ಹಾಟ್​​​ ಅವತಾರದಲ್ಲಿ ಮೋಹಕ ನೋಟ ಬೀರಿದ ರಾಗಿಣಿ ದ್ವಿವೇದಿ: ಮತ್ತೆ ಸ್ವಲ್ಪ ದಪ್ಪ ಆಗಿದ್ದೀರಾ ಅನ್ನೋದಾ ಫ್ಯಾನ್ಸ್‌!

First Published Feb 29, 2024, 1:00 AM IST

ಸ್ಯಾಂಡಲ್‌ವುಡ್‌ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇದೀಗ ಹೊಸ ಲುಕ್‌ನಲ್ಲಿ ಹೊಳೆಯುತ್ತಿದ್ದಾರೆ. ಮೋಹಕ ನೋಟ, ಮಾದಕ ಹೊಳಿಪಿನೊಂದಿಗೆ ಕಣ್ಮನ ಸೆಳೆಯುತ್ತಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ನಾಯಕಿ ರಾಗಿಣಿ ದ್ವಿವೇದಿ ರೂಪ ಬದಲಾಗಿದೆ. ನೋಟದಲ್ಲೂ ಹೊಸ ಹೊಳಪು ಕಾಣಿಸುತ್ತಿದೆ. ಮೊದಲಿಗಿಂತಲೂ ಕೊಂಚ ದಪ್ಪ ಅನಿಸುತ್ತಿದ್ದಾರೆ. ಆದರೂ ರೂಪ-ಲಾವಣ್ಯದಲ್ಲಿ ಏನೂ ಬದಲಾಗಿಲ್ಲ.

ರಾಗಿಣಿ ದ್ವಿವೇದಿ ಹೊಸ ಲುಕ್ ಸೂಪರ್ ಆಗಿದೆ. ದೇಹದ ತೂಕ ಇಳಿಸೋ ಮೊದಲು ಏನ್ ಚಾರ್ಮ್ ಇತ್ತೋ ಅದೇ ಲುಕ್‌ ಅಲ್ಲಿಯೇ ಹೊಳೆಯುತ್ತಿದ್ದಾರೆ. ಫೋಟೋಗ್ರಾಫರ್ ರೋಹನ್ ಮತ್ತು ಕಿರಣ್ ಸಖತ್ ಆಗಿಯೇ ರಾಗಿಣಿ ಹಾವ-ಭಾವಗಳನ್ನ ಕ್ಯಾಪ್ಚರ್ ಮಾಡಿದ್ದಾರೆ.

ರಾಗಿಣಿ ದ್ವಿವೇದಿ ಸದ್ಯ ಈ ಹೊಸ ಲುಕ್ ಸಿನಿಮಾಗೋಸ್ಕರ ಏನೂ ಅಲ್ಲ ಬಿಡಿ. ಸುಮ್ನೆ ಒಂದು ಹೊಸ ರೂಪ ಅನ್ನುವ ಹಾಗೆ ಆಗಾಗ ರಾಗಿಣಿ ಫೋಟೋ ಶೂಟ್ ಮಾಡಿಸುತ್ತಾರೆ. ಅವುಗಳನ್ನ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಳ್ಳುತ್ತಾರೆ. ಜೊತೆಗೆ ತಮಗಿಷ್ಟವಾದ ಲೈನ್‌ಗಳನ್ನೂ ಬರೆದುಕೊಳ್ಳುತ್ತಾರೆ.

ರಾಗಿಣಿ ದ್ವಿವೇದಿ ಇದೀಗ ಹಂಚಿಕೊಂಡಿರೋ ಈ ಫೋಟೋಗಳಿಗೆ ಒಂದು ಸುಂದರ ಲೈನ್ ಬರೆದಿದ್ದಾರೆ. Fall for the art of self-care!!! ಅನ್ನೋ ಈ ಲೈನ್ ತುಂಬಾನೆ ಇಂಟ್ರಸ್ಟಿಂಗ್ ಆಗಿದೆ. ಸ್ವ ಆರೈಕೆ ಮಾಡೋದು ಒಂದು ಕಲೆ ಅನ್ನೋ ಅರ್ಥ ಕೊಡೋ ಈ ಲೈನ್ ಇತರರಿಗೂ ಸ್ಪೂರ್ತಿ ಆಗೋ ರೀತಿನೇ ಇದೆ.

ರಾಗಿಣಿ ದ್ವಿವೇದಿ ಸಾಮಾನ್ಯವಾಗಿ ಎಲ್ಲೆಡೆ ಓಡಾಡುತ್ತಾರೆ. ಎಲ್ಲೆಡೆ ಲೋಕ್ ಫುಡ್ ತಿನ್ನಲು ಇಷ್ಟ ಪಡುತ್ತಾರೆ. ಆದರೆ ಸಣ್ಣ ಆದ್ಮೇಲೆ ಹೆಚ್ಚು ಹೊರಗಿನ ಫುಡ್ ಏನೂ ಸೇವಿಸೋದಿಲ್ಲ. ಬದಲಾಗಿ ಮನೆಯ ಊಟವನ್ನೆ ಸೇವಿಸುತ್ತಾರೆ. ಹೆಲ್ದಿ ಆಗಿಯೇ ಇದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ರಾಗಿಣಿ ದ್ವಿವೇದಿ ಅಭಿನಯದ ಇ-ಮೇಲ್ ಸಿನಿಮಾ ಇತ್ತೀಚಿಗೆ ರಿಲೀಸ್ ಆಗಿದೆ. ಕನ್ನಡ ಮತ್ತು ತಮಿಳು ಭಾಷೆಯಲ್ಲಿಯೇ ಈ ಚಿತ್ರ ರಿಲೀಸ್ ಆಗಿತ್ತು ಅಂತಲೇ ಹೇಳಬಹುದು. ಅದು ಬಿಟ್ಟರೆ, ಬಹು ಭಾಷೆಯ ವೃಷಭ ಚಿತ್ರದಲ್ಲೂ ರಾಗಿಣಿ ಅಭಿನಯಿಸಿದ್ದಾರೆ. 

ರಾಗಿಣಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೇ ಕನ್ನಡದ ಬಹುತೇಕ ನಟರೊಂದಿಗೆ ರಾಗಿಣಿ ದ್ವಿವೇದಿ ತೆರೆ ಹಂಚಿಕೊಂಡಿದ್ದಾರೆ. ಶಿವಣ್ಣ ಜೊತೆ ನಟಿಸಿದ ಶಿವ ಚಿತ್ರಕ್ಕೆ ಸೈಮಾ ಪ್ರಶಸ್ತಿ ಕೂಡ ಪಡೆದಿದ್ದಾರೆ.

click me!