ಅಕ್ಕಾ ನೀನು ಥೇಟ್‌ ಮಹಾಲಕ್ಷ್ಮಿನೇ...; ಹಣೆಬೊಟ್ಟು ಇಟ್ಟ ಸುದೀಪ್‌ ಪುತ್ರಿ ಫೋಟೋಗೆ ಹುಡುಗರು ಕ್ಲೀನ್ ಬೋಲ್ಡ್!

ವೈರಲ್ ಆಯ್ತು ಸಾನ್ವಿ ಸುದೀಪ್ ಫೋಟೋಗಳು. ಹಣೆಬೊಟ್ಟು ಎಷ್ಟು ಚಂದ ಕಾಣುತ್ತೆ ನೋಡಿ ಅಂತಿದ್ದಾರೆ ಫ್ಯಾನ್ಸ್..
 

Kiccha Sudeep daughter Sanvi looks beautiful keeping bindi says fans vcs

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಸಣ್ಣ ಪುಟ್ಟ ಅಪ್ಡೇಟ್‌ಗಳನ್ನು ಹಂಚಿಕೊಳ್ಳುತ್ತಾರೆ.

ಸಾನ್ವಿ ಫಿಟ್ನೆಸ್ ಟ್ರಾನ್ಸ್‌ಫಾರ್ಮೆಷನ್ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಅದಾದ ಮೇಲೆ ಸಾನ್ವಿ ಅಪ್ಲೋಡ್ ಮಾಡುವ ಪ್ರತಿಯೊಂದು ಫೋಟೋ ಸಖತ್ ವೈರಲ್ ಆಗುತ್ತದೆ.


ಸಾನ್ವಿ ಹಲವು ಸಲ ಹಣೆಬೊಟ್ಟು ಇಟ್ಟುಕೊಂಡಿರುವ ಫೋಟೋಗೆ ಫ್ಯಾನ್ಸ್ ಫಿದಾ ಆಗಿಬಿಟ್ಟಿದ್ದಾರೆ. ನೋಡಲು ದೀಪಿಕಾ ಪಡುಕೋಣೆ ಎಂದು ಪೆಟ್‌ ಹೆಸರು ಇಟ್ಟಿದ್ದಾರೆ.

ಅಕ್ಕಾ ನೀನು ಸೇಮ್‌ ಮಹಾಲಕ್ಷ್ಮಿನೇ, ಸುದೀಪ್ ಮನೆಯ ಮಹಾಲಕ್ಷ್ಮಿ, ಸುದೀಪ್‌ ಮನೆಯಲ್ಲಿ ಹಣ ಮತ್ತು ಆಸ್ತಿ ಇರೋಲು ಕಾರಣ ಏನೆಂದರೆ ಹೆಣ್ಣುಮಕ್ಕಳು ಸಂಪ್ರದಾಯ ಉಳಿಸಿದರೆ ಮಾತ್ರ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಆರಂಭದಿಂದಲೂ ಪೇಂಟಿಂಗ್, ಹಾಡುವುದು ಅಂದ್ರೆ ಸಾನ್ವಿಗೆ ಸಿಕ್ಕಾಪಟ್ಟೆ ಇಷ್ಟ. ಈಗಾಗಲೆ ಜಿಮ್ಮಿ ಚಿತ್ರದಲ್ಲಿ ಒಂದೆರಡು ಹಾಡುಗಳನ್ನು ಹಾಡಿದ್ದಾರೆ. ತಂದೆಗಾಗಿ ಸ್ಪೆಷಲ್ ಹಾಡನ್ನು ಕೂಡ ಅಪರ್ಣೆ ಮಾಡಿದ್ದಾರೆ.

ಸುಮಾರು ನಾಲ್ಕು ಲಕ್ಷ 56 ಸಾವಿರ ಫಾಲೋವರ್ಸ್ ಹೊಂದಿರುವ ಸಾನ್ವಿ ಸುಮಾರು 132 ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಅತಿ ಹೆಚ್ಚಾಗಿ ಕಿಚ್ಚ ಫಾಲೋವರ್ಸ್ ಇದ್ದಾರೆ. 

Latest Videos

vuukle one pixel image
click me!