ಚಿಕ್ಕವಯಸ್ಸಿಗೇ ಹೃದಯಾಘಾತ ತಪ್ಪಿಸಲು ಈಗಿನಿಂದಲೇ ನೀವು ಈ ಕೆಲಸ ಮಾಡಿ!
ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತವಾಗಲು ಕಾರಣಗಳು ಮತ್ತು ಅದನ್ನು ತಪ್ಪಿಸುವ ವಿಧಾನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತವಾಗಲು ಕಾರಣಗಳು ಮತ್ತು ಅದನ್ನು ತಪ್ಪಿಸುವ ವಿಧಾನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
ಹೃದಯಾಘಾತದ ಅಪಾಯ - ಯುವಜನರು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು!
ಕೊವಿಡ್ ಬಳಿಕ ಕಾಲ ಸೂಕ್ಷ್ಮವಾಗಿದೆ. ಅದರಲ್ಲೂ ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಗಳು ತೀವ್ರವಾಗಿ ಬದಲಾಗಿವೆ. ಫಾಸ್ಟ್ ಫುಡ್, ಕರಿದ ಆಹಾರಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ಅನಾರೋಗ್ಯಕರ ಆಹಾರಗಳನ್ನು ತಿನ್ನುವುದು ಯುವ ಪೀಳಿಗೆಯ ನೆಚ್ಚಿನ ಕಾಲಕ್ಷೇಪವಾಗಿದೆ. ಈ ಅನಾರೋಗ್ಯಕರ ಜೀವನಶೈಲಿಯಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ, ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಂತಹ ಮಾರಕ ಕಾಯಿಲೆಗಳು ಬರುತ್ತಿವೆ.
- ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಸೇರುವುದು ಹೃದಯಾಘಾತಕ್ಕೆ ಮುಖ್ಯ ಕಾರಣವೆಂದು ಪರಿಗಣಿಸಲಾಗಿದೆ. ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ರಕ್ತ ಹೆಪ್ಪುಗಟ್ಟುವಿಕೆ (ಥ್ರಂಬಸ್) ಆಗಿ ರಕ್ತ ಪರಿಚಲನೆಗೆ ಅಡ್ಡಿಯಾಗುತ್ತದೆ. ರಕ್ತ ಪರಿಚಲನೆ ಸರಿಯಾಗಿಲ್ಲದಿದ್ದಾಗ ಹೃದಯಾಘಾತ ಸಂಭವಿಸುತ್ತದೆ.
- ದೇಹದ ಚಟುವಟಿಕೆ ಇಲ್ಲದಿದ್ದರೂ ತೊಂದರೆಯಾಗುತ್ತದೆ. ಅತಿಯಾದ ದೈಹಿಕ ಚಟುವಟಿಕೆ ಇದ್ದರೂ ತೊಂದರೆಯಾಗುತ್ತದೆ. ದೀರ್ಘಕಾಲದ ಒತ್ತಡ ಅಥವಾ ಅತಿಯಾದ ದೈಹಿಕ ಚಟುವಟಿಕೆಯಿಂದ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವಿಸಬಹುದು. ಕೆಲವರಿಗೆ ಆನುವಂಶಿಕವಾಗಿ ಜೀನ್ ಕಾರಣದಿಂದ ಬರಬಹುದು.
ಇದನ್ನೂ ಓದಿ: ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮಗೆ ಯಾವತ್ತೂ ಹೃದಯಾಘಾತ ಆಗೋ ಚಾನ್ಸೇ ಇಲ್ಲ!
- ಹೆಚ್ಚು ಹೊತ್ತು ಕುಳಿತುಕೊಳ್ಳುವುದು, ಸಾಕಷ್ಟು ದೈಹಿಕ ಚಟುವಟಿಕೆ ಇಲ್ಲದಿರುವುದು ಮುಂತಾದ ಜೀವನಶೈಲಿಯಿಂದ ಬೊಜ್ಜು ಹೆಚ್ಚಾಗಬಹುದು. ಈ ರೀತಿ ದೈಹಿಕ ಚಟುವಟಿಕೆ ಕಡಿಮೆಯಾಗಿ ಅನಾರೋಗ್ಯಕರ ಜೀವನಶೈಲಿಯಿಂದ ಹೃದಯಾಘಾತ ಬರಬಹುದು. ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ ಹೃದಯಾಘಾತಕ್ಕೆ ಕಾರಣವಾಗಬಹುದು. ಒತ್ತಡ, ಆನುವಂಶಿಕ ಅಂಶಗಳು ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣವಾಗುತ್ತಿವೆ. ಜೀವನಶೈಲಿಯನ್ನು ಆರೋಗ್ಯಕರವಾಗಿ ಬದಲಾಯಿಸುವುದು, ಪರೀಕ್ಷೆಗಳ ಮೂಲಕ ಮೊದಲೇ ತಿಳಿದುಕೊಂಡು ಚಿಕಿತ್ಸೆ ನೀಡಿದರೆ ತಡೆಯಬಹುದು.
ರುಚಿಗಾಗಿ ಸಂಸ್ಕರಿಸಿದ ಆಹಾರಗಳು, ಸಕ್ಕರೆ ಹೆಚ್ಚಾಗಿರುವ ಪಾನೀಯಗಳು, ಎಣ್ಣೆಯಲ್ಲಿ ಕರಿದ ಆಹಾರಗಳು ತೂಕವನ್ನು ಹೆಚ್ಚಿಸುತ್ತವೆ. ಅಧಿಕ ತೂಕವು ಹೃದಯ ರೋಗ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.ಹೀಗಾಗಿ ಕರಿದ ಆಹಾರ, ಅನಾರೋಗ್ಯಕರ ಎಣ್ಣೆ ಬಳಸುವುದು ನಿಲ್ಲಿಸಬೇಕು. ಅತಿಯಾದ ಉಪ್ಪು, ಸಕ್ಕರೆ ಸೇವನೆಯೂ ಒಳ್ಳೆಯದಲ್ಲ.
ಇಡೀ ರಾತ್ರಿ ಮೊಬೈಲ್ ನೋಡುವುದು, ತಡವಾಗಿ ಮಲಗುವುದು ದೇಹಕ್ಕೆ ಒಳ್ಳೆಯದಲ್ಲ. ದೀರ್ಘಕಾಲದ ಖಿನ್ನತೆ, ನಿದ್ರಾಹೀನತೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ರೋಗ ಬರುವ ಸಾಧ್ಯತೆ ಇದೆ.
ಧೂಮಪಾನ:
ಧೂಮಪಾನ, ಮದ್ಯಪಾನ ಸೇರಿದಂತೆ ಮಾದಕ ವ್ಯಸನಗಳು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ.
ಇದನ್ನೂ ಓದಿ: ಚಾಲೆಂಜ್ ಸ್ವೀಕರಿಸಿ ಡಿಯೋಡ್ರೆಂಟ್ ಮೂಸಿದ 11 ವರ್ಷದ ಬಾಲಕಿ ಸಾವು
- ಆರೋಗ್ಯಕರ ಜೀವನಶೈಲಿ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಒಳ್ಳೆಯ ನಿದ್ರೆ ಅವಶ್ಯಕ. ಕನಿಷ್ಠ 8 ಗಂಟೆಗಳ ಕಾಲ ಮಲಗಬೇಕು. ವಾರದಲ್ಲಿ 4 ರಿಂದ 5 ದಿನಗಳ ಕಾಲ ಮಧ್ಯಮ ವ್ಯಾಯಾಮ ಮಾಡಿದರೆ ಸಾಕು. ಸಿನಿಮಾಗಳಲ್ಲಿ ಬರುವಂತೆ ಸಿಕ್ಸ್ ಪ್ಯಾಕ್, ಸೈಜ್ ಜೀರೋ ಮೋಹಕ್ಕೆ ಯುವ ಪೀಳಿಗೆ ಬೀಳಬಾರದು. ಸಾಕಷ್ಟು ನಿದ್ರೆ ಇಲ್ಲದೆ ತೀವ್ರ ವ್ಯಾಯಾಮ ಮಾಡುವುದರಿಂದ ಹೃದಯಾಘಾತ ಸಂಭವಿಸಬಹುದು. ವ್ಯಾಯಾಮ ಮಾಡುವವರು ಆಗಾಗ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.
- 25 ವರ್ಷ ಮೇಲ್ಪಟ್ಟವರು ಕೆಟ್ಟ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಅವಲಂಬಿಸಿ ಆಹಾರ ಪದ್ಧತಿಯನ್ನು ಬದಲಾಯಿಸಬೇಕು. ವೈದ್ಯರನ್ನು ಸಂಪರ್ಕಿಸಿ ಔಷಧಿಗಳನ್ನು ತೆಗೆದುಕೊಳ್ಳಬೇಕು. ಮನೆಯಲ್ಲಿ ಕುಟುಂಬ ಸದಸ್ಯರಿಗೆ ಹೃದಯಾಘಾತವಿದ್ದರೆ ಚಿಕ್ಕ ವಯಸ್ಸಿನಲ್ಲೇ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಹೃದಯದ ಆರೋಗ್ಯವೂ ಸುಧಾರಿಸುತ್ತದೆ.