ಕನ್ನಡ ನಟ ಅಜಯ್ ರಾವ್ ಅವರು ಜ್ಯೋತಿಷ್ಯ 101% ಸತ್ಯ ಅಂತ ಗೊತ್ತಿದ್ದರೂ, ಕಲಿತಿದ್ದರೂ ಕೂಡ ಅದನ್ನು ಫಾಲೋ ಮಾಡೋದಿಲ್ವಂತೆ, ಯಾಕೆ?
ಜ್ಯೋತಿಷ್ಯವನ್ನು ಕೆಲವರು ನಂಬಿದ್ರೆ, ಇನ್ನೂ ಕೆಲವರು ಸುಳ್ಳು ಎಂದು ಹೇಳೋದುಂಟು. ʼಎಕ್ಸ್‌ಕ್ಯೂಸ್‌ಮೀʼ, ʼಕೃಷ್ಣಲೀಲಾʼ ಸಿನಿಮಾ ಖ್ಯಾತಿಯ ನಟ ಅಜಯ್ ರಾವ್ ಅವರು ಜ್ಯೋತಿಷ್ಯವನ್ನು ನಂಬೋದಲ್ಲ, ಕಲಿತಿದ್ದಾರಂತೆ. ಈ ಬಗ್ಗೆ ಅವರು Rapid Rashmi Youtube Channel ಜೊತೆ ಮಾತನಾಡಿದ್ದಾರೆ.
ಪ್ರಸಾದ ಆಗಿ ಸಿಕ್ಕಿದ್ದ ರುದ್ರಾಕ್ಷಿ!
“ಎಲ್ಲವನ್ನು ಅಜಯ್ ರಾವ್ ಅವರು ದೇವರಿಗೆ ಅರ್ಪಿಸುತ್ತಾರಂತೆ. “ಏನಾಗಬೇಕು ಅಂತಿದೆಯೋ ಅದೇ ಆಗೋದು, ಅದೇ ಆಗತ್ತೆ” ಅಂತ ಅಜಯ್ ರಾವ್ ಅವರು ಹೇಳಿದ್ದಾರೆ. ಇನ್ನು ರುದ್ರಾಕ್ಷಿ ಧರಿಸಿದ್ದರ ಬಗ್ಗೆ ಮಾತನಾಡಿರೋ ಅವರು ”ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಸಾದ ಆಗಿ ನನಗೆ ರುದ್ರಾಕ್ಷಿ ಸಿಕ್ಕಿದೆ, ಪಕ್ಕದ ಮನೆಯವರು ತಂದುಕೊಟ್ಟಿದ್ದಾರೆ, ಅದನ್ನು ಧರಿಸಿದ್ದೇನೆ” ಎಂದು ಹೇಳಿದ್ದಾರೆ.
Gandhada Gudi ಅಪ್ಪು ದೇವತಾ ಮನುಷ್ಯ : ಗಂಧದ ಗುಡಿ ವೀಕ್ಷಿಸಿದ ಅಜಯ್ ರಾವ್
ಜ್ಯೋತಿಷ್ಯ ಕಲಿತಿದ್ರೂ ಫಾಲೋ ಮಾಡೋದಿಲ್ಲ!
“ನಮ್ಮ ಪರಂಪರೆಯಿಂದ ಮಂತ್ರ, ಶಾಸ್ತ್ರ ಎಲ್ಲವೂ ಬಂದಿದೆ, ನಾನು ಧರಿಸಿದ ರುದ್ರಾಕ್ಷಿಯಲ್ಲಿ ಜಪ ಮಾಡ್ತೀನಿ. ನಾನು ಬೇಸಿಕ್ ಜ್ಯೋತಿಷ್ಯವನ್ನು ಕಲಿತಿದ್ದೇನೆ. ಅದು 101% ನಿಜ ಕೂಡ ಹೌದು, ಆದರೆ ಅದನ್ನು ಫಾಲೋ ಮಾಡಬಾರದು. ಇದು ಆಸಕ್ತಿಕರ ವಿಷಯ, ವಿಜ್ಞಾನವೂ ಹೌದು. ಬೆಂಗಳೂರಿನಿಂದ ಮೈಸೂರಿನವರೆಗೆ ನೀವು ಹೋಗ್ತೀರಾ, ನೀವು ಒಳ್ಳೆಯ ಕಾರ್‌ನಲ್ಲಾದರೂ ಹೋಗಿ, ನಡೆದುಕೊಂಡರೂ ಹೋಗಿ. ನೀವು ಇಷ್ಟು ಗಂಟೆಗೆ ರೀಚ್ ಆಗಬೇಕು ಅಂತ ಹಣೆಯಲ್ಲಿ ಬರೆದುಕೊಂಡಿದ್ದರೆ ನೀವು ಅಷ್ಟೇ ಗಂಟೆಗೆ ಹೋಗ್ತೀರಾ, ಆದರೆ ಹೋಗುವ ವಿಧಾನ ಬೇರೆ ಇರುತ್ತದೆ. ಮಳೆ ಬರುತ್ತಿರುತ್ತದೆ, ಜ್ಯೋತಿಷಿ ಬಳಿ ಹೋದರೆ ನಿಮಗೆ ಕೊಡೆ ಸಿಗಬಹುದು, ಆದರೆ ಮಳೆಯಿಂದ ತಪ್ಪಿಸಿಕೊಳ್ಳೋಕೆ ಆಗೋದಿಲ್ಲ. ಆ ಸೀಸನ್ ಇದ್ದೇ ಇರುತ್ತದೆ” ಎಂದು ಅಜಯ್ ರಾವ್ ಹೇಳಿದ್ದಾರೆ.
ದೇವರಿಗೆ ಶರಣಾಗಬೇಕು!
“ಜ್ಯೋತಿಷ್ಯವನ್ನು ನಾನು ಫಾಲೋ ಮಾಡೋದಿಲ್ಲ. ಪ್ರಧಾನ ಮಂತ್ರಿ ಕಾಂಟ್ಯಾಕ್ಟ್ ಇದೆ ಎನ್ನೋದು ಒಂದು ಕಡೆಯಾದ್ರೆ, ಪಿಎ ಮೂಲಕವೂ ಇನ್ಯಾರ ಮೂಲಕವೋ ಪ್ರಧಾನ ಮಂತ್ರಿಯನ್ನು ಕಾಂಟ್ಯಾಕ್ಟ್ ಮಾಡಬಹುದು. ಜ್ಯೋತಿಷ್ಯ ಎನ್ನುವುದು ಒಂದು ವಿಧಾನ ಅಷ್ಟೇ. ದೇವರಿಗೆ ನಾವು ಶರಣಾಗಬೇಕು. ಕುತೂಹಲದಿಂದ ನಾನು ಜ್ಯೋತಿಷ್ಯವನ್ನು ಕಲಿತೆ. ಇದನ್ನು ಕಲಿಯಬೇಕು ಅಂತ ಶಾಸ್ತ್ರ, ಧರ್ಮದಲ್ಲಿದೆ. ಶಾಲೆಯಲ್ಲಿ ಕಲಿಯುವ ಶಿಕ್ಷಣವನ್ನು ಜ್ಯೋತಿಷ್ಯದಲ್ಲಿ ಕೂಡ ಹೇಳಿಕೊಡಲಾಗುತ್ತದೆ” ಎಂದು ಅಜಯ್ ರಾವ್ ಹೇಳಿದ್ದಾರೆ.
ಅಶುಭ ಮುಹೂರ್ತದಲ್ಲೇ ಮದ್ವೆಯಾಗೋಯ್ತು, ಡಿವೋರ್ಸ್ ಪಕ್ಕಾ ಎಂದುಬಿಟ್ರು: ನಟ ಅಜಯ್ ರಾವ್ ಮಾತು ಕೇಳಿ..
ಕೋಟ್ಯಾಂತರ ರೂಪಾಯಿ ಸಾಲ!
“ಅಶುಭ ಮುಹೂರ್ತದಲ್ಲಿ ಮದುವೆ ಆಯ್ತು, ಡಿವೋರ್ಸ್ ಆಗತ್ತೆ ಅಂತ ಮಾತು ಬಂತು. ದೇವರ ದಯೆಯಿಂದ ನಾನು, ನನ್ನ ಹೆಂಡತಿ ಚೆನ್ನಾಗಿದ್ದೇವೆ, ನಮಗೊಬ್ಬಳು ಮಗಳಿದ್ದಾಳೆ. ಅಂದು ಒಂದು ರೂಪಾಯಿಗೆ ಕಷ್ಟಪಡುತ್ತಿದ್ದ ನಾನು, ಕೋಟಿ ಕೋಟಿ ರೂಪಾಯಿ ಸಾಲ ಮಾಡಿದ್ದೇನೆ. ಇಲ್ಲಿಯವರೆಗೆ ನಾನು ಯಾರ ಬಳಿಯೂ ಕೈಚಾಚುವ ಸಂದರ್ಭ ಬಂದಿಲ್ಲ. ಮುಂದೆ ಆ ಕೋಟಿ ರೂಪಾಯಿ ಸಾಲ ತೀರಿಸುವೆ ಎನ್ನುವ ನಂಬಿಕೆಯೂ ಇದೆ” ಎಂದು ಅಜಯ್ ರಾವ್ ಹೇಳಿದ್ದಾರೆ.
ಹೊಸ ಮನೆಗೆ ಕಾಲಿಟ್ಟರು!
ಅಜಯ್ ರಾವ್ ಅವರು ವರ್ಷಗಳ ಹಿಂದೆ ಹೊಸ ಮನೆಗೆ ಕಾಲಿಟ್ಟಿದ್ದರು. ಬಹಳ ಅದ್ದೂರಿಯಾಗಿ ಈ ಮನೆ ಪ್ರವೇಶ ಮಾಡಿದ್ದರು. ಸಿಂಪಲ್ ಆಗಿ ಮದುವೆಯಾಗಿದ್ದ ಅಜಯ್ ರಾವ್ ಅವರು ಹೆಂಡ್ತಿಯನ್ನು ತುಂಬ ಪ್ರೀತಿ ಮಾಡ್ತೀನಿ, ಮದುವೆಯಾದ್ಮೇಲೆ ಇವಳೇ ನನಗೆ ಎಲ್ಲ ಎಂದು ನಿರೂಪಕಿ ಅನುಶ್ರೀಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.