ಅಶ್ವಿನಿ ಲವ್ ಮಾಡಿದ್ದ ಅಪ್ಪು ಮನೆಯವರನ್ನು ಒಪ್ಪಿಸಿದ್ದು ಹೇಗೆ? ಇಲ್ಲಿದೆ ಸತ್ಯ ಕಥೆ..!

Published : Apr 02, 2025, 02:41 PM ISTUpdated : Apr 02, 2025, 02:44 PM IST
ಅಶ್ವಿನಿ ಲವ್ ಮಾಡಿದ್ದ ಅಪ್ಪು ಮನೆಯವರನ್ನು ಒಪ್ಪಿಸಿದ್ದು ಹೇಗೆ? ಇಲ್ಲಿದೆ ಸತ್ಯ ಕಥೆ..!

ಸಾರಾಂಶ

ಪುನೀತ್ ರಾಜ್‌ಕುಮಾರ್ ಅವರು ಕನ್ನಡದ ಕಂದ, ಕರ್ನಾಟಕ ರತ್ನ. ಅವರು ನಮ್ಮನ್ನಗಲಿ ಹೋಗಿದ್ದರೂ ಅವರ ನೆನಪುಗಳು ನಮ್ಮನ್ನು ಬಿಟ್ಟು ಹೋಗೋದಿಲ್ಲ. ಕಾರಣ, ಅವರು ಸಿನಿಮಾಗಳಲ್ಲಿ ನಟಿಸಿದ್ದು ಮಾತ್ರವಲ್ಲ, ಸಮಾಜ ಸೇವೆಯನ್ನೂ ಮಾಡಿ ಹೋಗಿದ್ದಾರೆ. ಆ ಮೂಲಕ..

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಈಗ ನಮ್ಮೊಂದಿಗಿಲ್ಲ. ಆದರೆ, ಆ ಮಹಾನುಭಾವ ನಮ್ಮೊಂದಿಗೆ ಇದ್ದರು, ಚೆನ್ನಾಗಿ ಬದುಕು ಬಾಳಿದ್ದರು ಎಂಬುದಕ್ಕೆ ಈಗಲೂ ಸಾಕ್ಷಿಯ ಅಗತ್ಯವೇ ಇಲ್ಲ. ಏಕೆಂದರೆ, ಕನ್ನಡಿಗರ ಪ್ರತಿಯೊಬ್ಬರ ಹೃದಯದಲ್ಲೂ ಅವರು ಸ್ಥಾನ ಪಡೆದಿದ್ದಾರೆ. ಅವರನ್ನು ಯಾರೂ ಯಾವತ್ತೂ ಮರೆಯಲು ಅಸಾಧ್ಯ ಎಂಬಷ್ಟು ಅವರು ಜನರಿಗೆ ಸತ್ತ ಮೇಲೂ ಹತ್ತಿರ ಇದ್ದಾರೆ. ಅವರು ಬಾಲ್ಯ, ಯೌವನ, ಲವ್ ಮದುವೆ ಕೊನೆಗೆ ಸಾವೂ ಕೂಡ ಈಗಲೂ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿ ಆಗುತ್ತಲೇ ಇರುತ್ತದೆ. 

ಹೌದು, ಪುನೀತ್ ರಾಜ್‌ಕುಮಾರ್ ಅವರು ಕನ್ನಡದ ಕಂದ, ಕರ್ನಾಟಕ ರತ್ನ. ಅವರು ನಮ್ಮನ್ನಗಲಿ ಹೋಗಿದ್ದರೂ ಅವರ ನೆನಪುಗಳು ನಮ್ಮನ್ನು ಬಿಟ್ಟು ಹೋಗೋದಿಲ್ಲ. ಕಾರಣ, ಅವರು ಸಿನಿಮಾಗಳಲ್ಲಿ ನಟಿಸಿದ್ದು ಮಾತ್ರವಲ್ಲ, ಸಮಾಜ ಸೇವೆಯನ್ನೂ ಮಾಡಿ ಹೋಗಿದ್ದಾರೆ. ಆ ಮೂಲಕ ಅವರು ಹಲವರ ಬಾಳಿಗೆ ಬೆಳಕಾಗಿದ್ದಾರೆ. ಶಕ್ತಿಧಾಮ ಹೆಸರಿನ ಸಂಘದ ಮೂಲಕ ಹಲವು ಅನಾಥ ಹೆಣ್ಣುಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಅವರು ಕೊಟ್ಟು ಹೋದ ಹಾಗೂ ಬಿಟ್ಟು ಹೋದ ಆಸ್ತಿಯೇ ಹಲವು ತಲೆಮಾರುಗಳು ಸಾಕು ಎನ್ನಬಹುದು. 

ವಿಶಿಷ್ಟ ಕಥಾ ಹಂದರದ ಮಕ್ಕಳ ಚಿತ್ರ `ಸೀಸ್ ಕಡ್ಡಿ' ಬಿಡುಗಡೆಗೆ ರೆಡಿ; ಯಾರೆಲ್ಲಾ ಇದಾರೆ ನೋಡಿ!

ಅಷ್ಟೇ ಅಲ್ಲ, ಪುನೀತ್ ರಾಜ್‌ಕುಮಾರ್ ಅವರು ಅಶ್ವಿನಿ ಅವರನ್ನು ಮದುವೆ ಆಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಅಶ್ವಿನಿ-ಅಪ್ಪು ಅವರದ್ದು ಲವ್ ಮ್ಯಾರೇಜ್ ಎಂಬುದು ಕೂಡ ಹಲವರಿಗೆ ಗೊತ್ತು. ಆದರೆ, ಲವ್ ಮಾಡಿದ್ದ ಅಪ್ಪು-ಅಶ್ವಿನಿಯ ಮದುವೆಗೆ ಡಾ ರಾಜ್‌ಕುಮಾರ್ ಮನೆಯವರು ಒಪ್ಪಿದ್ದು ಹೇಗೆ ಎಂಬುದು ಹಲವರಿಗೆ ಗೊತ್ತಿಲ್ಲ. ಅಲ್ಲೇ ಇರೋದು ಮ್ಯಾಟರ್, ಅಲ್ಲೇ ಇರೋದು ಸಕತ್ ಟ್ವಿಸ್ಟು... ಹಾಗಿದ್ರೆ ಅದೇನು ಅಂತ ನೋಡಿ.. 

ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ಪರಸ್ಪರ ಲವ್ ಮಾಡಿಬಿಟ್ಟಿದ್ದಾರೆ. ಆದ್ರೆ ಮನೆಯವರಿಗೆ ಈ ವಿಷಯ ಹೇಳಿದ್ದು ಹೇಗೆ? ಒಪ್ಪಿಸಿದ್ದು ಹೇಗೆ? ಪುನೀತ್ ಅವರು ಶಿವಣ್ಣ ಅವರಿಗೆ ವಿಷಯ ಹೇಳಿದ್ದು, ಶಿವಣ್ಣ ಅದನ್ನು ಅಪ್ಪಾಜಿ ಡಾ ರಾಜ್‌ಕುಮಾರ್‌ಗೆ ಹೇಳಿದ್ದು ಇವೆಲ್ಲಾ ಸರಿ. ಆದರೆ ಫೈನಲ್‌ ಆಗಿ ಡಾ ರಾಜ್‌ಕುಮಾರ್ ಅವರಿಬ್ಬರ ಮದುವೆಗೆ ಒಪ್ಪಿದ್ದು ಹೇಗೆ ಗೊತ್ತಾ? ಅದು ಸ್ವತಃ ಪುನೀತ್ ರಾಜ್‌ಕುಮಾರ್ ಮಾತಿನಿಂದ ಎನ್ನಬಹುದೇ? ಸರಿಯಾಗಿ ಅದು ಡಾ ರಾಜ್‌ಕುಮಾರ್ ಅವರಿಗೇ ಗೊತ್ತು. ಆದರೆ, ಸಿಕ್ಕ ಮಾಹಿತಿ ಪ್ರಕಾರ ಅಣ್ಣಾವ್ರು ಅಪ್ಪು-ಅಶ್ವಿನಿ ಮದುವೆಗೆ ಒಪ್ಪಿರುವ ಕಾರಣ ಇದು.. 

ರಶ್ಮಿಕಾ ಮಂದಣ್ಣ ಇನ್ಮೇಲೆ ಟ್ರೋಲ್ ಆಗಲ್ಲ.. ಇರೋ ವಿಷ್ಯ ಎಲ್ಲಾ ಮುಂಬೈನಲ್ಲಿ ಹೇಳಿದಾರಲ್ಲ..!

ಪುನೀತ್ ಅವರು ಅಪ್ಪಾಜಿ ಬಳಿ, 'ಅಶ್ವಿನಿ ನಮ್ಮ ಫ್ಯಾಮಿಲಿಗೆ ಬಂದ ಮೇಲೆ ಕೆಲಸವನ್ನೂ ಮಾಡುತ್ತಾರೆ. ಅವರಿಗೆ ಸ್ವತಂತ್ರವಾಗಿ ಬದುಕುವ ಬಯಕೆ, ಕಲೆ ಎಲ್ಲವೂ ಇದೆ. ಅವರು ನಮ್ಮ ಬಿಸಿನೆಸ್ ನೋಡಿಕೊಳ್ಳುವ ಸಾಮರ್ಥ್ಯ ಕೂಡ ಹೊಂದಿದ್ದಾರೆ. ಒಟ್ಟಿನಲ್ಲಿ ನಮ್ಮ ಅಲವಂಬನೆ ಇಲ್ಲದೇ ಕೆಲಸ ಮಾಡಲೂ ಅವರು ಸಿದ್ಧರಾಗಿದ್ದಾರೆ ಎಂದಿದ್ದರಂತೆ. ಆ ಬಳಿಕವೇ ಡಾ ರಾಜ್‌ಕುಮಾರ್ ಅವರಿಬ್ಬರ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಎಂದು ಪುನೀತ್ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದೀಗ ಅವರು ಪುನೀತ್ ಹೇಳಿದ್ದಂತೆ, ಪಿಆರ್‌ಕೆ ಪ್ರೊಡಕ್ಷನ್ ಕೆಲಸ ನೋಡಿಕೊಳ್ಳುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್