ಲ್ಯಾಪ್‌ಟಾಪ್, ಕಾರಿನಿಂದ ಆರೋಗ್ಯ ಅಪಾಯ, ಹೆಚ್ಚಾಗುತ್ತಿದೆ ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್ ಸಮಸ್ಯೆ

ನೀವು ಲ್ಯಾಪ್‌ಟಾಪ್ ಬಳಸುತ್ತಿದ್ದೀರಾ? ಕಾರಿನಲ್ಲಿ ಪ್ರಯಾಣಿಸುತ್ತೀರಾ? ನಿಮಗೆ ಗೊತ್ತಿಲ್ಲದಂತೆ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದೆ. ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್ ಸಮಸ್ಯೆ ಹಲವರಿಗೆ ಬಾಧಿಸುತ್ತಿದೆ ಎಂದು ಅಧ್ಯಯನ ವರದಿ ಹೇಳಿದೆ.


ಜಗತ್ತು ಟೆಕ್ ಅವಲಂಬಿತವಾಗಿದೆ. ಡಿಜಿಟಲ್ ಮೂಲಕವೇ ಬಹುತೇಕ ಕೆಲಸಗಳು ನಡೆಯುತ್ತಿದೆ. ಮೊಬೈಲ್ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಒಂದಷ್ಟು ಗ್ಯಾಜೆಟ್‌ನಿಂದ ದೂರ ಉಳಿಯಲು ಸಾಧ್ಯವಾಗದ ಪರಿಸ್ಥಿತಿ. ಇನ್ನು ವಾಹನ ಅನಿವಾರ್ಯವಾಗಿದೆ. ಆದರೆ ಇವುಗಳ ಮೇಲೆ ಅವಲಂಬಿತವಾಗಿರುವ ಮನುಷ್ಯ ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್‌ನಿಂದ(Erythema Ab Igne) ಬಳಲುತ್ತಿರುವುದಾಗಿ ಅಧ್ಯಯನ ವರದಿ ಹೇಳಿದೆ. ಬಹುತೇಕರಿಗೆ ಗೊತ್ತಾಗುವುದೇ ಇಲ್ಲ. ಆದರೆ ಸಮಸ್ಯೆ ಗಂಭೀರವಾದಾಗ ಮಾತ್ರ ಗೋಚರವಾಗುತ್ತದೆ. ಜಾಮಾ(JAMA) ಡರ್ಮಟಾಲಜಿ ನಡೆಸಿದ ಅಧ್ಯಯನ ವರದಿ ಈ ಮಾಹಿತಿ ಬಹಿರಂಗಪಡಿಸಿದೆ.

ಲ್ಯಾಪ್‌ಟಾಪ್, ಕಾರಿನಿಂದ ಈ ಸಮಸ್ಯೆ ಬರುವುದು ಹೇಗೆ?
ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್ ಎಂದರೆ ಟೆಕ್ ಗ್ಯಾಜೆಟ್‌ಗಳಿಂದ ಉತ್ಪತ್ತಿಯಾಗುವ ಬಿಸಿ ಅಥವಾ ತಾಪದಿಂದ ತ್ವಜೆಗಳ ಮೇಲ್ಪದರ ಸುಡುತ್ತವೆ. ಪ್ರಮುಖವಾಗಿ ಲ್ಯಾಪ್‌ಟಾಪ್, ಕಾರಿನ ಸೀಟುಗಳು ಮೊಬೈಲ್ ಫೋನ್‌ಗಿಂತ ಹೆಚ್ಚು ಬಿಸಿಯಾಗುತ್ತದೆ. ಮೊಬೈಲ್ ಫೋನ್ ಕೂಡ ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್‌ಗೆ ಕಾರಣವಾಗುತ್ತದೆ. ಆದರೆ ಪ್ರತಿ ನಿತ್ಯ ಬಳಸುವ ವಸ್ತುಗಳ ಪೈಕಿ ಲ್ಯಾಪ್‌ಟಾಪ್ ಹಾಗೂ ಕಾರಿನ ಮೂಲಕ ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್ ಸಮಸ್ಯೆ ಕಾಡುವುದು ಹೆಚ್ಚು. 

Latest Videos

ಡಯಾಬಿಟೀಸ್ ನಿಂದ, ಫರ್ಟಿಲಿಟಿ ಸಮಸ್ಯೆವರೆಗೂ…. ನಾನ್ ಸ್ಟಿಕ್ ಪ್ಯಾನ್ ನಿಂದ ಎಷ್ಟೊಂದು ಸಮಸ್ಯೆ

ಏನಿದು ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್?
ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್ ಸಮಸ್ಯೆಗೆ ವೈದ್ಯಕೀಯ ಭಾಷೆಯಲ್ಲಿ Erythema Ab Igne ಎಂದು ಕರೆಯುತ್ತಾರೆ. ಅಂದರೆ ಟೆಕ್ ಸೇರಿದಂತೆ ಇತರ ವಸ್ತುಗಳ ಬಿಸಿ ಅಥವಾ ತಾಪದಿಂದ ತ್ವಚೆ ಮೇಲೆ ಆಗುವ ಪರಿಣಾಮವೇ ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್. ಚರ್ಮ ಸುಟ್ಟಂತೆ, ಬೇರೆ ಬಣ್ಣಕ್ಕೆ ತಿರುಗುತ್ತದೆ. ಆರೋಗ್ಯಕರ ತ್ವಚೆಯ ಬಣ್ಣ ಬದಲಾಗುತ್ತದೆ, ಚರ್ಮದ ಮೇಲ್ಪದರಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ನಿಧಾನವಾಗಿ ತ್ವಚೆಯ ಮೇಲ್ಪದರ ಸುಡುವುದರಿಂದ ಬಲೆಗಳ ರೀತಿಯಲ್ಲಿ ಅಥವಾ ಸುಕ್ಕುಗಟ್ಟಿದ ರೀತಿಯಲ್ಲಿ ಬದಲಾಗುತ್ತದೆ. 

ಚಿಕ್ಕ ವಯಸ್ಸಿನಲ್ಲಿ ವಯಸ್ಸಾದಂತೆ ಕಾಣವುದು
ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್ ಯುವ ಸಮೂಹ, ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಆರಂಭಿಸಿದೆ. ಕಾರಣ ಮಕ್ಕಳು ಹಾಗೂ ಯುವ ಸಮೂಹ ತಾಪ ಹೆಚ್ಚಾಗುವ ಅಥವಾ ಬಿಸಿಯಾಗುವ ಗ್ಯಾಜೆಟ್ ಬಳಕೆ, ವಾಹನ ಪ್ರಯಾಣ ಸೇರಿದಂತೆ ಹಲವು ಪರಿಕರಗಳ ಬಳಕೆ ಮಾಡುತ್ತದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಚರ್ಮ ಸುಕ್ಕುಗಟ್ಟಲು ಅಥವಾ ವಯಸ್ಸಾದಂತೆ ಕಾಣಲು ಆರಂಭಿಸುತ್ತದೆ. ಇನ್ನು ಚರ್ಮ ಸಂಬಂಧಿತ ಆರೋಗ್ಯ ಸಮಸ್ಯಗಳು ಬಹುಬೇಗನೆ ಕಾಣಿಸಿಕೊಳ್ಳುತ್ತದೆ. 

ಲ್ಯಾಪ್‌ಟಾಪ್, ಮೊಬೈಲ್ , ಕಾರು ಮಾತ್ರವಲ್ಲ, ಚಳಿಗಾಲದಲ್ಲಿ ಉಪಯೋಗಿಸುವ ಹೀಟರ್ ಸೇರಿದಂತ ಹಲವು ವಸ್ತುಗಳು ಟೋಸ್ಟೆಡ್ ಸ್ಕಿನ್ ಸಮಸ್ಯೆಗೆ ಕಾರಣವಾಗಲಿದೆ. ಚರ್ಮ ಸುಡುವ ಕಾರಣ ಆರಂಭಿಕ ಹಂತದಲ್ಲಿ ಕೇವಲ ಚರ್ಮ ಸಮಸ್ಯೆ ಮಾತ್ರ ಕಾರಣವಾಗಲಿದೆ. ಆದರೆ ದಿನ ಕಳೆದಂತೆ ಇತರ ಆರೋಗ್ಯ ಸಮಸ್ಯೆಗೂ ಇದು ಕಾರಣವಾಗಲಿದೆ. ವಿರಳ ಸಂದರ್ಭದಲ್ಲಿ ಕೆಲ ಚರ್ಮ ಕ್ಯಾನ್ಸರ್‌ಗೂ ಕಾರಣವಾಗುವ ಸಾಧ್ಯತೆ ಇದೆ ಎಂದು ಜಾಮಾ ಡರ್ಮಟಾಲಜಿ ಅಧ್ಯಯನದಲ್ಲಿ ಹೇಳಿದೆ.

ನ್ಯೂಯಾರ್ಕ್ ಡರ್ಮಟಾಲಜಿಸ್ಟ್ ಡಾ. ವಿಟ್ನಿ ಬೋವ್ ಈ ಕುರಿತು ಕೆಲ ಎಚ್ಚರಿಕೆ ನೀಡಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವವರು, ಹೀಟ್ ಆಗುವ ಗ್ಯಾಜೆಟ್ ಬಳಸುವವರು, ಬಿಸಿಯಾದ ಕಾರು ಅಥವಾ ವಾಹನ ಸೀಟುಗಳಲ್ಲಿ ಪ್ರಯಾಣ ಮಾಡುವವರು ಈ ಟೋಸ್ಟೆಡ್ ಸ್ಕಿನ್ ಸಿಂಡ್ರೋಮ್ ಸಮಸ್ಯೆಗೆ ಗುರಿಯಾಗುತ್ತಾರೆ. ಹೀಗಾಗಿ ಅನಿವಾರ್ಯ ಸಂದರ್ಭ ಹೊರತುಪಡಿಸಿದರೆ ಬಿಸಿಯಾಗುವ ಗ್ಯಾಜೆಟ್‌ಗಳಿಂದ ದೂರ ಉಳಿಯುವುದು ಅತ್ಯಗತ್ಯವಾಗಿದೆ ಎಂದು ಸಲಹೆ ನೀಡಿದ್ದಾರೆ. 

ಹಲವರು ಅತೀ ಚಿಕ್ಕ ವಯಸ್ಸಿನಲ್ಲೇ ಚರ್ಮ ಸಮಸ್ಯೆಗೆ ಗುರಿಯಾಗುತ್ತಾರೆ. ಇದರ ಹಿಂದೆ ಅವರು ಬಳಸುವ ಹೀಟೆಡ್ ಗ್ಯಾಜೆಟ್ ಕೂಡ ಸೇರಿರುತ್ತದೆ ಎಂದು ವರದಿ ಹೇಳುತ್ತಿದೆ.

ಎಷ್ಟೇ ಬಿಸಿಲಿರಲಿ, ಬೇಸಗೆಯಲ್ಲಿ ನಿಮ್ಮನ್ನು ತಂಪಾಗಿಟ್ಟುಕೊಳ್ಳುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್!
 

tags
click me!