ಮ್ಯೂಚುಯಲ್ ಫಂಡ್‌ಗಳು
ಕಳೆದ ಕೆಲವು ವರ್ಷಗಳಲ್ಲಿ ಹಣ ಹೂಡಿಕೆ ಮಾಡಲು, ಮ್ಯೂಚುಯಲ್ ಫಂಡ್ ಉತ್ತಮವಾಗಿದೆ.. AMFIಯ ಅಧಿಕೃತ ಮಾಹಿತಿ ಇದನ್ನು ದೃಢಪಡಿಸುತ್ತದೆ. ಪೊರ್ಟ್ ಫೋಲಿಯೊಗಳು ಮತ್ತು ಆಸ್ತಿಗಳ ಸಂಖ್ಯೆ (AUM) ಹೆಚ್ಚಾಗಿದೆ ಎಂದು ಮಾಹಿತಿ ತೋರಿಸುತ್ತದೆ.
ಮ್ಯೂಚುಯಲ್ ಫಂಡ್ ಹೂಡಿಕೆ
ಇಂದು ಮಾರುಕಟ್ಟೆಯಲ್ಲಿ ಸಾವಿರಾರು ಯೋಜನೆಗಳಿವೆ. ಅಪಾಯವನ್ನು ಅವಲಂಬಿಸಿ ಅಲ್ಪಾವಧಿ ಮತ್ತು ದೀರ್ಘಾವಧಿ ಹಣಕಾಸಿನ ಗುರಿಗಳಿಗಾಗಿ ಮ್ಯೂಚುಯಲ್ ಫಂಡ್‌ಗಳನ್ನು ಹೂಡಿಕೆದಾರರು ಆಯ್ಕೆ ಮಾಡುತ್ತಾರೆ. ಮ್ಯೂಚುಯಲ್ ಫಂಡ್ ಹೂಡಿಕೆ ಷೇರುಗಳಲ್ಲಿ ಹೂಡಲು ಅವಕಾಶ ನೀಡುತ್ತದೆ. ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಮ್ಯೂಚುಯಲ್ ಫಂಡ್ ಸಲಹೆಗಳು
ಷೇರುಪೇಟೆಗೆ ಸಂಬಂಧಿಸಿದ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದರೆ, PPF, NPS, FDಗಳಂತಹ ಸಾಂಪ್ರದಾಯಿಕ ಉಳಿತಾಯ ಯೋಜನೆಗಳಿಗಿಂತ ಮ್ಯೂಚುಯಲ್ ಫಂಡ್ ಹೂಡಿಕೆ ಹೆಚ್ಚು ಲಾಭ ತರುತ್ತದೆ.
ಇಕ್ವಿಟಿ ಫಂಡ್‌ಗಳು
ಮ್ಯೂಚುಯಲ್ ಫಂಡ್‌ಗಳಲ್ಲಿ ಕೇವಲ 500 ರೂ.ಗಳಿಂದ ಹೂಡಿಕೆ ಆರಂಭಿಸಬಹುದು. ಆದಾಯ ಹೆಚ್ಚಿದಂತೆ ಹೂಡಿಕೆಯನ್ನು ಹೆಚ್ಚಿಸಬಹುದು. ದೀರ್ಘಾವಧಿಯಲ್ಲಿ ಉತ್ತಮ ಲಾಭ ಗಳಿಸಬಹುದು. ಉದಾಹರಣೆಗೆ, ಒಂದು ಕೋಟಿ ರೂ. ಗಳಿಸಲು ಉತ್ತಮ ಇಕ್ವಿಟಿ ಫಂಡ್‌ಗಳನ್ನು ಆಯ್ಕೆ ಮಾಡಿ, ಅವುಗಳ ಹಿಂದಿನ ಕಾರ್ಯಕ್ಷಮತೆಯನ್ನು ಪರಿಶೀಲಿಸಬೇಕು.
15-15-15 ಹೂಡಿಕೆ ನಿಯಮ
ಇಕ್ವಿಟಿ ಫಂಡ್‌ಗಳಲ್ಲಿ15% ವಾರ್ಷಿಕ ಲಾಭ ಸಿಗುತ್ತದೆ ಎಂದು ಭಾವಿಸಿದರೆ, 1 ಕೋಟಿ ರೂ. ಗುರಿ ತಲುಪಲು 15 ವರ್ಷಗಳವರೆಗೆ SIP ಮೂಲಕ ತಿಂಗಳಿಗೆ 15,000ರೂ. ಹೂಡಬೇಕು. ಇದನ್ನು 15-15-15 ಫಾರ್ಮುಲಾ ಎನ್ನುತ್ತಾರೆ.
15-15-15 SIP ಹೂಡಿಕೆ ಸೂತ್ರ
15 ವರ್ಷಗಳ ಕಾಲ ತಿಂಗಳಿಗೆ 15,000ರೂ. ಹೂಡಿ 1 ಕೋಟಿ ರೂ. ಗಳಿಸಿದ ನಂತರ, ಮುಂದಿನ 15 ವರ್ಷಗಳವರೆಗೆ ಹೂಡಿಕೆ ಮುಂದುವರಿಸಬಹುದು. ಆಗ 1 ಕೋಟಿ ರೂ. 10 ಕೋಟಿ ರೂ. ಆಗುತ್ತದೆ.15x15x15 ನಿಯಮ ಬಳಸಿ ನೀವೂ ಕೋಟ್ಯಾಧಿಪತಿಯಾಗಬಹುದು. ಅದೂ ಮುಂದಿನ 15 ವರ್ಷಗಳಲ್ಲಿ!