ವಯಸ್ಸಾದ ಮೇಲೆ ಕೀಲು ನೋವು, ಮೂತ್ರ ಸೋಂಕು ಕಾಡಬಾರದು ಅಂದ್ರೆ ಹೀಗ್ ಮಾಡ್ಬೇಡಿ!

First Published Dec 5, 2022, 6:06 PM IST

ಯೂರಿನ್ ಸೋಂಕಿನ ಸಮಸ್ಯೆ ಯಾರನ್ನಾದರೂ ಕಾಡಬಹುದು, ಆದರೆ ನೀವು ಅವುಗಳನ್ನು ತಪ್ಪಿಸಲು ಬಯಸೋದಾದ್ರೆ, ಈಗಲೇ ಅದಕ್ಕಾಗಿ ತಯಾರಿ ಪ್ರಾರಂಭಿಸಿ. ವೃದ್ಧಾಪ್ಯದಲ್ಲಿಯೂ ನೀವು ಫಿಟ್ ಆಗಿರುತ್ತೀರಿ. ಅದಕ್ಕೆ ನೀವೇನು ಮಾಡಬೇಕು ಅನ್ನೋದನ್ನು ನೋಡೋಣ.

ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇರೋದು ಮತ್ತು ವಯಸ್ಸಾದಂತೆ (Oldage) ಸಮಸ್ಯೆ ಹೆಚ್ಚಾಗೋದು ಸ್ವಾಭಾವಿಕ. ಆದರೆ ಸ್ವಲ್ಪ ಜಾಗರೂಕತೆ ಮಾಡುವ ಮೂಲಕ, ಈ ಪ್ರಕ್ರಿಯೆಯ ವೇಗವನ್ನು ದೊಡ್ಡ ಪ್ರಮಾಣದಲ್ಲಿ ನಿಧಾನಗೊಳಿಸಬಹುದು. ವಯಸ್ಸು ಹೆಚ್ಚಾದಂತೆ, ದೇಹದ ಹೆಚ್ಚಿನ ಅಂಗಗಳ ಕಾರ್ಯಕ್ಷಮತೆ ಕಡಿಮೆಯಾಗಲು ಪ್ರಾರಂಭಿಸುತ್ತೆ, ಇದಕ್ಕಾಗಿ ಜನರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಅನೇಕ ಬಾರಿ ಜೀರ್ಣಕ್ರಿಯೆ ಕ್ಷೀಣಿಸಲು ಪ್ರಾರಂಭಿಸುತ್ತೆ, ಕೆಲವೊಮ್ಮೆ ಬೊಜ್ಜು ಹೆಚ್ಚಾಗಲು ಪ್ರಾರಂಭಿಸುತ್ತೆ. ಆದ್ದರಿಂದ ಈ ಸಮಸ್ಯೆಗಳನ್ನು ತಪ್ಪಿಸಲು, ಔಷಧಿಗಳನ್ನು ಹೊರತುಪಡಿಸಿ ಬೇರೆ ಯಾವ ಆಯ್ಕೆಗಳು ಇರಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. 

ಆಸ್ಟಿಯೊಪೊರೋಸಿಸ್(osteoporosis) ಮತ್ತು ಸಂಧಿವಾತ

ವಯಸ್ಸು ಹೆಚ್ಚಾದಂತೆ, ಕ್ಯಾಲ್ಸಿಯಂ ಮೂಳೆಗಳಿಂದ ಸೋರಲು ಪ್ರಾರಂಭಿಸುತ್ತೆ. ಯಾಕಂದ್ರೆ ರಕ್ತಕ್ಕೆ, ದೈಹಿಕ ಚಟುವಟಿಕೆಗಳಿಗೆ ಕ್ಯಾಲ್ಸಿಯಂ ಅಗತ್ಯವಿದೆ. ಆದರೆ ವಯಸ್ಸಾದಂತೆ, ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ಕಡಿಮೆಯಾಗಲು ಪ್ರಾರಂಭಿಸಿದಾಗ, ಈ ಕೊರತೆಯನ್ನು ಸರಿದೂಗಿಸಲು ಮೂಳೆಗಳು ರಕ್ತಕ್ಕೆ ಕ್ಯಾಲ್ಸಿಯಂ ಕಳುಹಿಸಲು ಪ್ರಾರಂಭಿಸುತ್ತವೆ. ಇದರಿಂದಾಗಿ ಅವು ಎಷ್ಟು ದುರ್ಬಲವಾಗುತ್ತವೆ ಎಂದರೆ ಅವು ಸಣ್ಣ ಗಾಯಕ್ಕೆ ಒಡೆಯುತ್ತವೆ. ಈ ಸ್ಥಿತಿಯನ್ನು ಆಸ್ಟಿಯೊಪೊರೋಸಿಸ್ ಎಂದು ಕರೆಯಲಾಗುತ್ತೆ.

 ಈ ಸಮಸ್ಯೆ ಯಾರಿಗಾದರೂ ಸಂಭವಿಸಬಹುದು, ಆದರೆ ಋತುಬಂಧದ ನಂತರ, ಮಹಿಳೆಯರ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇರುತ್ತೆ. ಅವರ ಕೈಗಳು, ಪಾದಗಳು ಮತ್ತು ಸೊಂಟದಲ್ಲಿ ನೋವು ಉಂಟಾಗುತ್ತೆ. ಹಾಗೆಯೇ, ಕೀಲುಗಳ ನಡುವೆ ಇರುವ ಜೆಲ್ ನಂತಹ ಅಂಟು ಪದಾರ್ಥ ಅವುಗಳಿಗೆ ರಕ್ಷಣೆ ಒದಗಿಸುತ್ತೆ, ಆದರೆ ಅದು ವಯಸ್ಸಾದಂತೆ ಒಣಗಲು ಪ್ರಾರಂಭಿಸುತ್ತೆ. ಇದು ಕೀಲು ನೋವು (Joint pain), ಎದ್ದೇಳಲು ಮತ್ತು ಕುಳಿತು ಕೊಳ್ಳಲು ಕಷ್ಟವಾಗೋದು ಮತ್ತು ನಡೆಯುವಾಗ ಮೂಳೆಗಳು ಒಡೆಯುವ ಶಬ್ದ ಉಂಟುಮಾಡುತ್ತೆ.

ಏನು ಮಾಡಬೇಕು?

ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ(calcium) ಭರಿತ ಆಹಾರಗಳ ಪ್ರಮಾಣ ಹೆಚ್ಚಿಸಿ, ವಿಶೇಷವಾಗಿ ಹಾಲು, ಮೊಸರು ಮತ್ತು ಚೀಸ್ ನಂತಹ ಹಾಲಿನ ಉತ್ಪನ್ನಗಳ ಪ್ರಮಾಣ ಹೆಚ್ಚಿಸಿ. ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡರೆ, ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.

ಬಿಪಿಎಚ್

ಬಿಪಿಎಚ್ ಅಂದರೆ ಬೆನಿಗ್ನ್ ಪ್ರೊಸ್ಟಾಟಿಕ್ ಹೈಪರ್ಪ್ಲಾಸಿಯಾ ಎಂಬುದು ಕೆಲವು ವಯಸ್ಸಾದ ಪುರುಷರ ಪ್ರಾಸ್ಟೇಟ್ ಗ್ರಂಥಿಯ ಗಾತ್ರವು ಹೆಚ್ಚಾಗಲು ಪ್ರಾರಂಭಿಸುವ ಒಂದು ದೈಹಿಕ ಸ್ಥಿತಿ. ಇದು ಅವರ ಮೂತ್ರ ವ್ಯವಸ್ಥೆಯ ಮೇಲಿನ ಒತ್ತಡವನ್ನು ಹೆಚ್ಚಿಸುತ್ತೆ  ಮತ್ತು ಅವರು ಮತ್ತೆ ಮತ್ತೆ ಶೌಚಾಲಯಕ್ಕೆ ಹೋಗುವ ಅಗತ್ಯ ಅನುಭವಿಸುತ್ತಾರೆ. ಮೂತ್ರವಿಸರ್ಜನೆಯ (Urination) ಸಮಯದಲ್ಲಿ ನೋವು ಮತ್ತು ಮೂತ್ರದಿಂದ ರಕ್ತಸ್ರಾವವು ಈ ಸಮಸ್ಯೆಯ ಮುಖ್ಯ ಲಕ್ಷಣಗಳಾಗಿವೆ.

ಏನು ಮಾಡಬೇಕು?

ಇದು ವಯಸ್ಸಾಗುವಿಕೆಗೆ(Aging) ಸಂಬಂಧಿಸಿದ ಸಮಸ್ಯೆಯಾಗಿರೋದರಿಂದ, ಅದನ್ನು ಮುಂಚಿತವಾಗಿ ತಡೆಗಟ್ಟಲು ಯಾವುದೇ ಮಾರ್ಗವಿಲ್ಲ. ಹಾಗಾಗಿ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ, ನೀವು ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ಆರಂಭಿಕ ಹಂತಗಳಲ್ಲಿ, ಇದನ್ನು ಔಷಧಿಗಳ ಮೂಲಕ ನಿಯಂತ್ರಿಸಬಹುದು. ಸಮಸ್ಯೆ ಮತ್ತಷ್ಟು ಹೆಚ್ಚಾದರೆ, ಲೇಸರ್ ತಂತ್ರಜ್ಞಾನದಿಂದ ಅದನ್ನು ಚಿಕಿತ್ಸೆ ಮಾಡಲು ಸಾಧ್ಯವಿದೆ.

ಯೂರಿನ್ ಇಂಕಾಂಟಿನೆನ್ಸ್ (Urine Incontenience)

ವಯಸ್ಸಾದಂತೆ, ಮಹಿಳೆಯರ ಮೂತ್ರನಾಳದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಹಾಗಾಗಿ, ಅವರಿಗೆ ಮೂತ್ರದ ಒತ್ತಡವನ್ನು ತಡೆದುಕೊಳ್ಳೋದು ಕಷ್ಟವಾಗುತ್ತೆ, ಆದ್ದರಿಂದ ಆಗಾಗ್ಗೆ ಶೌಚಾಲಯಕ್ಕೆ ಹೋಗೋದು ಅಥವಾ ಸೀನುವಾಗ ಮತ್ತು ಕೆಮ್ಮುವಾಗ ಮೂತ್ರ ಹೊರಹಾಕೋದು ಅದರ ಮುಖ್ಯ ಲಕ್ಷಣಗಳಾಗಿವೆ.

ಏನು ಮಾಡಬೇಕು?

ಫಿಟ್ ನೆಸ್ ತಜ್ಞರಿಂದ ಇದರ ಬಗ್ಗೆ ಕಲಿಯಿರಿ ಮತ್ತು ಕೆಗೆಲ್ ವ್ಯಾಯಾಮಗಳನ್ನು ಮಾಡಿ, ಇದು ಶ್ರೋಣಿಯ ಪ್ರದೇಶದ ಸ್ನಾಯುಗಳನ್ನು ಬಲಪಡಿಸುತ್ತೆ, ಇದು ಯೂರಿನ್ ಇಂಕಾಂಟಿನೆನ್ಸ್ ಸಮಸ್ಯೆ ತಡೆಗಟ್ಟಲು ಸಹಾಯ ಮಾಡುತ್ತೆ.

click me!