
ಡಾ ರಾಜ್‌ಕುಮಾರ್ ( Dr Rajkumar) ಹಾಗೂ ಡಾ ಎಸ್‌ಪಿ ಬಾಲಸುಬ್ರಹ್ಮಣ್ಯಂ (SP Balasubrahmanyam) ಬಗ್ಗೆ ಭಾರತದಲ್ಲಿ ಯಾರಿಗೂ ಹೇಳಲೇಬೇಕಿಲ್ಲ. ಡಾ ರಾಜ್‌ಕುಮಾರ್ ಅವರು ಮೇರು ನಟರು ಹಾಗೂ ಎಸ್‌ಪಿಬಿ ಅವರು ಮೇರು ಗಾಯಕರು. ಅಚ್ಚರಿ ಎಂಬಂತೆ ಇಬ್ಬರೂ ನಟರು-ಗಾಯಕರೂ ಹೌದು. ಬಹುಶಃ ಭಾರತೀಯ ಚಿತ್ರರಂಗದಲ್ಲಿ ನಟನೆ ಹಾಗೂ ಗಾಯನ ಎರಡರಲ್ಲೂ ಗುರುತಿಸಿಕೊಂಡಿರುವ ಈ ಇಬ್ಬರಿಗೂ ಸಂಬಂಧಿಸಿದ ಸ್ಟೋರಿ ಇದು. ಹಾಗಿದ್ದರೆ ಅದೇನು? ಅವರಿಬ್ಬರೂ ಒಟ್ಟಾಗಿ ಮಾಡಿದ್ದೇನು ಎಂಬ ಸಹಜ ಕುತೂಹಲ ಎಲ್ಲರಲ್ಲೂ ಇರತ್ತದೆ, ಮುಂದೆ ನೋಡಿ..
ಡಾ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಬಂದು ಒಂದು ದಶಕಗಳ ಕಾಲ ಅವರಿಗೆ ಹಾಡುತ್ತಿದ್ದುದು ಡಾ ಪಿಬಿ ಶ್ರೀನಿವಾಸ್. ಆ ಬಳಿಕ 'ಸಂಪತ್ತಿಗೆ ಸವಾಲ್' ಚಿತ್ರದ ಮೂಲಕ ಡಾ ರಾಜ್‌ಕುಮಾರ್ ಅವರು ತಮ್ಮ ಎಲ್ಲಾ ಚಿತ್ರಗಳಿಗೂ ತಾವೇ ಹಾಡಲು ಶುರು ಮಾಡಿದ್ದಾರೆ. ಆದರೆ, ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಹಾಡಿದ್ದೇ ಮೊದಲಲ್ಲ, ಅದಕ್ಕೂ ಮೊದಲು ಅವರು 'ಓಹಿಲೇಶ್ವರ ಸೇರಿದಂತೆ ನಾಲ್ಕಾರು ಚಿತ್ರಗಳಲ್ಲಿ ಹಾಡಿದ್ದರು. ಆದರೆ, ಆ ಸಮಯದಲ್ಲಿ ಡಾ ರಾಜ್‌ಕುಮಾರ್ ಅವರು ತಮ್ಮ ಎಲ್ಲಾ ಚಿತ್ರಗಳಿಗಳಿಗೂ ತಾವೇ ಹಾಡುತ್ತಿರಲಿಲ್ಲ ಅಷ್ಟೇ.
ರಶ್ಮಿಕಾ ಮಂದಣ್ಣ ಇನ್ಮೇಲೆ ಟ್ರೋಲ್ ಆಗಲ್ಲ.. ಇರೋ ವಿಷ್ಯ ಎಲ್ಲಾ ಮುಂಬೈನಲ್ಲಿ ಹೇಳಿದಾರಲ್ಲ..!
ಡಾ ರಾಜ್‌ಕುಮಾರ್ ನಟನೆಯ 'ಕಾಮನಬಿಲ್ಲು' ಚಿತ್ರದಲ್ಲಿ ಡಾ ರಾಜ್ ಹಾಗೂ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಬ್ಬರೂ ಸೇರಿ ಒಂದು ಹಾಡನ್ನು ಹಾಡಿದ್ದರು. ಅದು ಚೆನ್ನಾಗಿತ್ತು ಕೂಡ. ಆದರೆ, ಬಳಿಕ ಚಿತ್ರಕಥೆ ಬದಲಾಗಿ, ಆ ಹಾಡು ಚಿತ್ರಕ್ಕೆ ಹೊಂದಿಕೆ ಆಗಲಿಲ್ಲ. ಆದ್ದರಿಂದ ಆ ಹಾಡನ್ನು ಕೈಬಿಡಲಾಯ್ತು. ಹೀಗಾಗಿ ಆ ಹಾಡು ಕಾಮನ ಬಿಲ್ಲು ಸಿನಿಮಾದಲ್ಲಾಗಲೀ ಅಥವಾ ಆಡಿಯೋ ಕ್ಯಾಸೆಟ್‌ನಲ್ಲಾಗಲೀ ಉಳಿದುಕೊಳ್ಳಲಿಲ್ಲ. ಈ ಕಾರಣದಿಂದ ಡಾ ರಾಜ್‌ಕುಮಾರ್ ಹಾಗೂ ಡಾ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಬ್ಬರ ಹಾಡನ್ನು ಆ ಚಿತ್ರದ ಮೂಲಕ ಕೇಳುವ ಹಾಗೂ ನೋಡುವ ಸುಯೋಗ ಕನ್ನಡಿಗರಿಗೆ ದಕ್ಕಿಲಿಲ್ಲ.
ಆದರೆ, ಎಸ್‌ಪಿಬಿ ಹಾಗೂ ಅಣ್ಣಾವ್ರ ಧ್ವನಿಯಲ್ಲಿ 'ಮುದ್ದಿನ ಮಾವ' ಚಿತ್ರದಲ್ಲಿನ 'ದೀಪಾವಳಿ...ದೀಪಾವಳಿ' ಹಾಡು ಮೂಡಿ ಬಂದಿದೆ. ಈ ಹಾಡು ಕನ್ನಡಿಗರ ಅಚ್ಚುಮೆಚ್ಚಿನ ಹಾಡಾಗಿದೆ. ಪ್ರತಿ ದೀಪಾವಳಿಯಲ್ಲಿ ಈ ಹಾಡು ಎಲ್ಲಾ ಕಡೆ ಒಮ್ಮೆಯಾದ್ರೂ ಕೇಳಿ ಬರುತ್ತದೆ. ಈ ಹಾಡನ್ನು ಡಾ ರಾಜ್‌ಕುಮಾರ್ ಅವರು ಭಾರತದ ಗಾನ ಗಂಧರ್ವ 'ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ನಟನೆಗೆ ಹಾಡಿದ್ದಾರೆ. ಈ ಮೂಲಕ ಡಾ ರಾಜ್‌ಕುಮಾರ್ ಹಾಗೂ ಎಸ್ಪಿ ಬಾಲಸುಬ್ರಹ್ಮಣ್ಯಂ ಸಂಗಮದಲ್ಲಿ ಕನಿಷ್ಟ ಒಂದು ಹಾಡು ಕನ್ನಡಿಗರಿಗೆ ಕೇಳಲಿಕ್ಕಿ ಸಿಗುತ್ತಿದೆ.
ಅಶ್ವಿನಿ ಲವ್ ಮಾಡಿದ್ದ ಅಪ್ಪು ಮನೆಯವರನ್ನು ಒಪ್ಪಿಸಿದ್ದು ಹೇಗೆ? ಇಲ್ಲಿದೆ ಸತ್ಯ ಕಥೆ..!
ಹೌದು, ಮುದ್ದಿನ ಮಾವ ಚಿತ್ರದಲ್ಲಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ನಟಿಸಿದ್ದಾರೆ. ಎಸ್‌ಪಿ ಬಾಲು, ಲಕ್ಷ್ಮೀ, ಹಾಗು ಶಶಿಕುಮಾರ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಎಸ್‌ಪಿಬಿ ಪಾತ್ರಕ್ಕೆ ಡಾ ರಾಜ್‌ಕುಮಾರ್ ಅವರು ಹಾಡಿದ್ದಾರೆ, ಶಶಿಕುಮಾರ್ ಪಾತ್ರಕ್ಕೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಕನ್ನಡಿಗರ ಅದೃಷ್ಟ ಎಂಬಂತೆ ಈ ದೀಪಾವಳಿ ಹಾಡಿಗೆ ಡಾ ಅಣ್ಣಾವ್ರು ಹಾಗು ಎಸ್‌ಪಿಬಿ ಜೋಡಿಯ ಹಾಡು
ಕೇಳುವ ಭಾಗ್ಯ ಈ ಮೂಲಕ ಲಭಿಸಿದೆ. ಒಟ್ಟಿನಲ್ಲಿ, ಡಾ ರಾಜ್-ಎಸ್‌ಪಿಬಿ ಇಬ್ಬರ ಅಭಿಮಾನಿಗಳಿಗೂ ಈ ಹಾಡು ಹಬ್ಬ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.