ಆಲ್ಕೋಹಾಲ್ ನಿಂದ ಕೂಡಿರುವ ರಮ್ ನಶೆ ಏರಿಸುತ್ತೆ. ಅದು ಆರೋಗ್ಯಕ್ಕೆ ಹಾನಿಕರ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ಆದ್ರೆ ಇದಲ್ಲೂ ಔಷಧಿ ಗುಣವಿದ್ದು, ಅದ್ರ ಬಳಕೆ ಗೊತ್ತಿದ್ರೆ ಆರೋಗ್ಯ ಕಾಪಾಡಿಕೊಳ್ಬಹುದು.
ರಮ್ (Rum) ಬರೀ ನಶೆ ಮಾತ್ರವಲ್ಲ ಔಷಧಿ (medicine)ಯೂ ಹೌದು. ಈ ಮಾತು ಕೇಳಿದ್ರೆ ನಿಮಗೆ ಅಚ್ಚರಿ ಆಗ್ಬಹುದು. ಆದ್ರೆ ರಮ್ ಸರಿಯಾದ ಪ್ರಮಾಣದಲ್ಲಿ, ಸರಿಯಾದ ವಿಧಾನದಲ್ಲಿ ಸೇವನೆ ಮಾಡಿದ್ರೆ ನಮ್ಮ 10 ರೋಗ (disease)ಗಳಿಗೆ ಇದು ಪರಿಹಾರ ನೀಡುತ್ತದೆ. ವಿಶ್ವದಲ್ಲಿ ಅತಿ ಹೆಚ್ಚು ಸೇವನೆ ಮಾಡುವ ಈ ರಮ್ ನಿಂದ ಯಾವೆಲ್ಲ ರೋಗ ಗುಣವಾಗುತ್ತೆ ಎಂಬ ಮಾಹಿತಿ ಇಲ್ಲಿದೆ.
ರಮ್ ಅಂದ್ರೇನು? : ರಮ್ ಅನ್ನು ಕಬ್ಬಿನಿಂದ ತಯಾರಿಸಲಾಗುತ್ತದೆ. ಇದಕ್ಕಾಗಿ ಮೊದಲ ಕಬ್ಬಿನ ರಸವನ್ನು ತಯಾರಿಸಲಾಗುತ್ತದೆ. ಇದರ ನಂತರ, ಸಕ್ಕರೆ ಇತ್ಯಾದಿಗಳನ್ನು ಸ್ಥಿರ ಸೂತ್ರದ ಪ್ರಕಾರ ಇದಕ್ಕೆ ಸೇರಿಸಲಾಗುತ್ತದೆ. ಈ ಮಿಶ್ರಣವನ್ನು ವಿವಿಧ ತಾಪಮಾನದಲ್ಲಿ ಕುದಿಸಲಾಗುತ್ತದೆ. ನಂತರ ಅದನ್ನು ತಂಪಾಗಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಒಮ್ಮೆ ಅಥವಾ ಎರಡು ಬಾರಿ ಮಾಡಲಾಗುತ್ತದೆ. ಇದರ ನಂತರ ಅದಕ್ಕೆ ಆಲ್ಕೋಹಾಲ್ ಇತ್ಯಾದಿಗಳನ್ನು ಬೆರೆಸಿ ಮತ್ತೆ ಕುದಿಸಲಾಗುತ್ತದೆ. ಅನೇಕ ಬಾರಿ ಡ್ರಿಲ್ಲರ್ ಸಹಾಯದಿಂದ ಸಂಸ್ಕರಿಸಲಾಗುತ್ತದೆ. ನಂತರ ಅದಕ್ಕೆ ಹಲವು ಬಗೆಯ ಫ್ಲೇವರ್ ಮತ್ತು ಕೆಲವು ರಾಸಾಯನಿಕಗಳನ್ನು ಸೇರಿಸಿ ಪ್ಯಾಕ್ ಮಾಡಲಾಗುತ್ತದೆ.
ನೀವು ತಾಜಾ ಹಣ್ಣುಗಳ ಬದಲು, ಜ್ಯೂಸ್ ಕುಡಿಯೋದಕ್ಕೆ ಇಷ್ಟ ಪಡ್ತೀರಾ? ಹಾಗಿದ್ರೆ ಇದನ್ನ ಓದ್ಲೇ ಬೇಕು…
ಎಚ್ಚರಿಕೆ : ರಮ್ ಸೇವನೆಯಿಂದ ಆಗುವ ಲಾಭದ ಮೊದಲು ಅದ್ರ ನಷ್ಟವನ್ನು ತಿಳಿದುಕೊಳ್ಳುವುದು ಉತ್ತಮ. ರಮ್ ನಲ್ಲಿ ಶೇಕಡಾ 40 -60ರಷ್ಟು ಆಲ್ಕೋಹಾಲ್ ಇರುತ್ತದೆ. ಹಾಗಾಗಿ ಪ್ರತಿ ದಿನ ರಮ್ ಸೇವನೆ ಯೋಗ್ಯವಲ್ಲ. ವೈದ್ಯರ ಸಲಹೆ ಮೇರೆಗೆ ನೀವು ನಿಗದಿತ ಪ್ರಮಾಣದಲ್ಲಿ ರಮ್ ಸೇವನೆ ಮಾಡಬಹುದು.
ಮೈಕೈ ನೋವು : ಅತಿಯಾದ ಮೈಕೈನೋವು, ಸಂಧಿ ನೋವಿನಿಂದ ಬಳಲುತ್ತಿರುವವರಿಗೆ ರಮ್ ರಾಮಬಾಣದಂತೆ ಕೆಲಸ ಮಾಡುತ್ತದೆ. ವೃದ್ಧರಲ್ಲಿ ಕಾಡುವ ಮೈಕೈನೋವಿಗೆ ಇದು ಔಷಧಿಯಂತೆ ಕೆಲಸ ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳ : ರಮ್ ಸೇವೆನ ಮಾಡುವುದ್ರಿಂದ ರೋಗನಿರೋಧಕ ಶಕ್ತಿಯಲ್ಲಿ ಹೆಚ್ಚಳ ಕಂಡು ಬರುತ್ತದೆ. ಇದ್ರಿಂದ ರೋಗಗಳ ಅಪಾಯ ಕಡಿಮೆ. ರಮ್ ನಲ್ಲಿರುವ ಪೋಷಕಾಂಶಗಳು, ನಿಮ್ಮ ದೇಹ ಕೆಲ ರೋಗಗಳ ವಿರುದ್ಧ ಹೋರಾಡಲು ಶಕ್ತಿ ನೀಡುತ್ತದೆ.
ಉಷ್ಣತೆ ಹೆಚ್ಚಳ : ದೇಹದ ಉಷ್ಣತೆಯನ್ನು ರಮ್ ಹೆಚ್ಚಿಸುತ್ತದೆ. ಯಾವುದೇ ವ್ಯಕ್ತಿ ಅತಿ ಹೆಚ್ಚು ಚಳಿಯಿಂದ ಬಳಲುತ್ತಿದ್ದರೆ ದೇಹವನ್ನು ಬಬೆಚ್ಚಗಿಡಲು ರಮ್ ಸೇವನೆ ಮಾಡಬಹುದು. ಚಳಿಗಾಲದಲ್ಲಿ ರಮ್ ಸೇವನೆ ಸೂಕ್ತವೆಂದು ಭಾವಿಸಲಾಗುತ್ತದೆ.
ನೆಗಡಿಗೆ ಮದ್ದು : ನೆಗಡಿ, ಕೆಮ್ಮಿನಿಂದ ಬಳಲುತ್ತಿರುವವರು ಸ್ವಲ್ಪ ಪ್ರಮಾಣದಲ್ಲಿ ರಮ್ ತೆಗೆದುಕೊಳ್ಳಬೇಕು. ವಿಶೇಷವಾಗಿ ಚಳಿಗಾಲದಲ್ಲಿ ಕಾಡುವ ನೆಗಡಿಗೆ ಈ ರಮ್ ಔಷಧಿಯಂತೆ ಕೆಲಸ ಮಾಡುತ್ತದೆ. ನೆಗಡಿಯನ್ನು ದೂರ ಮಾಡುವ ಕೆಲಸ ಮಾಡುತ್ತದೆ.
ಈ ರೋಗದ ನಿಯಂತ್ರಣ : ರಮ್ ಹೃದಯಕ್ಕೆ ಒಳ್ಳೆಯದು. ಸೂಕ್ತ ಪ್ರಮಾಣದಲ್ಲಿ ರಮ್ ತೆಗೆದುಕೊಳ್ಳುವುದರಿಂದ ಹೃದಯಾಘಾತದ ಸಮಸ್ಯೆ ದೂರವಾಗುತ್ತದೆ. ಕ್ಯಾನ್ಸರ್ ನಂತಹ ಖಾಯಿಲೆಯಿಂದಲೂ ಮನುಷ್ಯ ದೂರ ಇರಬಹುದು.
ನಿಮಗೆ ಕಿವಿ ಸರಿಯಾಗಿ ಕೇಳ್ಬೇಕಾ: ಹಾಗಿದ್ರೆ ಈ ತಪ್ಪುಗಳನ್ನ ಇಂದೇ ನಿಲ್ಲಿಸಿ
ನಿದ್ರೆ ಸಮಸ್ಯೆಗೆ ಪರಿಹಾರ : ನಿದ್ರಾಹೀನತೆಯಿಂದ ಬಳಲುತ್ತಿರುವವರು, ದೇಹಕ್ಕೆ ವಿಶ್ರಾಂತಿ ನೀಡಬೇಕು ಅಂದ್ರೆ ರಮ್ ಸೇವನೆ ಮಾಡಬೇಕು. ರಾತ್ರಿ ರಮ್ ಸೇವನೆ ಮಾಡಿದ ತಕ್ಷಣ ನಿದ್ರೆ ಆವರಿಸುತ್ತದೆ.
ಮಧುಮೇಹದಿಂದ ದೂರ : ಮಧುಮೇಹವನ್ನು ಬರದಂತೆ ತಡೆಯುತ್ತದೆ. ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಇದು ನಿಯಂತ್ರಿಸುತ್ತದೆ.
ಮಾನಸಿಕ ಶಾಂತಿ : ರಮ್ ಸೇವನೆಯಿಂದ ವ್ಯಕ್ತಿಗೆ ಮಾನಸಿಕ ಶಾಮತಿ ಪ್ರಾಪ್ತವಾಗುತ್ತದೆ. ಆದ್ರೆ ಅತಿಯಾಗಿ ಸೇವನೆ ಮಾಡಿದ್ರೆ ಸಮಸ್ಯೆ ಹೆಚ್ಚಾಗುತ್ತದೆ. ಆರೋಗ್ಯಕ್ಕೆ ಅಗತ್ಯವಿರುಷ್ಟು ರಮ್ ಮಾತ್ರ ಸೇವನೆ ಮಾಡಬೇಕು.