ಡಾಕ್ಟರ್ - ಆಕ್ಟರ್ ಲೈಫ್‌ ಜರ್ನಿ ಶುರು; ಲಗ್ನಪತ್ರಿಕೆ ಬರೆಸೋ ಶಾಸ್ತ್ರ ಜೋರು!

Published : Nov 19, 2024, 01:38 PM IST
ಡಾಕ್ಟರ್ - ಆಕ್ಟರ್ ಲೈಫ್‌ ಜರ್ನಿ ಶುರು; ಲಗ್ನಪತ್ರಿಕೆ ಬರೆಸೋ ಶಾಸ್ತ್ರ ಜೋರು!

ಸಾರಾಂಶ

ಮೆಚ್ಚಿದ ಹುಡುಗಿಗೆ ನಿಶ್ಚಿತಾರ್ಥ ರಿಂಗ್ ತೊಡಿಸಿದ ಧನಂಜಯ್. ಮನೆಯಲ್ಲಿ ನಡೆಯಿತ್ತು ನಿಶ್ಚಿತಾರ್ಥ & ಲಗ್ನಪತ್ರಿಕೆ ಬರೆಸೋ ಶಾಸ್ತ್ರ.  

ಸ್ಯಾಂಡಲ್​ವುಡ್​ನ ಮೋಸ್ಟ್ ಎಲಿಜೆಬಲ್ ಬ್ಯಾಚಲರ್ ಡಾಲಿ ಧನಂಜಯ್ ಮದುವೆಯಾಗುತ್ತಿರುವ ಮ್ಯಾಟರ್ ನಿಮಗೆ ಗೊತ್ತೇ ಇದೆ. ಫೆಬ್ರವರಿಯಲ್ಲಿ ಡಾಲಿ ಕಲ್ಯಾಣ ನಡೆಯಲಿದ್ದು, ತಮ್ಮ ಮನೆಯಲ್ಲಿ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೆಚ್ಚಿದ ಹುಡುಗಿಗೆ ಎಂಗೇಜ್​ಮೆಂಟ್ ರಿಂಗ್ ಹಾಕಿ ಮೈ ಮ್ಯಾರೇಜ್ ಈಸ್ ಫಿಕ್ಸ್ಡ್ ಅಂದಿದ್ದಾರೆ. ಯೆಸ್ ದೀಪಾವಳಿ ಹಬ್ಬದ ದಿನ ತನ್ನ ಬಾಳಲಿ ದೀಪ ಹಚ್ಚೋಕೆ ಬರಲಿರೋ ಹುಡುಗಿನ ಪರಿಚಯ ಮಾಡಿಸಿದ್ದರು ಡಾಲಿ. ಮೈಸೂರಿನಲ್ಲಿ ವೈದ್ಯೆಯಾಗಿರೋ ಧನ್ಯತಾ ಜೊತೆ ಮದುವೆಯಾಗ್ತೀದ್ದೀನಿ ಅಂತ ಗುಡ್ ನ್ಯೂಸ್ ಕೊಟ್ಟಿದ್ದ ಧನಂಜಯ್, ಮದುವೆಗೆ ಕರೀತೀನಿ ಖಂಡಿತಾ ಬರಬೇಕು ಅಂದಿದ್ದರು.

ಫೆಬ್ರುವರಿ 16ಕ್ಕೆ ಡಾಲಿ ಕಲ್ಯಾಣ ನಡೆಯಲಿದೆ. ಸೆಲೆಬ್ರಿಟೀಸ್ ಜೊತೆಗೆ ಅಭಿಮಾನಿಗಳನ್ನೂ ಕರೆಸಿ ಮದ್ವೆಯೂಟ ಹಾಕಿಸಬೇಕು ಅಂತ ಡಾಲಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿ ನಡೀತಾ ಇವೆ. ಇನ್ನೊಂದು ಕಡೆ ಧನಂಜಯ್ ಮನೆಯಲ್ಲಿ ಮದುವೆ ಶಾಸ್ತ್ರಗಳು ಪ್ರಾರಂಭ ಆಗಿವೆ. ಧನಂಜಯ್ ಹುಟ್ಟೂರು ಅರಸಿಕೆರೆಯ ಕಾಳನಹಳ್ಳಿಯಲ್ಲಿ ಧನು-ಧನ್ಯತಾ ನಿಶ್ಚಿತಾರ್ಥ ನೆರವೇರಿದೆ. ಮನ ಮೆಚ್ಚಿದ ಹುಡುಗಿಯ ಬೆರಳಿಗೆ ರಿಂಗ್ ತೊಡಸಿ, ಇನ್ಮುಂದೆ ಇವ್ರು ನಮ್ಮವರು ಅಂತ ಡಾಲಿ ಆಫೀಷಿಯಲ್ ಆಗಿ ಎಂಗೇಜ್ ಆಗಿದ್ದಾರೆ.

ಡ್ರೆಸ್ಸಿಂಗ್‌ ರೂಮ್‌ನಲ್ಲಿ ಮಹಿಳಾ ಸ್ಪರ್ಧಿಗಳು ರೆಡಿಯಾಗುತ್ತಿರುವ ಫೋಟೋ ಲೀಕ್

ಇನ್ನೂ ನಿಶ್ಚಿತಾರ್ಥದ ಜೊತೆಗೆ ಲಗ್ನಪತ್ರಿಕೆ ಬರೆಸೋ ಶಾಸ್ತ್ರ ಕೂಡ ಮಾಡಲಾಗಿದೆ. ಧನಂಜಯ್ ಮತ್ತು ಧನ್ಯತಾ ಮನೆಮಂದಿ, ಕುಟುಂಬದ ಅತ್ಯಾಪ್ತರು ಮಾತ್ರ ಈ ಸಿಂಪಲ್ ಸಮಾರಂಭದಲ್ಲಿ ಭಾಗಿಯಾಗಿ ಯುವಜೋಡಿಯನ್ನು ಹರಸಿದ್ದಾರೆ. ಡಾಲಿ ಬಡವರ ಮನೆ ಹುಡುಗ. ಒಂದೊಂದೇ ಮೆಟ್ಟಿಲು ಹತ್ತುತ್ತಾ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಈ ಜರ್ನಿಯಲ್ಲಿ ಡಾಲಿ ಹಲವು ನೋವು , ಅವಮಾನ ಅನುಭವಿಸಿದ್ದಾರೆ. ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯಾ ಅಂತ ಹೇಳ್ತನೇ ಇವತ್ತು ಈ ಹಂತಕ್ಕೆ ಬೆಳೆದು ನಿಂತಿದ್ದಾರೆ. ಡಾಲಿ ಮನಮೆಚ್ಚಿ ಕೈ ಹಿಡಿತಾ ಇರೋ ಧನ್ಯತಾ ಕೂಡ ಮಿಡಲ್ ಕ್ಲಾಸ್ ಫ್ಯಾಮಿಲಿ ಇಂದ ಬಂದವರು. ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿ, ಕಷ್ಟ ಪಟ್ಟು ಓದಿ ಡಾಕ್ಟರ್ ಆಗಿದ್ದಾರೆ. ಕೆಲ ವರ್ಷಗಳಿಂದ ಸ್ನೇಹಿತೆಯಾಗಿದ್ದ ಧನ್ಯತಾರ ಅಭಿರುಚಿ ತನ್ನ ರೀತಿನೇ ಅನ್ನೋದನ್ನ ಅರಿತಿರೋ ಧನಂಜಯ್ ಆಕೆ ಜೊತೆಗೆ ಮುಂದಿನ ಜೀವನ ಅಂತ ಫಿಕ್ಸ್ ಆಗಿದ್ದಾರೆ.

ಸಾವು ಬದುಕಿನ ನಡುವೆ 'ಕಾಟೇರ' ಮಾ.ರೋಹಿತ್ ಹೋರಾಟ

ಧನಂಜಯ್-ಧನ್ಯತಾ ನಿಶ್ಚಿತಾರ್ಥ ನೆರವೇರಿದ್ದು, ಮದುವೆ ಪತ್ರಿಕೆ ಕೂಡ ಸಿದ್ದವಾಗ್ತಾ ಇದೆ. ಇನ್ನೇನು ಆಮಂತ್ರಣ ಪತ್ರಿಕೆಯನ್ನು ಸೌತ್ ಸಿನಿಲೋಕದ ಸಕಲ ಸೆಲೆಬ್ರಿಟಿಗಳಿಗೂ ತಲುಪಿಸೋಕೆ ಡಾಲಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಫೆಬ್ರವರಿ 16ಕ್ಕೆ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ಧನಂಜಯ್ ಮದುವೆ ನಡೆಯಲಿದ್ದು, ಡಾಲಿ  ಮದುಮಗ ಆಗಲಿದ್ದಾರೆ. ಸದ್ಯ ಎಂಗೇಜ್​ಮೆಂಟ್ ಮುಗಿಸಿರೋ ಈ ಜೋಡಿಗೆ  ಎಲ್ಲರೂ ಮನದುಂಬಿ ವಿಶ್ ಮಾಡ್ತಾ ಇದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?