Cardiac arrest… ಜೀವ ಉಳಿಸಲು ಮೊದಲ ಆ ೫ ನಿಮಿಷ ಇದನ್ನ ಮಾಡಿ

First Published Jun 7, 2022, 4:31 PM IST

ಇತ್ತೀಚಿಗೆ ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಆದರೆ ಹೃದಯದ ಸಮಸ್ಯೆಯಿಂದ ಉಂಟಾಗುವ ಎಲ್ಲಾ ಸಾವು ಹೃದಾಯಾಘಾತ ಅಲ್ಲ. ಜನರು ಹಾರ್ಟ್ ಅಟ್ಯಾಕ್ (ಹೃದಯಾಘಾತ) ಮತ್ತು ಕಾರ್ಡಿಯಾಕ್ ಅರೆಸ್ಟ್ (ಹೃದಯ ಸ್ತಂಭನ)ಅನ್ನು ಒಂದೇ ಎಂದು ಭಾವಿಸುತ್ತಾರೆ, ಆದರೆ ಡಾಕ್ಟರ್ಸ್ ಎರಡರ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎನ್ನುತ್ತಾರೆ. ಹೃದಯ ಸ್ತಂಭನ ಮತ್ತು ಹೃದಯಾಘಾತ ಎರಡೂ ವಿಭಿನ್ನ ವಿಷಯಗಳಾಗಿವೆ. ಅವುಗಳನ್ನು ನೀವು ಅರ್ಥ ಮಾಡ್ಕೋಳೊದು ಉತ್ತಮ. 

ಭಾರತದಲ್ಲಿ ಹಠಾತ್ ಕಾರ್ಡಿಯಾಕ್ ಅರೆಸ್ಟ್ ನ(Cardiac Arrest) ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಆತಂಕಕಾರಿ ವಿಷಯವೆಂದರೆ ಜನರಿಗೆ ಹೃದಯ ಸ್ತಂಭನದ ಬಗ್ಗೆ ತಿಳಿದಿಲ್ಲ. ಜನರು ಇದನ್ನು ಹೃದಯಾಘಾತ ಎಂದು ಪರಿಗಣಿಸುತ್ತಾರೆ ಮತ್ತು 5 ನಿಮಿಷಗಳಲ್ಲಿ ಮಾಡಬಹುದಾದ ಚಿಕಿತ್ಸೆಯನ್ನು ತುಂಬಾ ತಡವಾಗಿ ಮಾಡುತ್ತಾರೆ. ಇದರಿಂದ ರೋಗಿಯ ಪ್ರಾಣ ಬೇಗನೆ ಹೋಗುತ್ತೆ.

ಹೃದಯ ಸ್ತಂಭನದಲ್ಲಿ, ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ಲೇಟ್ ಆದರೆ, ಅಷ್ಟೊತ್ತಿಗಾಗಲೇ ಅವನ ಜೀವ ಹೋಗುವ(Death) ಸಾಧ್ಯತೆ ಇದೆ. ಹಾಗಾಗಿ ಹೃದಯಾಘಾತ ಮತ್ತು ಹೃದಯ ಸ್ತಂಭನದ ನಡುವಿನ ವ್ಯತ್ಯಾಸವೇನು ಮತ್ತು ಹಠಾತ್ ಹೃದಯ ಸ್ತಂಭನದಲ್ಲಿ ಕೇವಲ 5 ನಿಮಿಷಗಳಲ್ಲಿ ರೋಗಿಯ ಜೀವವನ್ನು ಹೇಗೆ ಉಳಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. 

ಹೃದಯಾಘಾತ (Heart attack) ಮತ್ತು ಹೃದಯ ಸ್ತಂಭನದ ನಡುವಿನ ವ್ಯತ್ಯಾಸ

ಕೊರೋನರಿ ಧಮನಿಯಲ್ಲಿ ಬ್ಲೋಕ್ ಉಂಟಾದಾಗ ಹೃದಯಾಘಾತ ಸಂಭವಿಸುತ್ತದೆ. ಹೀಗಾದಾಗ, ರಕ್ತವು ಹೃದಯದ ಸ್ನಾಯುವನ್ನು ತಲುಪೋದಿಲ್ಲ. ನಮ್ಮ ಹೃದಯವು ಒಂದು ಸ್ನಾಯು, ಅದು ಕೆಲಸ ಮಾಡಲು ಆಮ್ಲಜನಕಯುಕ್ತ ರಕ್ತದ ಅಗತ್ಯವಿದೆ. ಹಾಗಾಗಿ ಕೊರೋನರಿ ಧಮನಿಯಲ್ಲಿ  ಬ್ಲಾಕ್ ಉಂಟಾದಾಗ, ಅದು ಹೃದಯಾಘಾತಕ್ಕೆ ಕಾರಣವಾಗುತ್ತೆ. 

ಹೃದಯಾಘಾತಕ್ಕೊಳಗಾದ ರೋಗಿಗೆ ಸರಿಯಾದ ಸಮಯದಲ್ಲಿ ರೋಗಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು. ಜೊತೆಗೆ ಕೊರೋನರಿ ಧಮನಿಯ ಬ್ಲಾಕ್ (Block) ತೆರೆಯುವ ಮೂಲಕ ವ್ಯಕ್ತಿಯನ್ನು ಉಳಿಸಬಹುದು. ಹಾಗೆ ಮಾಡಲು ರೋಗಿಗೆ 45 ನಿಮಿಷಗಳ ಕಾಲಾವಕಾಶವಿದೆ. 

ಆದರೆ, ಹೃದಯ ಸ್ತಂಭನ ತುಂಬಾನೆ ಡೇಂಜರ್ಸ್(Dangerous), ಹೃದಯ ಸ್ತಂಬನ ಉಂಟಾದಾಗ ಹೃದಯ ಬಡಿತವು ಇದ್ದಕ್ಕಿದ್ದಂತೆ ನಿಲ್ಲುತ್ತದೆ. ಇದರಲ್ಲಿ, ರೋಗಿಯನ್ನು ಉಳಿಸಲು ಕೇವಲ 5 ನಿಮಿಷಗಳು ಮಾತ್ರವಿರುತ್ತದೆ. ಇದರ ನಂತರ, ವೈದ್ಯರು ಸಹ ರೋಗಿಯನ್ನು ಉಳಿಸಲು ಸಾಧ್ಯವಿಲ್ಲ. ಹಾಗಾದರೆ ರೋಗಿಯನ್ನು ಉಳಿಸೋದು ಹೇಗೆ? 

ಕಾರ್ಡಿಯಾಕ್ ಅರೆಸ್ಟ್ ನ ಲಕ್ಷಣಗಳು

ಯಾರಾದರೂ ಇದ್ದಕ್ಕಿದ್ದಂತೆ ಮೂರ್ಛೆ(Unconcious) ಹೋದರೆ, ಅವರು ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎಂದು ಅರ್ಥಮಾಡಿಕೊಳ್ಳಿ.
ಆ ವ್ಯಕ್ತಿಗೆ  20-30 ಸೆಕೆಂಡುಗಳಲ್ಲಿ ಪ್ರಜ್ಞೆ ಬರದಿದ್ದರೆ, ಹೃದಯ ಸ್ತಂಭನ ಸಂಭವಿಸಿದೆ ಎಂದರ್ಥ.
ಕಾರ್ಡಿಯಾಕ್ ಅರೆಸ್ಟ್ ಸಮಯದಲ್ಲಿ, ಹೃದಯ ಬಡಿತವು 300-400 ಕ್ಕೆ ಏರುತ್ತದೆ.
ರಕ್ತದೊತ್ತಡವು ವೇಗವಾಗಿ ಕಡಿಮೆಯಾಗುತ್ತೆ.
ಹೃದಯದ ಕಾರ್ಯನಿರ್ವಹಣೆಯಲ್ಲಿ ಅನಿಯಮಿತತೆ ಉಂಟಾಗುತ್ತೆ

ಹೃದಯ ಸ್ತಂಭನವಾದಾಗ ಮೊದಲು ಏನು ಮಾಡಬೇಕು

ಯಾರಿಗಾದರೂ ಹೃದಯ ಸ್ತಂಭನವಾದರೆ, ಮೊದಲ 5 ನಿಮಿಷಗಳು ಅತ್ಯಂತ ಮುಖ್ಯ. ನಿಮ್ಮ ಸುತ್ತಮುತ್ತಲಿನ ಯಾರಿಗಾದರೂ ಹೃದಯ ಸ್ತಂಭನವಾದರೆ, ಮೊದಲು ಆಂಬ್ಯುಲೆನ್ಸ್ ಗೆ(Ambulance) ಕರೆ ಮಾಡಿ. ಇದರ ನಂತರ, ರೋಗಿಗೆ ತಕ್ಷಣವೇ ಸಿಪಿಆರ್ ನೀಡಬೇಕು. ಸಿಪಿಆರ್ ಸಹಾಯದಿಂದ, ನೀವು ರೋಗಿಯ ಜೀವವನ್ನು ಉಳಿಸಬಹುದು.
 

ಸಿಪಿಆರ್ ಅನ್ನು ಹೇಗೆ ನೀಡಲಾಗುತ್ತದೆ?

ಸಿಪಿಆರ್ (CPR) ನೀಡಲು, ಮೊದಲನೆಯದಾಗಿ, ರೋಗಿ ಎದೆಯ ಮೇಲೆ 30 ಸಲ  ವೇಗವಾಗಿ ಒತ್ತಡವನ್ನು ಹಾಕಿ. ಇದಕ್ಕಾಗಿ, ನಿಮ್ಮ ಎರಡೂ ಕೈಗಳನ್ನು ಒಟ್ಟಿಗೆ ಹಿಡಿಯಿರಿ ಮತ್ತು ಎದೆಯ ಮಧ್ಯದಲ್ಲಿ ಬಲವಾಗಿ ಒತ್ತುವ ಮೂಲಕ ಹೊಡೆಯಿರಿ. ನೀವು ಎಷ್ಟು ಬಲವಾಗಿ ಹೊಡೆಯಬೇಕು ಎಂದರೆ ವ್ಯಕ್ತಿಯ ಮೂಳೆಗಳು ಸಹ ಮುರಿಯಬಹುದು, ನೀವು ಬಹಳ ವೇಗವಾಗಿ ಹೊಡೆಯಬೇಕು. 

ಎದೆಯ ಮಧ್ಯದಲ್ಲಿ ಬಲವಾಗಿ ಹೊಡೆಯುತ್ತಲೇ ಇರಿ. ಎದೆಯು ಸುಮಾರು 1 ಇಂಚು ಒಳಕ್ಕೆ ಹೋಗುವವರೆಗೆ ಎದೆಗೆ ಹೊಡೆಯಿರಿ. ನೀವು 1 ನಿಮಿಷದಲ್ಲಿ ಎದೆಯನ್ನು 100 ಬಾರಿ ಗಟ್ಟಿಯಾಗಿ ಒತ್ತಬೇಕು. ಹೌದು, ಕಂಪ್ರೆಶನ್ ಟೈಮ್ ನಲ್ಲಿ(Compression time)  ಎದೆಯನ್ನು ಸಂಪೂರ್ಣವಾಗಿ ಮೇಲೇಳಲು ಬಿಡಬೇಕು ಎಂಬುದನ್ನು ನೆನಪಿನಲ್ಲಿಡಿ. ರೋಗಿಯು ಆಸ್ಪತ್ರೆಯನ್ನು ತಲುಪುವವರೆಗೆ ನೀವು ಇದನ್ನು ಮಾಡಬೇಕು. ಈ ರೀತಿಯಾಗಿ ವ್ಯಕ್ತಿಯ ಪ್ರಾಣ ಉಳಿಸಬಹುದು. 

ನೀವು ಈ ಬಗ್ಗೆ ಸರಿಯಾಗಿ ತಿಳಿಯಲು ವೈದ್ಯರನ್ನು ಸಂಪರ್ಕಿಸಿ (Consult Doctor), ಅವರಿಂದ ಉತ್ತಮ ಮಾಹಿತಿ ಪಡೆಯೋದು ಮುಖ್ಯ. ಜೊತೆಗೆ ಅವರು ಹೇಳಿದಂತೆ ಸಿಪಿಆರ್ ಮಾಡಿದ್ರೆ ಜೀವವನ್ನು ಉಳಿಸುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ. 

click me!