ಯಶ್ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿ ಯಾರು? ಮಾನ್ವಿತಾ ಕಾಮತ್ ಗರಂ ಆಗಿದ್ದು ಯಾಕೆ?
ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ರಾಕಿಂಗ್ ಸ್ಟಾರ್ ಅಂದ್ರೆ ಯಶ್. ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ ವರ್ಲ್ಡ್ ಸ್ಟಾರ್ ಕೂಡ ಆಗಿದ್ದಾರೆ. ಯಾರ ಸಪೋರ್ಟ್ ಇಲ್ಲದೆ ಬೆಳೆದ ಯಶ್ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ನೀಡಿದ್ದಾರೆ. ಹೀಗಾಗಿ ಇಂಡಸ್ಟ್ರಿಗೆ ಈಗಷ್ಟೇ ಕಾಲಿಡುತ್ತಿರುವ ಹೊಸ ಕಲಾವಿದರಿಗೆ ಬಿಗ್ ಸಪೋರ್ಟ್ ಆಗಿ ನಿಂತಿದ್ದಾರೆ.ನಮ್ಮ ಹುಡುಗ ಅನ್ನೋ ಭಾವನೆ ಕೊಟ್ಟಿದ್ದಾರೆ ಅದಿಕ್ಕೆ ಕೊಂಚ ಸಲುಗೆ ಮೇಲೆ ನಮ್ಮ ಹುಡುಗ ಮನೆ ಮಗ ಅಂತ ಸಲುಗೆಯಲ್ಲಿ ಮಾತನಾಡುವುದು ಜಾಸ್ತಿ. ಆದರೆ ನಟಿ ಮಾನ್ವಿತಾ ಮುಂದೆ ಯಶ್ ಬಗ್ಗೆ ಮಾತನಾಡಿದ ವ್ಯಕ್ತಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.
ಹೌದು ಮಾನ್ವಿತಾ ಕಾಮತ್ ಜೊತೆ ಹೀಗೆ ಒಬ್ಬರು ನಟ ಯಶ್ ಬಗ್ಗೆ ಮಾತನಾಡಿದ್ದಾರೆ. ನನಗೆ ಯಶ್ ಗೊತ್ತು ಹಾಗೆ ಹೀಗೆ ಅಂತ ಮಾನ್ವಿತಾ ಅಲ್ಲಿಗೆ ಸುಮ್ಮನಾಗಿದ್ದಾರೆ ಆದರೆ ಮಾತು ಮುಂದುವರೆದಾಗ ಕೊಂಚ ಜೋರ್ ಮಾಡಿದ್ದಾರೆ.'ಅವರೆಲ್ಲರೂ ಯಶ್ ಅವರು ಕೆಳಗೆ ಬೀಳುವುದನ್ನೇ ಕಾಯುತ್ತಿದ್ದ ರೀತಿಯಲ್ಲಿ ಮಾತನಾಡುತ್ತಿದ್ದರು. ಟಾಕ್ಸಿಕ್ ಸಿನಿಮಾ ಹಿಟ್ ಆಗಬೇಖು ಅದರಿಂದ ಇನ್ನೊಂದಷ್ಟು ಕೆಲಸಗಳ ಹೊರಗಡೆ ಬರುತ್ತದೆ. ಆ ವ್ಯಕ್ತಿ ಏನೋ ಗುರಿಯಿಟ್ಟುಕೊಂಡು ಹೋಗುತ್ತಿದ್ದಾರೆ. ಅವರಿಗೆ ಒಳ್ಳೆಯದು ಆದರೆ ಇಂಡಸ್ಟ್ರಿಗೆ ಒಳ್ಳೆಯದಾಗುತ್ತೆ ಅನ್ನೋ ಮನಸ್ಥಿತಿಯೇ ಇಲ್ಲ. ಬೇಡದೇ ಇರೋದನ್ನು ಮಾತನಾಡುತ್ತಿದ್ದರು. ಯಾರೋ ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಅಂತ ಗೊತ್ತಾದರೆ ನಾನು ಆ ಜಾಗದಲ್ಲಿ ಇರೋದೇ ಇಲ್ಲ' ಎಂದು ಖಾಸಗಿ ಸಂದರ್ಶನದಲ್ಲಿ ಮಾನ್ವಿತಾ ಮಾತನಾಡಿದ್ದಾರೆ.
ಬೆಂಗಳೂರು ಬಿಸಿಲು ಕಾಟ ಸಾಕು ಅಂತ ಮಂಜಿನ ಕಡೆ ಹೊರಟ ನಟಿ ಅಮೂಲ್ಯ; ಫೋಟೋ ವೈರಲ್
'ಅವತ್ತು ಕೂಡ, ಯಾರೂ ಕೂಡ ಉದ್ದಾರ ಆಗುವುದಿಲ್ಲ ಅದಕ್ಕೆ ಕಾರಣ ಏನು ಗೊತ್ತಾ ನೀವು ಎಲ್ಲರೂ ವ್ಯಕ್ತಿ ಬೀಳುವುದನ್ನು ಕಾಯುತ್ತಿರುತ್ತೀರಾ. ಒಬ್ಬರ ಏಳಿಗೆಯನ್ನು ಸಹಿಸುವುದಿಲ್ಲ ನೀವುಗಳು. ಒಬ್ಬ ಆಕ್ಟರ್ ಜೊತೆಗೆ ಒಂದು ಪ್ರೊಡಕ್ಷನ್ ಹೌಸ್ ಬೆಳೆಯುತ್ತಿದೆ ಅಂದ್ರೆ ಅವರ ಜೊತೆ ನಿತಂಉಕೊಳ್ಳಬೇಕು ಅನ್ನೋ ಮನಸ್ಥಿತಿಯೇ ಇಲ್ಲ. ಒಟ್ಟಾರೆ ಅವರನ್ನು ನೋಡಿ ನಗಬೇಕು. ಅವರಿಗೆಲ್ಲಾ ಮಾತಿನ ಮೂಲಕ ಸರಿಯಾಗಿ ಹೇಳಿ ಬಂದೆ ಅವತ್ತು' ಎಂದು ಮಾನ್ವಿತಾ ಹೇಳಿದ್ದಾರೆ.