ಮುಸ್ಲಿಂ ಗುತ್ತಿಗೆದಾರರ ಕಾಮಗಾರಿ ಮೀಸಲಾತಿ ಬಗ್ಗೆ ಇನ್ನೂ ನಿರ್ಣಯ ಮಾಡಿಲ್ಲ: ಸಚಿವ ಎಚ್.ಕೆ. ಪಾಟೀಲ

By Kannadaprabha News  |  First Published Nov 14, 2024, 12:11 PM IST

ಕೇವಲ ಮುಸ್ಲಿಂ ಸಮುದಾಯದಿಂದ ಮಾತ್ರವಲ್ಲ, ಬೇರೆ ಸಮುದಾಯದಿಂದಲೂ ಬೇಡಿಕೆ ಇವೆ. ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಎಸ್ಸಿ-ಎಸ್ಟಿ ಅವರಿಗೆ ಮೀಸಲಾತಿ ಕೊಡಬೇಕು ಅಂತಾ ಸರ್ಕಾರದ ನಿಲುವಿತ್ತು, ಕೊಟ್ಟಿದ್ದೀವಿ, ಒಂದು ಕೋಟಿ ರುಪಾಯಿವರೆಗಿನ ಕಾಮಗಾರಿಗೆ ರಿಸರ್ವೇಶನ್ ಮಾಡಲಾಗಿದೆ. ಅದೇ ಮಾದರಿಯಲ್ಲಿ ಮುಸ್ಲಿಂ ಮೀಸಲಾತಿಗೆ ಬಗ್ಗೆ ಬೇಡಿಕೆ ಬಂದಿದೆ, ಈ ಬಗ್ಗೆ ಸರ್ಕಾರ ನಿರ್ಣಯ ಮಾಡಿಲ್ಲ: ಕಾನೂನು ಸಚಿವ ಎಚ್.ಕೆ. ಪಾಟೀಲ 


ಗದಗ(ನ.14):  ಮುಸ್ಲಿಂ ಗುತ್ತಿಗೆದಾರರಿಗೆ ಸರ್ಕಾರಿ ಕಾಮಗಾರಿಯಲ್ಲಿ ಮೀಸಲಾತಿ ವಿಚಾರವಾಗಿ ಮನವಿಗಳು ಬಂದಿದೆ. ಆದರೆ ಈ ಬಗ್ಗೆ ಇನ್ನು ನಿರ್ಣಯ ಮಾಡಿಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಮುಸ್ಲಿಂ ಸಮುದಾಯದಿಂದ ಮಾತ್ರವಲ್ಲ, ಬೇರೆ ಸಮುದಾಯದಿಂದಲೂ ಬೇಡಿಕೆ ಇವೆ. ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಎಸ್ಸಿ-ಎಸ್ಟಿ ಅವರಿಗೆ ಮೀಸಲಾತಿ ಕೊಡಬೇಕು ಅಂತಾ ಸರ್ಕಾರದ ನಿಲುವಿತ್ತು, ಕೊಟ್ಟಿದ್ದೀವಿ, ಒಂದು ಕೋಟಿ ರುಪಾಯಿವರೆಗಿನ ಕಾಮಗಾರಿಗೆ ರಿಸರ್ವೇಶನ್ ಮಾಡಲಾಗಿದೆ. ಅದೇ ಮಾದರಿಯಲ್ಲಿ ಮುಸ್ಲಿಂ ಮೀಸಲಾತಿಗೆ ಬಗ್ಗೆ ಬೇಡಿಕೆ ಬಂದಿದೆ, ಈ ಬಗ್ಗೆ ಸರ್ಕಾರ ನಿರ್ಣಯ ಮಾಡಿಲ್ಲ ಎಂದರು. 

Tap to resize

Latest Videos

undefined

ರಾಹುಲ್ ಗಾಂಧಿಯ 4 ಸಂತತಿ ಬಂದ್ರೂ ಮುಸ್ಲಿಮರಿಗೆ ಮೀಸಲಾತಿ ಸಿಗದು: ಅಮಿತ್ ಶಾ

ಸಂಪುಟ ಪುನಾರಚನೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಈಬಗ್ಗೆನಮ್ಮ ಜತೆ ಯಾವುದೇಚರ್ಚೆಯಾಗಿಲ್ಲ. ಸಂಪುಟ ವಿಷಯ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಸಂಪುಟ ಪುನಾರಚನೆ ಬಗ್ಗೆ ನನಗೇನೂ ಗೊತ್ತಿಲ್ಲ. ನಾಗೇಂದ್ರ ಬಗ್ಗೆ ಸಿಎಂ ಹೇಳಿಕೆ ನಾನು ನೋಡಿಲ್ಲ ಎಂದು ಹೇಳಿದರು. 

ಉಪ ಚುನಾವಣೆಯ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವ ಎಚ್‌.ಕೆ. ಪಾಟೀಲ, ಪ್ರಜ್ಞಾವಂತರು ಈಗಾಗಲೇ ತಮ್ಮ ತೀರ್ಪನ್ನು ಕೊಟ್ಟಿದ್ದಾರೆ. ತೀರ್ಪಿನ ಘೋಷಣೆ ಮಾತ್ರ 23ಕ್ಕೆ ಆಗುತ್ತದೆ. ಬೈ ಎಲೆಕ್ಷನ್ ಕುರಿತು ಯಡಿಯೂರಪ್ಪ ಅದ್ಯಾವ ವಿಶ್ವಾಸದ ಮೇಲೆ ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈಗಾಗಲೇ ಹಲವಾರು ಚುನಾವಣೆಗಳಲ್ಲಿ ಬಿಜೆಪಿಗೆ ವಿಶೇಷ ಅನುಭವ ಆಗಿದೆ, ಜನರು ಅವರನ್ನು ಮನೆಗೆ ಕಳುಹಿಸಿದ್ದಾರೆ. ಈ ಬಾರಿಯೂ ಹಾಗೆಯೇ ಆಗಲಿದೆ. ಅವರ ಆತ್ಮವಿಶ್ವಾಸಕ್ಕೆ ಕಾರಣವೇನು? ಜನರು ಸಮಸ್ಯೆ ಎದುರಿಸಿದ ಕೊರೋನಾ ಸಂದರ್ಭದಲ್ಲಿ ಏನಾದರೂ ಒಳ್ಳೆಯ ಆಡಳಿತ ಕೊಟ್ಟಿದ್ದೀರಾ? ನಿಮ್ಮ ದುರಾಡಳಿತ, ದುರ್ನಡತೆಯಿಂದ ಜನರು ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ನಿಮ್ಮ ಹೇಳಿಕೆಗೆ ಇವಿಎಂ ಕಾರಣವಾ ಅನ್ನೋದು ಜನರ ಮನಸ್ಸಿನಲ್ಲಿ ಮೂಡುತ್ತದೆ ಎಂದರು. 

ನ್ಯಾಯಮೂರ್ತಿ ಅವರನ್ನು ಏಜೆಂಟ್ ಎಂದಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಎತ್ತರದ ಹುದ್ದೆಯಲ್ಲಿದ್ದವರು ಮನಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ, ತನಿಖಾ ಸಂಸ್ಥೆಯ ನೇತೃತ್ವ ವಹಿಸಿದವರ ವಿರುದ್ದ ಹೀಗೆ ಮಾತನಾಡುವುದು ಸರಿಯೇ? ಸಂವಿಧಾನ ಎತ್ತಿ ಹಿಡಿಯಬೇಕಾದ ಕೇಂದ್ರ ಸಂಪುಟದ ಸದಸ್ಯರು ಗೌರವದಿಂದ ಇರಬೇಕಾದದ್ದು ಜವಾಬ್ದಾರಿ. ಆದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನ್ಯಾಯಮೂರ್ತಿಕುನ್ಹಾಅವರಿಗೆ ಏಜೆಂಟ್ ಅಂದಿದ್ದಾರೆ. ಆಯೋಗದ ಬಗ್ಗೆ ಲಘುವಾಗಿ ಮಾತನಾಡಿದ್ದು, ಅತ್ಯಂತ ದುರ್ದೈವ, ಕೇಂದ್ರ ಸಚಿವ ಈ ರೀತಿ ಮಾತಾಡುವುದು ಅಕ್ಷಮ್ಯ ಅಪರಾಧ. ಆಯೋಗ ಎರಡು ಮಧ್ಯಂತರ ವರದಿ ನೀಡಿದೆ ಎಂದರು. 

ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಬಗ್ಗೆ ಭಾರೀ ವಿವಾದ!

300ಗೆ ಲಭ್ಯ ಇದ್ದ ಪಿಪಿಇ ಕಿಟ್‌ಗಳನ್ನು ₹ 2117ಗೆ ಖರೀದಿಸಿ ಅಪರಾಧ ಮಾಡಿದ್ದಾರೆ. ಖಾಸಗಿ ಲ್ಯಾಬ್ ನಿಯಮ ಗಾಳಿಗೆ ತೂರಿ ₹ 6 ಕೋಟಿ ಸಂದಾಯ ಆದ ಬಗ್ಗೆ ಉಲ್ಲೇಖ ಮಾಡಿದ್ದಾರೆ. 14 ಖಾಸಗಿ ಮಾನ್ಯತೆ ಇಲ್ಲದ ಲ್ಯಾಬ್ ಗಳಿಗೆ ಹಣ ಸಂದಾಯವಾಗಿವೆ. ಕೇಂದ್ರದ ಮಾರ್ಗಸೂಚಿ ಹಣ ಸಂದಾಯವಾಗಿರುವ ಬಗ್ಗೆ ವರದಿ ಆಕ್ಷೇಪಿಸಿದೆ. 14 ಲ್ಯಾಬ್ ಮಾತ್ರವಲ್ಲ, ಇನ್ನುಳಿದ 8 ಲ್ಯಾಬ್‌ಗಳಿಗೆ ₹4 ಕೋಟಿ 28 ಲಕ್ಷ ಸಂದಾಯ ಮಾಡಿದ್ದಾರೆ. ಒಪ್ಪಂದ ಮಾಡಿಕೊಳ್ಳದೇ ಬೇಕಾಬಿಟ್ಟಿ ಹಣ ಸಂದಾಯ ಮಾಡಿದ್ದಕ್ಕೆ ಆಯೋಗ ತರಾಟೆಗೆ ತೆಗೆದುಕೊಂಡಿದೆ. ಜಸ್ಟಿಸ್ ಮೈಕಲ್ ಕುನ್ಹಾ ಅವರು 50 ಸಾವಿರಕ್ಕೂ ಹೆಚ್ಚು ಕಡತ ಪರಿಶೀಲಿಸಿ ನೀಡಿರುವ ವರದಿಯಲ್ಲಿ ನೂರಾರು ಕೋಟಿ ವೆಚ್ಚದ ಬಗ್ಗೆ ಲೆಕ್ಕವೂ ಇಲ್ಲ, ಕಾಗದವೂ ಇಲ್ಲ. ಯಡಿಯೂರಪ್ಪ, ಶ್ರೀರಾಮುಲು ಅವಧಿಯಲ್ಲಾದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ತನಿಖೆ ಎದುರಿಸಲಾಗದೇ ಬಿಜೆಪಿ ನಾಯಕರು ಆಯೋಗದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

300ಗೆ ಲಭ್ಯ ಇದ್ದ ಪಿಪಿಇ ಕಿಟ್ ಗಳನ್ನು 2117ಗೆ ಖರೀದಿಸಿ ಅಪರಾಧ ಮಾಡಿದ್ದಾರೆ. ಖಾಸಗಿ ಲ್ಯಾಬ್ ನಿಯಮ ಗಾಳಿಗೆ ತೂರಿ 6 ಕೋಟಿ ಸಂದಾಯ ಆದ ಬಗ್ಗೆ ಉಲ್ಲೇಖ ಮಾಡಿದ್ದಾರೆ. 14 ಖಾಸಗಿ ಮಾನ್ಯತೆ ಇಲ್ಲದ ಲ್ಯಾಬ್ ಗಳಿಗೆ ಹಣ ಸಂದಾಯವಾಗಿವೆ. ಕೇಂದ್ರದ ಮಾರ್ಗಸೂಚಿ ಉಲ್ಲಂಘಿಸಿ ಹಣ ಸಂದಾಯವಾಗಿರುವ ಬಗ್ಗೆ ವರದಿ ಆಕ್ಷೇಪಿಸಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ. 

click me!