ಹದಿಹರೆಯದವರಲ್ಲಿ ನಿದ್ರೆಯ ಕೊರತೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜೀವನಶೈಲಿ ಬದಲಾವಣೆಗಳು ಮತ್ತು ವೈದ್ಯಕೀಯ ಚಿಕಿತ್ಸೆಯ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು.
ಡಾ. ಜಯಶ್ರೀ ಕೆ ಎಂ.ಡಿ, ಪಿಜಿಡಿಎಪಿ
ಮಕ್ಕಳ ತಜ್ಞ ಮತ್ತು ವೈದ್ಯ(ತರುಣಾವಸ್ಥೆ)
ಕೆಎಂಸಿ ಆಸ್ಪತ್ರೆ, ಮಂಗಳೂರು
ಒಬ್ಬ ವ್ಯಕ್ತಿಗೆ ಉತ್ತಮ ಆರೋಗ್ಯ ಮತ್ತು ಯೋಗ ಕ್ಷೇಮ ಕಾಪಾಡಿಕೊಳ್ಳಲು ನಿದ್ರೆ ಪ್ರಮುಖವಾಗಿದೆ. ಹದಿಹರೆಯದವರಲ್ಲಿ ಉತ್ತಮ ನೆನಪಿನ ಶಕ್ತಿ, ರೋಗನಿರೋಧಕ ಕಾರ್ಯಗಳು ಮತ್ತು ತರಗತಿಯ ಗಮನ ಉಳಿಸಿಕೊಳ್ಳಲು ಸಾಕಷ್ಟು ಪ್ರಮಾಣ ಮತ್ತು ಗುಣಮಟ್ಟದ ನಿದ್ರೆ ಅತ್ಯಗತ್ಯ. ಸರಾಸರಿ, ಹದಿಹರೆಯದವರಿಗೆ 8 ರಿಂದ 9 ಗಂಟೆಗಳ ನಿದ್ರೆ ಬೇಕಾಗುತ್ತದೆ, ಆದರೆ ಯುವಜನತೆ ವಾರದಲ್ಲಿ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ ಮತ್ತು ವಾರಾಂತ್ಯದಲ್ಲಿ 9 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುತ್ತಾರೆ ಎಂದು ಅಧ್ಯಯನಗಳ ವರದಿ ಹೇಳುತ್ತದೆ.
ಹದಿಹರೆಯದವರಲ್ಲಿ ನಿದ್ರೆಯ ಅಭ್ಯಾಸ ವಿಭಿನ್ನವಾಗಿರುತ್ತದೆ, ಪ್ರೌಢಾವಸ್ಥೆಯಿಂದಾಗಿ ನಿದ್ರೆಯ ಅಭ್ಯಾಸದಲ್ಲಿ ಆಂತರಿಕ ಬದಲಾವಣೆ (ಸಿರ್ಕಾಡಿಯನ್ ಲಯದಲ್ಲಿ ಬದಲಾವಣೆ) ಇರುತ್ತದೆ, ಇದು ಮಲಗುವ ಸಮಯ ಮತ್ತು ಎಚ್ಚರಗೊಳ್ಳುವ ಸಮಯವನ್ನು ವಿಳಂಬಗೊಳಿಸುತ್ತದೆ. ನಿದ್ರೆಯ ಮೇಲೆ ಪರಿಣಾಮ ಬೀರುವ ಬಾಹ್ಯ ಮತ್ತು ಆಂತರಿಕ ಅಂಶಗಳು ಇಲ್ಲಿವೆ.
ಇದನ್ನೂ ಓದಿ: ನಿದ್ರಾಹೀನತೆಯಿಂದ ಗಂಭೀರ ಆರೋಗ್ಯ ಸಮಸ್ಯೆ; ಸುಖ ನಿದ್ದೆಗೆ ಇಲ್ಲಿದೆ ಆಯುರ್ವೇದ ಸಲಹೆ!
ಬಾಹ್ಯ ಅಂಶಗಳು
ಆತಂಕ, ಖಿನ್ನತೆ,
ಹದಿಹರೆಯದವರ ಜೀವನದ ಎಲ್ಲಾ ಕ್ಷೇತ್ರಗಳ ಮೇಲೆ ನಿದ್ರೆಯ ಕೊರತೆಯು ಪರಿಣಾಮ ಬೀರುತ್ತದೆ. ನಿದ್ರಾಹೀನತೆಯ ಪರಿಣಾಮಗಳು ಈ ಕೆಳಗಿನಂತಿವೆ:
ದೈಹಿಕ ಬೆಳವಣಿಗೆಗೆ ಅಗತ್ಯವಾದ ಹಾರ್ಮೋನುಗಳು ನಿದ್ರೆಯ ಸಮಯದಲ್ಲಿ ಸಂಗ್ರಹವಾಗುತ್ತವೆ, ಆದರೆ ನಿದ್ರಾಹೀನತೆ ಈ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರೋಗನಿರೋಧಕ ಶಕ್ತಿಹಾಗೂ ಒಟ್ಟಾರೆ ದೈಹಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ವಸ್ತುನಿಷ್ಠವಾಗಿ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಲು ನಿದ್ರೆ ತಪಾಸಣೆ ಉಪಕರಣಗಳು ಕೂಡ ಈಗ ಲಭ್ಯವಿದೆ.
ಉತ್ತಮ ನಿದ್ರೆಗೆ ಸಲಹೆಗಳು ಯಾವುವು?
• ನಿತ್ಯವೂ ಮಲಗುವ ಹಾಗೂ ಬೆಳಿಗ್ಗೆ ಏಳುವ ಸಮಯದಲ್ಲಿ ಶಿಸ್ತು ಪಾಲಿಸಿ. ರಜಾ ದಿನವೆಂದು ತಡವಾಗಿ ಮಲಗುವುದು ಅಥವಾ ತಡವಾಗಿ ಏಳುವುದು ತಪ್ಪು.
• ವಾರಾಂತ್ಯಗಳಲ್ಲಿ ಹೆಚ್ಚು ನಿದ್ರೆ ಮಾಡಬೇಡಿ
• ನಿಯಮಿತ ವ್ಯಾಯಾಮ, ನಿಯಮಿತ ಊಟ ಅಭ್ಯಾಸದಲ್ಲಿರಲಿ. ಹಸಿವಿನಿಂದ ಎಂದೂ ಮಲಗಬೇಡಿ
• ಮಲಗುವ ಸಮಯಕ್ಕೆ ಒಂದು ಗಂಟೆ ಮೊದಲು ಟಿವಿ, ಮೊಬೈಲ್ ವೀಕ್ಷಣರ ಬೇಡ.
•ಹಾಸಿಗೆಯನ್ನು ಮಲಗಲು ಮಾತ್ರ ಬಳಸಿ, ಹಿತವೆನಿಸುವ ತಾಪಮಾನ ಕೊಠಡಿಯಲ್ಲಿರಲಿ
• ಮಲಗುವ ಮುನ್ನ ವಿಶ್ರಾಂತಿ, ಸಂತಸ ತರುವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ
• ಚಾಕೊಲೇಟ್‌ಗಳನ್ನು ತಿನ್ನುವುದನ್ನು ತಪ್ಪಿಸಿ, ಕಾಫಿ ಸೇವಿಸಬೇಡಿ, ಮದ್ಯಪಾನ ಮಾಡಬೇಡಿ, ಮಾದಕ ದ್ರವ್ಯಗಳನ್ನು ಸೇವಿಸಬೇಡಿ, ಧೂಮಪಾನ ಮಾಡಬೇಡಿ
• ನಿದ್ರೆ ಬರಲು ಮಲಗುವ ಮಾತ್ರೆಗಳನ್ನು ಅಥವಾ ಕೌಂಟರ್‌ನಲ್ಲಿ ಲಭ್ಯವಿರುವ ಮಾತ್ರೆಗಳನ್ನು ಬಳಸಬೇಡಿ.
ಹದಿಹರೆಯದವರಲ್ಲಿ ನಿದ್ರಾಹೀನತೆಗೆ ವಿವರವಾದ ಮೌಲ್ಯಮಾಪನದ ಅಗತ್ಯವಿರುತ್ತದೆ ಮತ್ತು ಚಿಕಿತ್ಸೆಯನ್ನು ಈ ವಿವರಗಳಿಗೆ ಅನುಗುಣವಾಗಿ ಹೊಂದಿಸಬೇಕಾಗುತ್ತದೆ.