Dec 13, 2024, 10:27 PM IST
ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ2 ಚಿತ್ರ ಭಾರಿ ಯಶಸ್ಸು ಗಳಿಸಿದೆ. ಈಗಾಗಲೇ ಸಾವಿರ ಕೋಟಿ ರೂಪಾಯಿ ಗಳಿಸಿದೆ. ಈ ಯಶಸ್ಸಿನ ನಡುವೆ ಅಲ್ಲು ಅರ್ಜುನ್ ಅರೆಸ್ಟ್ ಆಗಿ ಇದೀಗ ಹೈಕೋರ್ಟ್‍ನಿಂದ ಮಧ್ಯಂತರ ಜಾಮೀನು ಪಡೆದಿದ್ದಾರೆ. ಕಾಲ್ತುಳಿತಕ್ಕೆ ಅಭಿಮಾನಿ ಮೃತಪಟ್ಟ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ಬಂಧಿಸಿ ನಾಂಪಲ್ಲಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ತೆಲಂಗಾಣ ಹೈಕೋರ್ಟ್ ನಟನಿಗೆ ಮಧ್ಯಂತರ ಜಾಮೀನು ನೀಡಿದೆ. ಇತ್ತ ರೇಣುಕಾಸ್ವಾಮಿ ಪ್ರಕರಣದಲ್ಲಿ ಶಸ್ತ್ರಚಿಕಿತ್ಸೆಗಾಗಿ ಹೊರಬಂದಿರುವ ನಟ ದರ್ಶನ್ ಹಾಗೂ ಜೈಲಿನ ಒಳಗಿರುವ ಪವಿತ್ರಾ ಸೇರಿದಂತೆ 7 ಆರೋಪಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ನಟ ದರ್ಶನ್, ಪವಿತ್ರ ಸೇರಿದಂತೆ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.