Food
ಅತಿಯಾಗಿ ಉಪ್ಪು ಸೇವಿಸುತ್ತಿದ್ದರೆ ಕಂಡುಬರುವ 7 ಪ್ರಮುಖ ಲಕ್ಷಣಗಳು
ಒಂದು ಅಡುಗೆಯನ್ನು ಹೆಚ್ಚು ರುಚಿಕರವಾಗಿಸುವಲ್ಲಿ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಉಪ್ಪಿನ ಪ್ರಮಾಣ ಹೆಚ್ಚಾದರೂ ರುಚಿ ಕಡಿಮೆಯಾಗುತ್ತದೆ.
ಉಪ್ಪು ಅಥವಾ ಸೋಡಿಯಂ ಕ್ಲೋರೈಡ್ ದೇಹದ ಸರಿಯಾದ ಕಾರ್ಯನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಒಂದು ಖನಿಜವಾಗಿದೆ.
ಉಪ್ಪನ್ನು ಅತಿಯಾಗಿ ಸೇವಿಸುವುದರಿಂದ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಅತಿಯಾಗಿ ಉಪ್ಪು ಸೇವಿಸಿದರೆ ಕಂಡುಬರುವ ಪ್ರಮುಖ ಲಕ್ಷಣಗಳು ಯಾವುವು ಎಂದು ತಿಳಿಯೋಣ.
ಆಹಾರದಲ್ಲಿ ಉಪ್ಪು ಹೆಚ್ಚಾದರೆ, ಅತಿಯಾದ ಬಾಯಾರಿಕೆಯಾಗುವ ಸಾಧ್ಯತೆ ಇದೆ. ಉಪ್ಪು ಜೀವಕೋಶಗಳಿಂದ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಅದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.
ಹೆಚ್ಚುವರಿ ಉಪ್ಪು ದೇಹದಲ್ಲಿ ನೀರನ್ನು ಉಳಿಸಿಕೊಳ್ಳಲು ಕಾರಣವಾಗುತ್ತದೆ. ಇದು ಕೈಗಳು, ಕಾಲುಗಳು ಮತ್ತು ಮುಖದಲ್ಲಿ ಊತಕ್ಕೆ ಕಾರಣವಾಗುತ್ತದೆ.
ರಕ್ತದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಸೋಡಿಯಂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
ಅತಿಯಾಗಿ ಉಪ್ಪು ತಿನ್ನುವುದು ನಿರ್ಜಲೀಕರಣ, ರಕ್ತದೊತ್ತಡದಲ್ಲಿನ ಬದಲಾವಣೆಗಳಿಂದ ತಲೆನೋವು ಉಂಟಾಗಬಹುದು.
ಇದು ಮೂತ್ರಪಿಂಡಗಳ ಹಾನಿ, ಕಾರ್ಯಕ್ಷಮತೆ ಕಡಿಮೆಯಾಗುವುದು ಮತ್ತು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು.