ತಂದೆಗಿಂತ ಹೆಚ್ಚಿನ ವಯಸ್ಸಿನ ಸಲ್ಮಾನ್ ಖಾನ್ ಜೊತೆ ಸಿಖಂದರ್ ಮೂವಿಯಲ್ಲಿ ನಟಿಸಿ ಹಲವು ಚರ್ಚೆಗೆ ಗ್ರಾಸವಾಗುತ್ತಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ. ಅಲ್ಲದೇ ನನ್ನೂರು ಹೈದರಾಬಾದ್ ಎನ್ನೋ ಮೂಲಕ ಕನ್ನಡಿಗರ ಕೆಂಗಣ್ಣಿಗೂ ಇತ್ತೀಚೆಗೆ ಗುರಿಯಾಗಿದ್ದರು. ಇವೆಲ್ಲದರ ನಡುವೆ ಮತ್ತೊಂದು ಸಂದರ್ಶನದಲ್ಲಿ ಕರ್ನಾಟಕದ ಬಗ್ಗೆ ಮಾತನಾಡಿ, ಸ್ವಲ್ಪ ಎಲ್ಲರನ್ನೂ ಸಮಾಧಾನ ಮಾಡಿದ್ದರು ಈ ಕೊಡಗಿನ ಕುವರಿ. ತಮ್ಮೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ, ಮೊದಲ ಚಿತ್ರದಲ್ಲಿ ಅವಕಾಶ ಕಲ್ಪಿಸಿದ್ದ ರಕ್ಷಿತ್ ಶೆಟ್ಟಿಯನ್ನು ಮಾತ್ರವಲ್ಲ, ತೆಲಗು ನಟ ನಾಗ ಶೌರ್ಯ ಅವರನ್ನೂ ಕಡೆಗಣಿಸಿದ್ದಾರೆಂದು ಒಮ್ಮೆ ವಿವಾದವಾಗಿತ್ತು. ಅಷ್ಟಕ್ಕೂ ಆಗ ಆಗಿದ್ದೇನು?