ರಿಷಬ್ ಶೆಟ್ಟಿ ಕಾಂತಾರ 1 ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮತ್ತೊಮ್ಮೆ ಪ್ಯಾನ್ ಇಂಡಿಯಾ ಮೂಲಕ ಅಬ್ಬರ ನೋಡಲು ಸ್ಯಾಂಡಲ್‌ವುಡ್ ಕೂಡ ಸಜ್ಜಾಗಿದೆ. ಇದರ ನಡುವೆ ಕಾಂತಾರ 1 ಸಿನಿಮಾ ಬಿಡುಗಡೆ ಮುಂದೂಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದಕ್ಕೆ ಚಿತ್ರತಂಡ ಮಹತ್ವದ ಅಪ್‌ಡೇಟ್ ನೀಡಿದೆ.
ಬೆಂಗಳೂರು(ಏ.02) ಕೆಜಿಎಫ್, ಕಾಂತಾರ ಸಿನಿಮಾ ಬಳಿಕ ಸ್ಯಾಂಡಲ್‌ವುಡ್ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ದಕ್ಷಿಣದ ಸಿನಿಮಾಗಳಿಗೆ ಬೇಡಡಿಕೆಯೂ ಡಬಲ್ ಆಗಿದೆ. ಯಶ್ ಅಭಿನಯದ ಟಾಕ್ಸಿಕ್ ಬಿಡುಗಡೆಗೆ ಇನ್ನು ಒಂದು ವರ್ಷ ಕಾಯಬೇಕು. ಇದರ ನಡುವೆ ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಕಾಂತಾರ 1 ಸಿನಿಮಾ ಬಿಡುಗಡೆ ಕೂಡ ಮುಂದೂಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಕುರಿತ ಕೆಲ ಪೋಸ್ಟ್‌ಗಳು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕಾಂತಾರ ಚಿತ್ರತಂಡ ಮಹತ್ವದ ಅಪ್‌ಡೇಟ್ ನೀಡಿದೆ.
ಕಾಂತರ ಚಿತ್ರ ತಂಡದ ಸ್ಪಷ್ಟನೆ
ಕಾಂತಾರ 1 ಸಿನಿಮಾ ವಿಳಂಬವಾಗುತ್ತಿದೆ ಅನ್ನೋ ಮಾತುಗಳು, ಪೋಸ್ಟ್‌ಗಳು ವೈರಲ್ ಆಗುತ್ತಿದ್ದಂತೆ ಇದೀಗ ಕಾಂತಾರ ಚಿತ್ರತಂಡ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದೆ. ಕಾಂತಾರ ಮೊದಲೇ ನಿಗದಿಪಡಿಸಿದಂತೆ ಇದೇ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ ಎಂದಿದೆ. ಇದಕ್ಕಾಗಿ ಕ್ಯೂಟ್ ವಿಡಿಯೋ ಒಂದನ್ನು ಚಿತ್ರತಂಡ ಪೋಸ್ಟ್ ಮಾಡಿದೆ. ಕಾಂತರಾ 1 ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲಾಗಿದೆ ಹೌದಾ? ಎಂದು ವ್ಯಾಟ್ಸಾಪ್ ಚಾಟ್ ಮೆಸೇಜ್‌ನಿಂದ ಈ ವಿಡಿಯೋ ಆರಂಭಗೊಳ್ಳುತ್ತಿದೆ. ಬಳಿಕ ಕನ್ನಡ, ಹಿಂದಿ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಅನುಮಾನವೇ ಇಲ್ಲ, ಬಿಡುಗಡೆ ವಿಳಂಭವೂ ಇಲ್ಲ ಅನ್ನೋದನ್ನು ಬರೆಯಲಾಗಿದೆ. ಕೊನೆಗೆ ಕಾಂತರ ಬಿಡುಗಡೆ ದಿನಾಂಕ ಖಚಿತಪಡಿಸುುವ ಪೋಸ್ಟರ್ ಹಾಕಲಾಗಿದೆ.
ʼಕಾಂತಾರ 1ʼ ಸಿನಿಮಾದಲ್ಲಿ ಬ್ಯುಸಿಯಿರೋ ರಿಷಬ್ ಶೆಟ್ಟಿ ಕುಟುಂಬದ ಯುಗಾದಿ ಆಚರಣೆ ಫೋಟೋಗಳಿವು!
ಈ ಮೂಲಕ ಕಾಂತಾರ ಸಿನಿಮಾ ತಂಡ ಚಾಪ್ಟರ್ 1 ಸಿನಿಮಾ ಬಿಡುಗಡೆಯಲ್ಲಿ ವಿಳಂಬ ಇಲ್ಲ ಎಂದಿದೆ. ಇದೀಗ ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದೆ. ಕೆಲವೇ ತಿಂಗಳಲ್ಲಿ ಕಾಂತಾರಾ 1 ಸಿನಿಮಾ ಬಿಡುಗಡೆಯಾಗಲಿದೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಹಲವರು ಮತ್ತೊಮ್ಮೆ ಕಾಂತಾರ ಅತೀ ದೊಡ್ಡ ಇಂಡಸ್ಟ್ರೀ ಹಿಟ್ ನೀಡಲಿ ಎಂದು ಹಾರೈಸಿದ್ದಾರೆ. ಇದೇ ವೇಳೆ ಕಾಂತಾರ 1 ಸಿನಿಮಾಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಒಂದು ಸೀನ್‌ಗೆ 500 ಫೈಟರ್ಸ್, 3,000 ಆರ್ಟಿಸ್ಟ್
ಕಾಂತಾರ ಸಿನಿಮಾ ಸಣ್ಣ ಬಜೆಟ್‌ನಲ್ಲಿ ನಿರ್ಮಾಣ ಮಾಡಿ ಊಹೆಗೂ ನಿಲುಕದ ಗಳಿಕೆ ಮಾಡಿದೆ. ಆದರೆ ಕಾಂತಾರ 1 ಚಾಪ್ಟರ್ ಬಿಗ್ ಬಜೆಟ್ ಮೂವಿ. ಹೀಗಾಗಿ ಪ್ರತಿ ಸೀನ್‌ನಲ್ಲೂ ಮುತೂವರ್ಜಿ ವಹಿಸಲಾಗಿದೆ. ಕಾಂತಾರಾ 1 ಸಿನಿಮಾದ ಫೈಟಿಂಗ್ ದೃಶ್ಯಕ್ಕಾಗಿ 500 ಮಂದಿ ಫೈಟರ್ಸ್, 3000 ಮಂದಿ ಆರ್ಟಿಸ್ಟ್ ಬಳಸಿಕೊಳ್ಳಲಾಗಿದೆ. ಇದು ಒಂದು ಸೀನ್‌ಗಾಗಿ ಮಾಡಿದ ತಯಾರಿ. ಇತ್ತೀಚೆಗೆ ಈ ಫೈಟಿಂಗ್ ಸೀನ್ ಚಿತ್ರೀಕರಣ ಮಾಡಲಾಗಿದೆ.
ರಿಷಬ್ ಶೆಟ್ಟಿ 3 ತಿಂಗಳ ತರಬೇತಿ
ರಿಷಬ್ ಶೆಟ್ಟಿ ಕಾಂತಾರ 1 ಸಿನಿಮಾಗ ಫೈಟಿಂಗ್ ಸೀನ್ ಹಾಗೂ ಕೆಲಭಾಗಕ್ಕಾಗಿ 3 ತಿಂಗಳು ಕಳರಿ ಫೈಟ್, ಕುದುರೆ ಸವಾರಿ, ಕತ್ತಿ ವರಸೆ ಅಭ್ಯಾಸ ಮಾಡಿದ್ದಾರೆ. ಸಿನಿಮಾದ ಈ ಫೈಟಿಂಗ್ ದೃಶ್ಯವನ್ನು 40 ರಿಂದ 45 ದಿನ ಚಿತ್ರೀಕರಿಸಲಾಗಿದೆ.
ಕಾಂತಾರಾ 1 ಬಜೆಟ್
ಕಾಂತಾರ ಸಿನಿಮಾ 2022ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಸರಿಸುಮಾರು 16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಕಾಂತಾರ 1 ಚಾಪ್ಟರ್ ಸಿನಿಮಾವನ್ನು ಬರೋಬ್ಬರಿ 125 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾ
ಕಾಂತಾರ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಿ ಬಳಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮಿತ್ತು. ಆದರೆ ಕಾಂತಾರಾ ಚಾಪ್ಟರ್ 1 ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ, ಕನ್ನಡ, ತಮಿಳು, ತೆಲುಗು, ಮಳೆಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾತ್ತಿದೆ. ರಿಷಬ್ ಶೆಟ್ಟಿ ಸಿನಿಮಾಗಾಗಿ ಇಡೀ ಭಾರತವೇ ಕಾಯುತ್ತಿದೆ.
ಕಾಂತಾರ ಚಾಪ್ಟರ್-1 ಚಿತ್ರೀಕರಣದ ಎಕ್ಸ್ಕ್ಲೂಸಿವ್ ಕಹಾನಿ; ಪ್ರೀಕ್ಚೆಲ್ ರಿಲೀಸ್ ಗುಟ್ಟು ರಟ್ಟು ಮಾಡಿದ ರಿಷಬ್!