಲಬುರಗಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ದೇವ್‌ ಜಾವಿಯಾ ಇಂಡೋನೇಷ್ಯಾದ ರಿಫ್ಕಿ ಫಿಟ್ರಿಯಾಡಿ ವಿರುದ್ಧ 5-7, 6-2, 6-2ರಲ್ಲಿ ಗೆದ್ದರೆ, ಕರಣ್‌ ಸಿಂಗ್‌ ಭಾರತದವರೇ ಆದ ನಿತಿನ್‌ ಕುಮಾರ್‌ರನ್ನು 6-4, 6-3ರಲ್ಲಿ ಸೋಲಿಸಿದರು.

ಪರ್ತ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಆಯ್ಕೆ; ಆರಂಭದಲ್ಲೇ ಶಾಕ್!

ಸಿದ್ಧಾರ್ಥ್‌ ರಾವತ್‌ ಅಮೆರಿಕದ ಆದಿತ್ಯ ಗಣೇಶನ್‌ ವಿರುದ್ಧ 6-3, 7-6 (7-0) ಅಂತರದಲ್ಲಿ ಜಯಗಳಿಸಿದರು. ಆರ್ಯನ್‌ ಶಾ ಭಾರತದ ಮನೀಶ್‌ ಸುರೇಶ್‌ಕುಮಾರ್‌ ವಿರುದ್ಧ 6-3, 6-3 ನೇರ ಸೆಟ್‌ಗಳಲ್ಲಿ ಗೆದ್ದು ಅಂತಿಮ 8ರ ಘಟ್ಟ ಪ್ರವೇಶಿಸಿದರು. ಡಬಲ್ಸ್‌ನಲ್ಲಿ ನಿತಿನ್‌-ಅಮೆರಿಕದ ನಿಕ್‌ ಚಾಪೆಲ್‌, ಸಿದ್ಧಾಂತ್‌-ವಿಷ್ಣುವರ್ಧನ್‌, ರಿಷಭ್‌ ಅಗರ್‌ವಾಲ್‌-ಕಬೀರ್‌ ಸೆಮಿಫೈನಲ್‌ ಪ್ರವೇಶಿಸಿದರು.

2025ರಲ್ಲಿ ಕೇರಳಕ್ಕೆ ಬಂದು ಫುಟ್ಬಾಲ್‌ ಆಡಲಿದ್ದಾರೆ ಮೆಸ್ಸಿ!

ತಿರುವನಂತಪುರಂ: ಫುಟ್ಬಾಲ್‌ ದಿಗ್ಗಜ ಲಿಯೋನೆಲ್‌ ಮೆಸ್ಸಿ ನೇತೃತ್ವದ ವಿಶ್ವ ಚಾಂಪಿಯನ್‌ ಅರ್ಜೆಂಟೀನಾ ತಂಡವು ಕೇರಳದಲ್ಲಿ ಫುಟ್ಬಾಲ್ ಆಡಲು ಆಗಮಿಸಲಿದೆ. ಮುಂದಿನ ವರ್ಷ ಕೇರಳದಲ್ಲಿ ಸ್ನೇಹಾರ್ಥ ಪಂದ್ಯಗಳ ಆಯೋಜನೆ ಹಿನ್ನೆಲೆ ಮೆಸ್ಸಿ ಕೇರಳಕ್ಕೆ ಬರಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. 

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೇರಳ ಕ್ರೀಡಾ ಸಚಿವ ಅಬ್ದುರ್‌ ರಹಿಮಾನ್‌, ‘ಮೆಸ್ಸಿ ಸೇರಿದಂತೆ ಇಡೀ ಅರ್ಜೆಂಟೀನಾ ತಂಡ ಬರಲಿದೆ. 2 ಪಂದ್ಯಗಳು ನಡೆಯಲಿದ್ದು, ಸ್ಥಳ ಮತ್ತು ಎದುರಾಳಿ ತಂಡದ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುತ್ತೇವೆ. 50 ಸಾವಿರ ಆಸನ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸುತ್ತೇವೆ’ ಎಂದಿದ್ದಾರೆ. ಮೆಸ್ಸಿ 2011ರಲ್ಲಿ ಕೊನೆ ಬಾರಿ ಭಾರತದಲ್ಲಿ ಫುಟ್ಬಾಲ್‌ ಆಡಿದ್ದರು. ಅರ್ಜೆಂಟೀನಾ-ವೆನೆಜುವೆಲಾ ನಡುವೆ ಸ್ನೇಹಾರ್ಥ ಪಂದ್ಯ ನಡೆದಿತ್ತು.

click me!