Dec 13, 2024, 8:56 PM IST
ವಿಜಯಪುರದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿ ಹೋರಾಟಕ್ಕೆ ನಮ್ಮ ತಕರಾರಿಲ್ಲ. ಆದರೆ, ಸಂವಿಧಾನ ಪರವಾಗಿ ಹೋರಾಟ ಇರಬೇಕು. ಬಿಜೆಪಿ ಸರ್ಕಾರ ಪಂಚಮಸಾಲಿಗಳಿಗೆ ಟೋಪಿ ಹಾಕಿದೆ. ಹೈಕೋರ್ಟ್‌ಗೆ ಅಫಿಡವಿಟ್ ಹಾಕಿದ್ಯಾರು. ಇದೆ ಸ್ವಾಮೀಜಿಗಳು ಇದ್ದರಲ್ಲ, ಆಗ ಹೋರಾಟ ಮಾಡಬೇಕಿತ್ತು. ಇದೆಲ್ಲ ಮಾಡಿದ್ದು ಬಿಜೆಪಿ ಸರ್ಕಾರದವರು. ರಸೂಲ್ ಎಂಬಾತ ಸುಪ್ರೀಂ ಕೋರ್ಟಗೆ ಹೋದರು. ಆಗಿನ ಅಡ್ವೋಕೇಟ್ ಜನರಲ್ ಇದರಲ್ಲಿ ಬದಲಾವಣೆ ಮಾಡಲ್ಲ ಎಂದು ಹೇಳಿದರು.
ಮೀಸಲಾತಿ ಹೋರಾಟ ಜಾಗಕ್ಕೆ ನಾನು ಮೂರು ಜನ ಮಂತ್ರಿಗಳನ್ನ ಕಳಿಸಿದ್ದೆ. ಅವರು ಹೋದಾಗ ನಾವು ಸಿಎಂ ಜೊತೆಗೆ ಮಾತನಾಡುತ್ತೇವೆ ಅವರನ್ನು ಕರೆಸಿ ಎಂದರು. ಅವರು ಹೋರಾಟ ಮಾಡುವ ಸ್ಥಳಕ್ಕೆ ಸಿಎಂ ಬರಬೇಕು ಎಂದರು. ಅವರು ಹೇಳಿದ ಸ್ಥಳಕ್ಕೆ ಎಲ್ಲ ಕಡೆಗೂ ಸಿಎಂ ಹೋಗುವುದಕ್ಕೆ ಆಗುತ್ತಾ? ನಾನು ಮಾತನಾಡೋಣ ಬನ್ನಿ ಎಂದರೂ ಬರಲಿಲ್ಲ. ಆಗ ಸುವರ್ಣ ಸೌಧಕ್ಕೆ ನುಗ್ಗುವುದಕ್ಕೆ ಪ್ರಯತ್ನ ಮಾಡಿದರು. ಕಲ್ಲು ತೂರಾಟ ಮಾಡಿದ್ದರಿಂದ ಪೊಲೀಸರಿಗೂ ಗಾಯಗಳಾದವು ಆಗಲೂ ಸುಮ್ಮನಿದ್ದು ಸುವರ್ಣ ಸೌಧಕ್ಕೆ ನುಗ್ಗಲು ಬಿಡಬೇಕಿತ್ತಾ ಎಂದು ಪ್ರಶ್ನೆ ಮಾಡಿದರು.
ನಮ್ಮ ಬಳಿ ಪ್ರತಿಭಟನಾಕಾರರು ಕಲ್ಲು ತೂರಾಟ ಮಾಡಿದ್ದಕ್ಕೆ ಸಾಕಷಿಗಳಿವೆ. ಪೋಟೋ ಬೇಕಾದರೂ ತೋರಿಸ್ತೀನಿ. ಕಾನೂನು ಕೈಗೆ ತೆಗೆದುಕೊಂಡರೆ ಸರ್ಕಾರ ಸುಮ್ಮನಿರಲ್ಲ. ಶಾಂತಿಯುತವಾಗಿ ಹೋರಾಟ ಮಾಡಬೇಕು. ಸಿಎಂ ಲಿಂಗಾಯತ ವಿರೋಧಿ ಎಂಬ ಸ್ವಾಮೀಜಿ ಆರೋಪದ ಬಗ್ಗೆ ಮಾತನಾಡಲ್ಲ. ಸ್ವಾಮೀಜಿ ಮಾತನಾಡಿರೋದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.