ಚೆನ್ನಾಗಿ ನಿದ್ರೆ ಬರಬೇಕು ಅಂದ್ರೆ, ನಮ್ಮ ಜೀವನಶೈಲಿ ಜೊತೆ, ನಮ್ಮ ಬೆಡ್ ರೂಮ್, ಬೆಡ್, ಬೆಡ್ ಶೀಟ್ ಎಲ್ಲವೂ ಸರಿಯಾಗಿ ಇರಬೇಕು. ಹಾಗಿದ್ರೆ ಮಾತ್ರ ನಿದ್ರೆ ಮಾಡೋದಕ್ಕೆ ಸಾಧ್ಯ. ಬೆಡ್ ಶೀಟ್ ಯಾವಾಗ್ಲೂ ಕ್ಲೀನ್ ಆಗಿರಬೇಕು. ಅದನ್ನ ಆಗಾಗ ಸ್ವಚ್ಛಗೊಳಿಸುವುದು ನೈರ್ಮಲ್ಯ ಮತ್ತು ತಾಜಾ ನಿದ್ರೆಯ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಏಕೆಂದರೆ ಬೆಡ್ ಶೀಟ್ ಕೆಲವೇ ದಿನಗಳಲ್ಲಿ ಕೊಳೆ, ತೈಲಗಳು ಮತ್ತು ಸೂಕ್ಷ್ಮಜೀವಿಗಳನ್ನು ಸಂಗ್ರಹಿಸುತ್ತೆ.
ಬೆಡ್ ಶೀಟನ್ನು ನಿಯಮಿತವಾಗಿ ವಾಶ್ ಮಾಡೋದ್ರಿಂದ ಬೆವರು, ಸತ್ತ ಚರ್ಮದ ಕೋಶಗಳು, ಧೂಳಿನ ಹುಳಗಳು, ಬ್ಯಾಕ್ಟೀರಿಯಾ ಮತ್ತು ಇತರ ಅಲರ್ಜಿಕಾರಕಗಳನ್ನು ತೆಗೆದುಹಾಕುತ್ತದೆ. ತೊಳೆಯದಿದ್ದರೆ, ಈ ವಸ್ತುಗಳು ಚರ್ಮದ ಕಿರಿಕಿರಿ, ಮೊಡವೆ, ಅಲರ್ಜಿ ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ವಚ್ಛವಾದ ಹೊದಿಕೆ ಆರೋಗ್ಯಕರ ಮತ್ತು ಹೆಚ್ಚು ಆಹ್ಲಾದಕರ ನಿದ್ರೆಯ ವಾತಾವರಣವನ್ನು ಸೃಷ್ಟಿಸುವ ಮೂಲಕ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತವೆ.
ಸಾಮಾನ್ಯವಾಗಿ ಬೆಡ್ ಶೀಟ್‌ಗಳನ್ನು 3-4 ವಾರಗಳಲ್ಲಿ ಒಂದು ಸಲ ಮನೆಗಳಲ್ಲಿ ತೊಳೆಯಲಾಗುತ್ತದೆ (changing bed sheets). ಇದರಿಂದ ಮೊಡವೆ, ಅಲರ್ಜಿಗಳು, ಎಕ್ಸಿಮಾ, ಆಸ್ತಮಾ, ಶೀತ ಮತ್ತು ಜ್ವರದಿಂದ ಹಿಡಿದು ನಿದ್ರೆಯ ಗುಣಮಟ್ಟ (quality sleep)ಕಡಿಮೆಯಾಗುವವರೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಶಾಕಿಂಗ್ ವಿಷ್ಯ ಏನಂದರೆ ಕೇವಲ ಏಳು ದಿನಗಳಲ್ಲಿ ಬೆಡ್ ನಲ್ಲಿ ನ್ಯುಮೋನಿಯಾ ಮತ್ತು ಗೊನೊರಿಯಾಕ್ಕೆ ಸಂಬಂಧಿಸಿದ ಬ್ಯಾಕ್ಟೀರಿಯಾಗಳು (bacteria) ಬೆಳೆಯಲು ಪ್ರಾರಂಭಿಸುತ್ತವೆ . ಇದರಿಂದ ಒಂದಲ್ಲ ಒಂದು ಅರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದುದರಿಂದ ಜನರು ತಮ್ಮ ಬೆಡ್ ಶೀಟ್ ಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು.
ಸಂಶೋಧನೆಯ ಸಮಯದಲ್ಲಿ, ಸೆವಿಲ್ಲೆ ವಿಶ್ವವಿದ್ಯಾನಿಲಯದ ಜೀವಶಾಸ್ತ್ರ ವಿಭಾಗವು ಸೂಕ್ಷ್ಮದರ್ಶಕದ ಅಡಿಯಲ್ಲಿ 4 ವಾರಗಳ ಹಳೆಯ ಬೆಡ್ ಶೀಟ್ ಗಳನ್ನು ಪರೀಕ್ಷಿಸಲಾಯಿತು. ಈ ಬೆಡ್ ಶೀಟ್ ಗಳಲ್ಲಿ ನ್ಯುಮೋನಿಯಾ, ಗೊನೊರಿಯಾ ಮತ್ತು ಅಪೆಂಡಿಸೈಟಿಸ್ಗೆ ಸಂಬಂಧಿಸಿರುವ ಬ್ಯಾಕ್ಟೀರಾಯಾಗಳು ಇರೋದು ಕಂಡು ಬಂದಿದೆ.
ಹಾಗಿದ್ರೆ ಬೆಡ್ ಶೀಟ್ ಗಳನ್ನು ಎಷ್ಟು ದಿನಕ್ಕೊಮ್ಮೆ ಬದಲಾಯಿಸಬೇಕು? ವಿಜ್ಞಾನದ ಪ್ರಕಾರ ಹೇಳೋದಾದರೆ ಬೆಡ್ ಶೀಟ್ಗಳು ಸ್ವಚ್ಛವಾಗಿ ಕಾಣಿಸಿದರೂ ಪ್ರತಿಯೊಬ್ಬರೂ ಪ್ರತಿ ವಾರ ತಮ್ಮ ಶೀಟ್ ಗಳನ್ನು ತೊಳೆಯಬೇಕು. ಇದು ಸಾಧ್ಯವಾಗದಿದ್ದರೆ, ಪ್ರತಿ 2 ವಾರಗಳಿಗೊಮ್ಮೆ, ಶೀಟ್ ಗಳನ್ನು ತೊಳೆಯಬೇಕು. ಏಕೆಂದರೆ ನಮ್ಮ ದೇಹವು ಪ್ರತಿದಿನ 40,000 ಸತ್ತ ಚರ್ಮವನ್ನು (dead skin)ಬಿಡುಗಡೆ ಮಾಡುತ್ತದೆ, ಇದು ನಮ್ಮ ಆರೋಗ್ಯ, ಇಮ್ಮ್ಯೂನಿಟಿ ಮತ್ತು ನಿದ್ರೆಯ ಮೇಲೆ ಪರಿಣಾಮ ಬೀರುವ ಬಹಳಷ್ಟು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ.
ಬೆಡ್ ಶೀಟ್ ಕ್ಲೀನ್ ಮಾಡಲು ಟಿಪ್ಸ್
ಬಿಸಿ ನೀರನ್ನು ಬಳಸಿ: ಸಾಧ್ಯವಾದರೆ, ಬ್ಯಾಕ್ಟೀರಿಯಾವನ್ನು ಕೊಲ್ಲಲು ಬೆಡ್ ಶೀಟ್ ಗಳನ್ನು ಬಿಸಿ ನೀರಿನಲ್ಲಿ ತೊಳೆಯಿರಿ.
ಹೆಚ್ಚುವರಿ ಡಿಟರ್ಜೆಂಟ್ ಮತ್ತು ಫ್ಯಾಬ್ರಿಕ್ ಸಾಫ್ಟ್ ನರ್ ಬಳಕೆ ತಪ್ಪಿಸಿ: ಹೆಚ್ಚು ಡಿಟರ್ಜೆಂಟ್ ಅಥವಾ ಸಾಫ್ಟ್ ನರ್ ಬಳಸುವುದರಿಂದ ಕಾಲಾನಂತರದಲ್ಲಿ ಬೆಡ್ ಶೀಟ್ ಹಾಳಾಗುವ ಸಾಧ್ಯತೆ ಇದೆ.
ಚೆನ್ನಾಗಿ ಒಣಗಿಸುವುದು: ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಗಟ್ಟಲು ವಾಶ್ ಮಾಡಿದ ನಂತರ ಬೆಡ್ ಶೀಟನ್ನು ಚೆನ್ನಾಗಿ ಡ್ರೈ ಮಾಡೋದು ಮುಖ್ಯ.