ಪ್ರಥಮಾ ನಿಂಗೆ ಬುದ್ಧಿ ಇಲ್ವೆನೊ... ಬೇಲ್​ ಕ್ಯಾನ್ಸಲ್​ ಮಾಡ್ಸಿಲ್ಲಾ ಅಂದ್ರೆ ನನ್​ ಹೆಸ್ರು.... ಜಗದೀಶ್​​ ಗುಡುಗು

By Suchethana D  |  First Published Nov 19, 2024, 12:04 PM IST

ನಟ ಪ್ರಥಮ್​ ವಿರುದ್ಧ ದರ್ಶನ್​ ಅಭಿಮಾನಿಗಳು ನಡೆಸಿರುವ ಹಲ್ಲೆಯನ್ನು ಖಂಡಿಸಿರುವ ಬಿಗ್​ಬಾಸ್​  ಖ್ಯಾತಿಯ ಲಾಯರ್​ ಜಗದೀಶ್​ ಗುಡುಗಿ ಮತ್ತೊಂದು ವಿಡಿಯೋ ಮಾಡಿದ್ದಾರೆ.
 


ಲೋ ಪ್ರಥಮಾ ನಿನಗೆ ಬುದ್ಧಿ ಇಲ್ವೇನೋ! ಯಾವನ್ಲೇ ಅವನು, ನಿನಗೆ ಡಿ ಬಾಸ್​ಗೆ ಜೈ ಹೇಳು ಅಂತ ಧಿಮಾಕು ಹಾಕಿದ್ದು. ಇಷ್ಟಾದ್ರೂ ಸುಮ್ನೆ ಇದ್ದಿಯಲ್ಲ. ಘಟನೆ ಆದ ಕೂಡ್ಲೇ ಕಂಪ್ಲೆಂಟ್​ ರಿಜಿಸ್ಟರ್​ ಮಾಡಲು ಆಗಿಲ್ವಾ? ಇದೇನು ಗೂಂಡಾಗಳ ರಾಜ್ಯ ಅಂದ್ಕೊಂಡಿದ್ದಾನೆ ಆ ದರ್ಶನ್​? ಅವನು ಕೊಲೆ ಆರೋಪಿ. ಒಂದಿಷ್ಟು ಗೂಂಡಾಗಳನ್ನು ಸಾಕಿಕೊಂಡು ದಾದಾಗಿರಿ ಮಾಡ್ತಾನಾ? ಬೇಲ್​ ಮೇಲೆ ಹೊರಗೆ ಬಂದಿರೋದಕ್ಕೆ ಈ ಗೂಂಡಾಗಳು ಬಾಲ ಬಿಚ್ಚುತ್ತಾ ಇದ್ದಾರೆ. ಏನಂದ್ರಿ? ಪ್ರಥಮ್​ ಜೈ ಡಿ ಬಾಸ್​ ಹೇಳ್ಬೇಕಾ... ನೋಡ್ತಾ ಇರಿ. ಮೆಡಿಕಲ್​ ಬೇಲ್​ ಹೆಸ್ರಲ್ಲಿ ಹೊರಗೆ ಬಂದಿದ್ದಿಯಲ್ವಾ? ನೋಡ್ತಾ ಇರೋ ದರ್ಶನ್​... ನಿನ್ನ ಮೆಡಿಕಲ್​ ಬೇಲ್​ ಕ್ಯಾನ್ಸಲ್​ ಮಾಡಿಸದ್ರೇ ಇದ್ರೆ ನನ್ನ ಹೆಸ್ರು ಜಗದೀಶ್​ ಅಲ್ಲ... ಎನ್ನುತ್ತಲೇ ಮತ್ತೊಮ್ಮೆ ಗುಡುಗಿದ್ದಾರೆ ಬಿಗ್​ಬಾಸ್​ ಖ್ಯಾತಿಯ ಲಾಯರ್​ ಜಗದೀಶ್​! 
 
ಅಷ್ಟಕ್ಕೂ, ಮೊನ್ನೆ  ಬಿಗ್ ಬಾಸ್ ಖ್ಯಾತಿಯ ನಟ ಒಳ್ಳೆ ಹುಡುಗ ಪ್ರಥಮ್ ಅವರ ಮೇಲೆ ನಟ ದರ್ಶನ್ ಅಭಿಮಾನಿಗಳು ಹೋಟೆಲ್‌ನಲ್ಲಿ ಹಲ್ಲೆ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ನೀಡಿದ್ದ ಪ್ರಥಮ್​, ಇದು 2ನೇ ಸಲ‌ ದರ್ಶನ್ ಅಭಿಮಾನಿಗಳು ನನ್ನ ಮೇಲೆ ಹಲ್ಲೆಗೆ ಪ್ರಯತ್ನ ಮಾಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ಮೊದಲ ಸಲ ಹಲ್ಲೆ ಯತ್ನ ನಡೆದಿತ್ತು. ಆಗ ನಾನೇ ಬೇಡ ಅಂತ ದೂರು ನೀಡಿರಲಿಲ್ಲ. ಆದರೆ,  ಹೋಟೆಲ್ ನಲ್ಲಿ ಊಟಕ್ಕೆ ಹೋಗಿದ್ದಾಗ ದರ್ಶನ್ ಅಭಿಮಾನಿಗಳೇ ಬಂದು ಬಂದು ಕಿರುಚಾಡಿ ಗಲಾಟೆ ಮಾಡಿ, ಹಲ್ಲೆಗೆ ಮುಂದಾಗಿದ್ದರು ಎಂದಿದ್ದ ಪ್ರಥಮ್​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ  ನಟ ದರ್ಶನ್ ಅವರ 60 ಅಭಿಮಾನಿಗಳ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ  ಲಾಯರ್​ ಜಗದೀಶ್​ ಗುಡುಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ. 

ಜಗದೀಶ್​ಗೆ ದರ್ಶನ್​ ಆಪರೇಷನ್​ದ್ದೇ ಚಿಂತೆ! ಲಕ್ವ ಹೊಡೆದ್ರೆ ಏನ್​ ಗತಿ? ವಿಡಿಯೋದಲ್ಲಿ ಲಾಯರ್​ ಹೇಳಿದ್ದೇನು?

Tap to resize

Latest Videos

undefined

ಲಾಯರ್​ ಜಗದೀಶ್​ ಅವರ ಮಾತಲ್ಲೇ ಹೇಳೋದಾದ್ರೆ... ಲೋ ದರ್ಶನ್​ ಗೂಂಡಾಗಳಾ ಬಾಲ ಬಿಚ್ಚುತ್ತೀರಾ? ಪೊಲೀಸರ ಕೈಯಲ್ಲಿ ಲಾಠಿ ಏಟು ತೋರಿಸ್ಲಾ? ಅದರ ಬಿಸಿ ಮುಟ್ಟಿಸ್ತೇನೆ ನಿಮಗೆಲ್ಲಾ, ಆಗ ತಿಳಿಯತ್ತೆ. ಡ್ರಗ್​ ಪೆಡ್ಲರ್​ಗಳಾ, ಪುಡಾರಿಗಳಾ? ನಿಮ್​ ಬಾಸ್​ ಏನು ಕರ್ನಾಟಕದ ಡಾನಾ ಅಥವಾ ಬೆಂಗಳೂರಿನ ಡಾನಾ? ನಿಮ್ಮನ್ನು ಹೀಗೆ ಬಿಟ್ರೆ ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಿ ಬಿಡ್ತೀರಾ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. 
  
ಅಷ್ಟಕ್ಕೂ,  ಲಾಯರ್‌ ಜಗದೀಶ್‌ ನಟ ದರ್ಶನ್​ ವಿರುದ್ಧ ಇದಾಗಲೇ ಹಲವಾರು ವಿಡಿಯೋ ಮಾಡಿದ್ದಾರೆ.  ದರ್ಶನ್​ ಅವರನ್ನು ಬೈಯುತ್ತಲೇ ಫೇಮಸ್​ ಆದವರು ಜಗದೀಶ್​. ಇದೇ ಕಾರಣಕ್ಕೆ ಜಗದೀಶ್​ ಮತ್ತು ದರ್ಶನ್​ ಹಾಗೂ ಅವರ ಅಭಿಮಾನಿಗಳ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ.  ಅಷ್ಟಕ್ಕೂ ಈಗ ದರ್ಶನ್​ ವಿರುದ್ಧ ಇನ್ನೊಂದು ವಿಡಿಯೋ ಶೇರ್​ ಮಾಡಿರುವ ಲಾಯರ್​ ಜಗದೀಶ್​ ಅವರಿಗೆ ದರ್ಶನ್​ ಆಪರೇಷನ್​ ಚಿಂತೆ ಶುರುವಾಗಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟ ದರ್ಶನ್ ಜೈಲು ಸೇರಿದ್ದರು. ಜೈಲಿನಲ್ಲಿ ತಿಂಗಳು ಕಳೆಯುತ್ತಾ ಹೋಗುತ್ತಿತ್ತು. ಆದರೆ ಹೊರ ಬರು ಸಾಧ್ಯತೆಗಳು ಕಂಡಿರಲಿಲ್ಲ. ಜಾಮೀನು ಅರ್ಜಿ ಮುಂದೂಡುತ್ತಲೇ ಇದ್ದಾಗ ದರ್ಶನ್ ಆರೋಗ್ಯದಲ್ಲಿ ಏರುಪೇರು ಕಂಡು ಬಂತು. ಬೆನ್ನು ನೋವು ಹೆಚ್ಚಾಗಿ ಸರ್ಜರಿ ಮಾಡುವ ಹಂತಕ್ಕೆ ಹೋಗಿತ್ತು. ಹೀಗಾಗಿ ಕೋರ್ಟ್‌ ದರ್ಶನ್​ ಅವರಿಗೆ 6 ತಿಂಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಅದರ ಬೆನ್ನಲ್ಲೇ ಹಲವಾರು ವಿಡಿಯೋ ಮಾಡಿ ತಮ್ಮ ಕೋಪ ತೋರಿಸುತ್ತಿದ್ದಾರೆ ಜಗದೀಶ್​. ಸುದ್ದಿ ಚಾವಡಿ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದೆ.

ನೋಡಮ್ಮಾ ವಿಜಯಲಕ್ಷ್ಮಿ, ನಿನ್‌ ಗಂಡ ದರ್ಶನ್‌ ನನ್ನ ಹೆಂಡ್ತಿ ವಿಷ್ಯಕ್ಕೆ ಬಂದ್ರೆ... ವಿಡಿಯೋದಲ್ಲಿ ಜಗದೀಶ್‌ ವಾರ್ನಿಂಗ್‌!

click me!