ರೈತರು, ದೇವಸ್ಥಾನದ ಜಮೀನು ನಾವು ಮುಟ್ಟಲ್ಲ; ಜಮೀರ್

ರೈತರು, ದೇವಸ್ಥಾನದ ಜಮೀನು ನಾವು ಮುಟ್ಟಲ್ಲ; ಜಮೀರ್

Published : Dec 13, 2024, 08:21 PM ISTUpdated : Dec 13, 2024, 08:22 PM IST

ಖಾಸಗಿ ವ್ಯಕ್ತಿಗಳ ಒತ್ತುವರಿಯಲ್ಲಿರುವ 17 ಸಾವಿರ ಎಕರೆ ವಕ್ಫ್ ಆಸ್ತಿಯನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಆದರೆ, ದೇವಸ್ಥಾನ ಮತ್ತು ರೈತರ ಜಮೀನುಗಳನ್ನು ಮುಟ್ಟುವುದಿಲ್ಲ ಎಂದು ಸಚಿವ ಜಮೀರ್ ಅಹಮದ್ ಖಾನ್ ಭರವಸೆ ನೀಡಿದ್ದಾರೆ. ಒಟ್ಟು 1.28 ಲಕ್ಷ ಎಕರೆ ವಕ್ಫ್ ಆಸ್ತಿಯಲ್ಲಿ ಈಗ ಕೇವಲ 20,300 ಎಕರೆ ಉಳಿದಿದ್ದು, 17 ಸಾವಿರ ಎಕರೆ ಖಾಸಗಿಯವರ ಒತ್ತುವರಿಯಲ್ಲಿದೆ.

ವಿಧಾನ ಪರಿಷತ್: ನನಗೆ ಮಂತ್ರಿ ಸ್ಥಾನ ನೀಡಿದ್ದಕ್ಕೆ ನೀನು ಏನು ಮಾಡಿದೆ ಎಂದು ದೇವರು ನಾಳೆ ಕೇಳಿದರೆ ನಾನು ಉತ್ತರ ಕೊಡಬೇಕಲ್ವಾ, ಹಾಗಾಗಿ ಒತ್ತುವರಿಯಾಗಿರುವ ವಕ್ಫ್‌ ಆಸ್ತಿ ವಾಪಸ್‌ ಪಡೆಯಲು ಕ್ರಮ ವಹಿಸಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ದೇವಸ್ಥಾನ ಹಾಗೂ ರೈತರ ಜಮೀನನ್ನು ನಾವು ಮುಟ್ಟುವುದಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್‌ ಸಚಿವ ಜಮೀರ್‌ ಅಹಮದ್‌ ಖಾನ್‌ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, ದೇವರು ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ನಿನಗೆ ಮಂತ್ರಿ ಸ್ಥಾನ ಕೊಟ್ಟಿದ್ದಕ್ಕೆ ಏನು ಮಾಡಿದೆಯಪ್ಪಾ ಎಂದು ನಾಳೆ ನನ್ನನ್ನು ದೇವರು ಕೇಳಬಹುದು. ಆಗ ನಾನು ಉತ್ತರ ಕೊಡಬೇಕಲ್ವಾ? ಹಾಗಾಗಿ ರಾಜ್ಯದಲ್ಲಿ ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿರುವ 17 ಸಾವಿರ ಎಕರೆ ವಕ್ಫ್‌ ಆಸ್ತಿ ವಾಪಸ್‌ ಪಡೆಯಲು ಕ್ರಮ ವಹಿಸಲಾಗುವುದು. ಅದನ್ನು ಬಿಟ್ಟು ಯಾವುದೇ ಕಾರಣಕ್ಕೂ ದೇವಸ್ಥಾನ ಅಥವಾ ರೈತರ ಜಮೀನು ಮುಟ್ಟುವುದಿಲ್ಲ. ಅಲ್ಲದೆ, ಯಾವುದೇ ದೇವಸ್ಥಾನದ ಜಾಗ ಅಥವಾ ರೈತರ ಜಾಗವನ್ನು ವಕ್ಫ್‌ ಎಂದು ನಮೂದಿಸಿರುವ ಪ್ರಕರಣಗಳ ದಾಖಲೆ ಇದ್ದರೆ ಕೊಡಿ. ಕೂಡಲೇ ಅದನ್ನು ಸರಿಪಡಿಸಲಾಗುವುದು. ಅದನ್ನು ಬಿಟ್ಟು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬೇಡಿ ಎಂದು ಕೈಮುಗಿದು ಸದಸ್ಯರಲ್ಲಿ ಮನವಿ ಮಾಡಿದರು.

ವಕ್ಫ್‌ ಆಸ್ತಿ ವಿವಾದ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ವಕ್ಫ್‌ಗೆ ಸಂಬಂಧಿಸಿದ 1.28 ಲಕ್ಷ ಎಕರೆ ಆಸ್ತಿ ಪೈಕಿ ಭೂ ಸುಧಾರಣೆ, ಇನಾಂ, ಸರ್ಕಾರದಿಂದ ಒತ್ತುವರಿ ಹೀಗೆ ನಾನಾ ಕಾರಣಗಳಿಂದಾಗಿ ಈಗ 20,300 ಎಕರೆ ಮಾತ್ರ ಉಳಿದಿದೆ. ಇದರಲ್ಲಿ 17 ಸಾವಿರ ಎಕರೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ತೆರವು ಮಾಡಲು ಉದ್ದೇಶಿಸಲಾಗಿದೆ. ಆದರೆ ದೇವಸ್ಥಾನ, ರೈತರ ಆಸ್ತಿ ತೆರವು ಮಾಡುವುದಿಲ್ಲ ಎಂದರು.

20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
22:52ಅವಳಿ ರಣರಂಗ.. ತ್ರಿವಳಿ ಚದುರಂಗ: ಸಿದ್ದರಾಮಯ್ಯಗೆ ಸತ್ವಪರೀಕ್ಷೆ.. ಕನಕಪುರ ಬಂಡೆಗೆ ಅಗ್ನಿಪರೀಕ್ಷೆ!
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
Read more