ಮಾನ್ವಿ: ಎಸ್‌ಸಿ ಮೀಸಲು ಹಣ ದುರುಪಯೋಗ ಆರೋಪ, ಅಧಿಕಾರಿಗಳ ವಿರುದ್ಡ ಬಿಜೆಪಿ ಕಾರ್ಯಕರ್ತರು ಜಟಾಪಟಿ !

By Ravi Janekal  |  First Published Nov 19, 2024, 1:21 PM IST

ರಸ್ತೆ ಕಾಮಗಾರಿಯಲ್ಲಿ ಎಸ್‌ಸಿ ಸಮುದಾಯದ ಮೀಸಲು ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಸಂಬಂಧ ಬಿಜೆಪಿ ಕಾರ್ಯಕರ್ತರು ಅಧಿಕಾರಿಗಳು, ಗುತ್ತಿಗೆದಾರರ ನಡುವೆ ಜಟಾಪಟಿ ನಡೆದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಬಸವ ವೃತ್ತದ ಬಳಿ ನಡೆದಿದೆ.


ರಾಯಚೂರು (ನ.19): ರಸ್ತೆ ಕಾಮಗಾರಿಯಲ್ಲಿ ಎಸ್‌ಸಿ ಸಮುದಾಯದ ಮೀಸಲು ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಸಂಬಂಧ ಬಿಜೆಪಿ ಕಾರ್ಯಕರ್ತರು ಅಧಿಕಾರಿಗಳು, ಗುತ್ತಿಗೆದಾರರ ನಡುವೆ ಜಟಾಪಟಿ ನಡೆದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಬಸವ ವೃತ್ತದ ಬಳಿ ನಡೆದಿದೆ.

Tap to resize

Latest Videos

undefined

ಮಾನ್ವಿ ಪಟ್ಟಣದ ಬಸವೇಶ್ವರ ವೃತ್ತದಿಂದ ಪುರಸಭೆ ಕಾರ್ಯಾಲಯದವರೆಗೆ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ಕಾಮಗಾರಿ ನಡೆದಿದೆ. ಆದರೆ ಈ ಅನುದಾನ ಎಸ್‌ಸಿ ಸಮುದಾಯಕ್ಕೆ ಮೀಸಲಾಗಿದ್ದು ಇದನ್ನುಅಧಿಕಾರ ದುರುಪಯೋಗ ಮಾಡಿಕೊಂಡು ಬೇರೆಯವರಿಗೆ ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಮಾನ್ವಿ ಪಟ್ಟಣ ಬಿಜೆಪಿ ಘಟಕದ ಕಾರ್ಯಕರ್ತರು ಹಿಂದೆಯೇ ದೂರು ನೀಡಿದ್ದರೂ  PWD ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ನಿನ್ನೆ ರಾತ್ರಿ ಕಾಮಗಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸ್ಥಳದಲ್ಲಿ ಎರಡು ಗುಂಪುಗಳಿಂದ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಘಟನೆ ಮಾಹಿತಿ ಸ್ಥಳಕ್ಕೆ ಬಂದ ಮಾನ್ವಿ ಇನ್ಸ್ ಪೆಕ್ಟರ್ ವೀರಭದ್ರಯ್ಯ ಹಿರೇಮಠ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ಆದರೆ ಪಟ್ಟು ಬಿಡದ ಬಿಜೆಪಿ ಕಾರ್ಯಕರ್ತರು.

ಎಸ್‌ಸಿಗೆ ಮೀಸಲಾದ ಹಣ ಬೇರೆಯವರು ಹೇಗೆ ಮಾಡಿದ್ದು ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ತಡರಾತ್ರಿವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!