ಭೂಮಿ ಮೇಲೆ ಅನೇಕ ವಿಸ್ಮಯ ಪ್ರದೇಶಗಳಿವೆ. ಸೂರ್ಯ ಕಾಣದ, ಬೆಳಕು ಹರಿಯದ, ಬಿಸಿಲು ಹೆಚ್ಚಿರುವ ಊರಿನಂತೆ ಮಳೆಯೇ ಆಗದ ಜಾಗವೊಂದಿದೆ. ಅಲ್ಲಿ ಈವರೆಗೂ ಹನಿ ಮಳೆ ಬಿದ್ದಿಲ್ಲ.
ಮುಂಗಾರು (Monsoon) ಬರ್ತಿದ್ದಂತೆ ಭೂಮಿಗೆ ಮಳೆ (rain) ಹನಿಯ ಸ್ಪರ್ಶವಾಗುತ್ತದೆ. ಬಿಸಿ ಬೇಸಿಗೆಯಲ್ಲಿ ಬೆವರಿ ಬೆಂಡಾಗಿದ್ದ ಜನರು, ಮೊದಲ ಮಳೆಯಲ್ಲಿ ಮಿಂದೇಳುತ್ತಾರೆ. ರೈತರು ಚುರುಕಾಗ್ತಾರೆ. ಕೆಲವೊಮ್ಮೆ ನಿರೀಕ್ಷೆಗಿಂತ ಹೆಚ್ಚಾಗುವ ಮಳೆ, ಸಾಕಷ್ಟು ಸಾವು- ನೋವಿಗೆ ಕಾರಣವಾಗೋದಿದೆ. ನಮ್ಮ ಪ್ರಕೃತಿ ರಹಸ್ಯಗಳ ಗೂಡು. ಯಾವಾಗ ಏನಾಗುತ್ತೆ ಹೇಳೋದು ಕಷ್ಟ. ಹಾಗೆಯೇ ಪ್ರಪಂಚದಲ್ಲಿ ಸಾಕಷ್ಟು ವಿಸ್ಮಯ ಪ್ರದೇಶಗಳಿವೆ. ಒಂದ್ಕಡೆ ಅತೀ ಹೆಚ್ಚು ಮಳೆಯಾದ್ರೆ ಮತ್ತೆ ಕೆಲವು ಕಡೆ ಅತೀ ಕಡಿಮೆ ಮಳೆಯಾಗುತ್ತದೆ. ನಾವೆಲ್ಲ ವರ್ಷಕ್ಕೆ ಮೂರ್ನಾಲ್ಕು ತಿಂಗಳು ಮಳೆಯನ್ನು ನೋಡ್ತೇವೆ. ಈಗ ಕಾಲವಲ್ಲದ ಕಾಲದಲ್ಲೂ ಮಳೆ ಬೀಳ್ತಿದೆ. ಆದ್ರೆ ಮಳೆಯೇ ಆಗದ ಊರೊಂದು ನಮ್ಮಲ್ಲಿದೆ ಅಂದ್ರೆ ನೀವು ನಂಬ್ತೀರಾ? ನಂಬ್ಲೇಬೇಕು. ಆ ಊರಿನಲ್ಲಿ ಒಂದು ಹನಿ ಮಳೆಯೂ ಈವರೆಗೆ ಬಿದ್ದಿಲ್ಲ.
ಮಳೆಯೇ ಆಗದ ಊರು ಯಾವುದು? : ಇದು ಮರುಭೂಮಿ (desert) ಯಲ್ಲ. ಜನರು ವಾಸವಾಗಿರುವ ಹಳ್ಳಿ. ಅದ್ರ ಹೆಸರು ಅಲ್-ಹುತೈಬ್ (Al Hutaib.) ಇದು ಯೆಮನ್ (Yemen)ನ ರಾಜಧಾನಿ ಸನಾದಿಂದ ಪಶ್ಚಿಮಕ್ಕೆ ಮನಾಖ್ ನ ಹರಾಜ್ ಪ್ರದೇಶದಲ್ಲಿದೆ. ಪರ್ವತಗಳ ತುದಿಯಲ್ಲಿಯೂ ಇಲ್ಲಿ ಅನೇಕ ಸುಂದರವಾದ ಮನೆಗಳಿವೆ. ಮಳೆ ನೋಡುವ ಭಾಗ್ಯ ಮಾತ್ರ ಇಲ್ಲಿನವರಿಗಿಲ್ಲ.
undefined
ವಿದೇಶಿಗರಿಗೂ ಅಣ್ಣಮ್ಮದೇವಿಯ ಡಾನ್ಸ್ ಹೇಳಿಕೊಟ್ಟ ಡಾ.ಬ್ರೊ: ಕತ್ತೆ ಕಿರುಬವನ್ನೂ ಬಿಟ್ಟಿಲ್ಲ ಗಗನ್!
ಇಲ್ಲಿ ಯಾಕೆ ಮಳೆ ಆಗಲ್ಲ? : ಮಳೆ ಇಲ್ಲದೆ ಇರಲು ಸಾಧ್ಯವೇ ಇಲ್ಲ ಅಂತ ನಾವೆಲ್ಲ ಭಾವಿಸಿದ್ದೇವೆ. ಮಳೆಯಾಗಿಲ್ಲ ಅಂದ್ರೆ ಬೆಳೆಯಿಲ್ಲ, ನೀರಿಲ್ಲ. ಇದ್ರಿಂದ ಬರಗಾಲ ನಿಶ್ಚಿತ. ಆದ್ರೆ ಅಲ್ ಹುತೈಬ್ ಭಿನ್ನವಾಗಿದೆ. ಅಲ್-ಹುತೈಬ್ ಗ್ರಾಮವು ಭೂಮಿಯ ಮೇಲ್ಮೈಯಿಂದ 3,200 ಮೀಟರ್ ಎತ್ತರದಲ್ಲಿದೆ. ಹಳ್ಳಿಯ ಸುತ್ತಲಿನ ವಾತಾವರಣ ಬೆಚ್ಚಗಿರುತ್ತದೆ. ಚಳಿಗಾಲದಲ್ಲಿ ಮುಂಜಾನೆ ತುಂಬಾ ಚಳಿಯ ವಾತಾವರಣವಿದ್ದರೂ, ಸಮಯ ಸರಿದಂತೆ ಬಿಸಿಲಿನ ತಾಪಕ್ಕೆ ಜನರು ಬೆವರುತ್ತಾರೆ.
ಇಲ್ಲಿ ಮಳೆಯಾಗದಿರಲು ಮುಖ್ಯ ಕಾರಣ, ಗ್ರಾಮ ಎತ್ತರ ಪ್ರದೇಶದಲ್ಲಿರುವುದು. ಗ್ರಾಮವು 3200 ಮೀಟರ್ ಎತ್ತರದಲ್ಲಿದೆ. ಆದರೆ 2000 ಮೀಟರ್ ಎತ್ತರದಲ್ಲಿ ಮೋಡಗಳು ರೂಪುಗೊಳ್ಳುತ್ತವೆ. ಅಂದರೆ ಈ ಹಳ್ಳಿಯ ಕೆಳಗೆ ಮೋಡಗಳು ರೂಪುಗೊಳ್ಳುತ್ತವೆ. ಇದೇ ಕಾರಣಕ್ಕೆ ಇಲ್ಲಿನ ಜನರು ಮಳೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಊರಿನ ಕೆಳಗೆ ಮೋಡ ಕಾಣುವುದರಿಂದ ಅಲ್ಲಿನ ಜನರು, ತಾವು ಸ್ವರ್ಗದಲ್ಲಿ ವಾಸವಾಗಿದ್ದೇವೆಂದು ಭಾವಿಸುತ್ತಾರೆ. ಅಲ್-ಹುತೈಬ್ ಗ್ರಾಮವನ್ನು ನೋಡಲು ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಬರುತ್ತಾರೆ. ಈ ಗ್ರಾಮದಲ್ಲಿ ನಿರ್ಮಿಸಲಾದ ಮನೆಗಳ ವಿನ್ಯಾಸ ಮತ್ತು ರಚನೆಯು ಜನರನ್ನು ಆಕರ್ಷಿಸುತ್ತದೆ. ಇಲ್ಲಿನ ಜನರು ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡ್ತಾರೆ.
ಗೋವಾ ಬಿಟ್ಟು ಹನಿಮೂನಿಗೆ ಭಾರತದಲ್ಲಿ ಬೆಸ್ಟ್ ಬೀಚ್ ಇವು!
ಇಲ್ಲಿ ವಾಸವಾಗಿದೆ ಯೆಮೆನ್ ಸಮುದಾಯ : ಗ್ರಾಮವು ಈಗ ಅಲ್-ಬೊಹ್ರಾ ಅಥವಾ ಅಲ್-ಮುಕ್ರಾಮ ಜನರ ಭದ್ರಕೋಟೆಯಾಗಿದೆ. ಇವುಗಳನ್ನು ಯೆಮೆನ್ ಸಮುದಾಯ ಎಂದು ಕರೆಯಲಾಗುತ್ತದೆ. ಯೆಮೆನ್ ಸಮುದಾಯವು ಮುಂಬೈನಲ್ಲಿ ವಾಸಿಸುತ್ತಿದ್ದ ಮೊಹಮ್ಮದ್ ಬುರ್ಹಾನುದ್ದೀನ್ ನೇತೃತ್ವದ ಇಸ್ಮಾಯಿಲಿ (ಮುಸ್ಲಿಂ) ಪಂಥದಿಂದ ಬಂದಿದೆ. ಮೊಹಮ್ಮದ್ ಬುರ್ಹಾನುದ್ದೀನ್ 2014ರಲ್ಲಿ ನಿಧನರಾಗಿದ್ದಾರೆ. ಅವರು ತಮ್ಮ ನಿಧನದವರೆಗೂ ಪ್ರತಿ ಮೂರು ವರ್ಷಗಳಿಗೊಮ್ಮೆ ಈ ಗ್ರಾಮಕ್ಕೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.