ಕೊರೋನಾಗಿಂತ ಡೇಂಜರ್ ನಿಪಾ, ಮರಣ ಪ್ರಮಾಣವೂ ಅತೀ ಹೆಚ್ಚು!

First Published | Sep 9, 2021, 5:00 PM IST

ಕೋವಿಡ್‌ ಅಲೆ ನಿಯಂತ್ರಿಸಲಾಗದೆ ಹೆಣಗಾಡುತ್ತಿರುವ ಕೇರಳದಲ್ಲಿ ಈಗ ‘ನಿಪಾ ವೈರ​ಸ್‌’ ಹಾವಳಿ ಆರಂಭ​ವಾ​ಗಿದೆ. ರಾಜ್ಯದಲ್ಲಿ ಹೈಅಲರ್ಟ್‌ ಘೋಷಿಸಲಾಗಿದ್ದು, ಸೋಂಕು ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಪ್ರಕಟಿಸಲಾಗಿದೆ. ಕೊರೋನಾ ಬೆನ್ನಲ್ಲೇ ಆವರಿಸಿರುವ ಈ ಹೊಸ ವೈರಸ್ ಜನರಲ್ಲಿ ಆತಂಕ ಸೃಷ್ಟಿಸಿದೆ. ಇನ್ನು ಕೊರೋನಕ್ಕಿಂತ ನಿಫಾ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಡಬ್ಲ್ಯುಎಚ್‌ಒ ಪ್ರಕಾರ, ಕೋವಿಡ್‌ ಸಾವಿನ ಪ್ರಮಾಣ 1% ಕ್ಕೆ ಹೋಲಿಸಿದರೆ ನಿಫಾ ಮರಣ ಪ್ರಮಾಣವು 40 ರಿಂದ 75% ರಷ್ಟಿದೆ. 

ಏನಿದು ನಿಪಾ ವೈರಸ್‌?

ಇದೊಂದು ಪ್ರಾಣಿಗಳಿಂದ ಮಾನವರಿಗೆ ಹಬ್ಬುವ ವೈರಸ್‌. ವಿಶೇಷವಾಗಿ ಫ್ರೂಟ್‌ ಬ್ಯಾಟ್‌ (ಬಾವಲಿ)ಗಳಿಂದ ಮಾನವರಿಗೆ ಸೋಂಕು ಹಬ್ಬುತ್ತದೆ. ಸಾಮಾನ್ಯವಾಗಿ ಬಾವಲಿಗಳಿಂದ ಹಂದಿ, ನಾಯಿ, ಕುದುರೆ, ಮನುಷ್ಯರಿಗೆ ಸೋಂಕು ಹಬ್ಬುತ್ತದೆ. ಸೋಂಕಿಗೆ ತುತ್ತಾದ ಬಾವಲಿಗಳು ತಿಂದು ಹಾಕಿದ ಹಣ್ಣನ್ನು ಅನ್ಯರು ಸೇವಿ​ಸಿ​ದಾಗ ಸೋಂಕು ಹರಡುತ್ತದೆ. ಹೀಗೆ ಒಬ್ಬ ಮನುಷ್ಯನಿಗೆ ಸೋಂಕು ಕಾಣಿಸಿಕೊಂಡರೆ ಅವರಿಂದ ಇನ್ನೊಬ್ಬರಿಗೆ ಜೊಲ್ಲು, ಉಗು​ಳಿನ ಮೂಲಕ ಪ್ರಸರಣವಾಗುತ್ತದೆ.

ಈ ರೋಗವು 1999 ರಲ್ಲಿ ಮಲೇಷ್ಯಾದಲ್ಲಿ ಮೊದಲ ಬಾರಿ ಬಾವಲಿಗಳಿಂದ ಹರಡಿತು. ಇಲ್ಲಿ ರೈತರು ಹಂದಿಗಳಿಂದ ಸೋಂಕಿಗೆ ಒಳಗಾಗಿದ್ದರು. ಅವರಲ್ಲಿ ಮೆದುಳು ಜ್ವರ, ವಾಂತಿ ಮತ್ತು ಊತದಂತಹ ಲಕ್ಷಣಗಳು ಕಂಡುಬಂದಿತ್ತು. ಇದು 45 ದಿನಗಳವರೆಗೆ ಪರಿಸರದಲ್ಲಿ ಉಳಿಯಬಹುದು. ಇದರರ್ಥ ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುವ ಮೊದಲು ಒಂದು ತಿಂಗಳಿಗಿಂತ ಹಮೊದಲೇ ಇದು ಹರಡಬಹುದು.

Latest Videos


ಸೋಂಕಿನ ಲಕ್ಷಣ

ಮೆದುಳು ಜ್ವರ, ನಿರಂತರ ಕಫದ ಜೊತೆಗೆ ಜ್ವರ, ಉಸಿರಾಡಲು ಕಷ್ಟ. ತೀವ್ರ ಉಸಿರಾಟದ ತೊಂದರೆ, ತಲೆ ನೋವು, ಮೈಕೈ ನೋವು, ವಾಂತಿ, ಗಂಟಲು ಉರಿತ, ಮಂಪರು- ಇವು ಲಕ್ಷ​ಣ​ಗ​ಳು. ನಿಫಾ ವೈರಸ್‌ ಮರಣ ದರ ಶೇ.40-80%. ಆರ್‌ಟಿಪಿಸಿಆರ್‌ ಪರೀಕ್ಷೆ ಮೂಲಕ ರೋಗ ಪತ್ತೆ ಮಾಡಬಹುದು.

ಅವಧಿ

ಸಾಮಾನ್ಯವಾಗಿ 5-14 ದಿನಗಳ ಕಾಲ ಮನುಷ್ಯರ ದೇಹದಲ್ಲಿ ಸೋಂಕು ಇರುತ್ತದೆ. ಶೀಘ್ರ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ಅಪಾಯ ಇಲ್ಲ. ಇಲ್ಲದೇ ಹೋದಲ್ಲಿ ಸಾವಿನ ಸಾಧ್ಯತೆ ಇರುತ್ತದೆ.

ವೈರಸ್‌ನಿಂದ ರಕ್ಷಣೆ ಹೇಗೆ?

- ಸೋಂಕಿತ ಪ್ರಾಣಿಗಳಿಂದ ದೂರ ಇರುವುದು.

- ಆಗಾಗ ಸೋಪಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆಯುತ್ತಿರಬೇಕು.

- ಸಂಪರ್ಕ ಪತ್ತೆ, ಕ್ವಾರಂಟೈನ್‌ ಅತ್ಯಗತ್ಯ
 

ಲಸಿಕೆ ಇಲ್ಲ

ಇನ್ನು ಈ ನಿಫಾಗೆ ಈವರೆಗೆ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಸಿಕ್ಕಿಲ್ಲ. ಕೇವಲ ವೈದ್ಯರು ನಿಗಾ ವಹಿಸುತ್ತಾರೆ. ಇದನ್ನು ಕೇವಲ ತಡೆಗಟ್ಟಬಹುದಷ್ಟೇ. 
 

Nipah Virus

ಕೇರ​ಳ​ದಲ್ಲಿ ಮೊದ​ಲೇ​ನ​ಲ್ಲ:

ನಿಪಾ ವೈರಸ್‌ 1999ರಲ್ಲಿ ಮೊದಲ ಬಾರಿಗೆ ಮಲೇಷಿಯಾದಲ್ಲಿ ಕಾಣಿಸಿಕೊಂಡಿತ್ತು. ಆಗ 60 ಮಂದಿ ಸಾವನ್ನಪ್ಪಿದ್ದರು. ಭಾರತದಲ್ಲಿ ಮೊದಲು ಕಾಣಿಸಿಕೊಂಡಿದ್ದು 2001ರಲ್ಲಿ ಬಂಗಾ​ಳ​ದಲ್ಲಿ. ಆಗ 45 ಮಂದಿ ಮೃತಪಟ್ಟಿದ್ದರು. 2018ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಕಲ್ಲಿಕೋಟೆಯಲ್ಲೇ ನಿಪಾ ವೈರಸ್‌ ಕಾಣಿಸಿಕೊಂಡಿತ್ತು. 17 ಜನ ಸಾವ​ನ್ನ​ಪ್ಪಿ​ದ್ದರು. 2019ರಲ್ಲಿ ಕೊಚ್ಚಿ, ಎರ್ನಾಕುಲಂನಲ್ಲೂ ಸೋಂಕು ಪತ್ತೆಯಾಗಿತ್ತು.
 

nipah virus

ಸಿನಿಮಾ ಕೂಡ ಬಂದಿ​ತ್ತು:

2018ರಲ್ಲಿ ಕೇರ​ಳ​ದಲ್ಲಿ ನಿಪಾ ವೈರಸ್‌ ಕಾಣಿ​ಸಿ​ಕೊಂಡ ಹಿನ್ನೆ​ಲೆ​ಯಲ್ಲಿ ‘ವೈ​ರ​ಸ್‌’ ಎಂಬ ಮಲ​ಯಾಳಂ ಚಿತ್ರ 2019ರಲ್ಲಿ ನಿರ್ಮಾ​ಣ​ವಾಗಿ ತೆರೆಗೆ ಬಂದಿ​ತ್ತು.
 


ಮಿರರ್ ಪ್ರಕಟಿಸಿರುವ ವರದಿಯನ್ವಯ ಫೆಬ್ರವರಿಯಿಂದ, ಇಂತಹ ವರದಿಗಳು ಹೊರಹೊಮ್ಮಿವೆ, ಇದರಲ್ಲಿ ಇದು ವಿಶ್ವದಲ್ಲಿ ಹರಡುವ ಮುಂದಿನ ಸಾಂಕ್ರಾಮಿಕವಾಗಬಹುದು. ಇದು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಹೇಳುವಂತೆ, ಇದು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ.

click me!