ಬೆಳಗಾವಿ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು?, ಬಿಮ್ಸ್‌ ಎದುರು ಕುಟುಂಬಸ್ಥರಿಂದ ಪ್ರತಿಭಟನೆ

By Girish Goudar  |  First Published Nov 19, 2024, 9:58 PM IST

ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವನ್ನಪ್ಪಿದ್ದಾಳೆ. ಬಾಣಂತಿಗೆ ಎರಡೆರಡು ಬಾರಿ ಸಿಜಿರಿಯನ್ ಮಾಡಿದ್ದಾರೆ ಎಂದು ಮೃತ ಕಲ್ಪನಾ ರಾಠೋಡ ಕುಟುಂಬಸ್ಥರು ಆರೋಪಿಸಿದ್ದಾರೆ. ಆಪರೇಷನ್ ಸಂದರ್ಭದಲ್ಲಿ ಧರಿಸುವ ವಸ್ತ್ರ ಧರಿಸಿಲ್ಲ, ತರಾತುರಿಯಲ್ಲಿ ಸಿಜಿರಿಯನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.  
 


ಬೆಳಗಾವಿ(ನ.19):  ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ ಘಟನೆ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಇಂದು(ಮಂಗಳವಾರ) ನಡೆದಿದೆ. ಬಾಣಂತಿ ಸಾವನ್ನಪ್ಪಿದ್ದರಿಣದ ರೊಚ್ಚಿಗೆದ್ದ ಕುಟುಂಬಸ್ಥರು ಬಿಮ್ಸ್ ಎದುರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. 

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಾಗನೂರ ತಾಂಡಾದ ಬಾಣಂತಿ ಕಲ್ಪನಾ ರಾಠೋಡ ಸಾವನ್ನಪ್ಪಿದ ದುರ್ದೈವಿ ಮಹಿಳೆಯಾಗಿದ್ದಾಳೆ.  ಮಧ್ಯರಾತ್ರಿ 2.30ರ ಸುಮಾರಿಗೆ ಕಲ್ಪನಾ ರಾಠೋಡ ಗಂಡು ಮಗವಿಗೆ ಜನ್ಮ ನೀಡಿದ್ದಳು. ಮಗು ಮತ್ತು ತಾಯಿ ಆರೋಗ್ಯವಾಗಿ ಇರುವುದಾಗಿ ವೈದ್ಯರು ಹೇಳಿದ್ದರು. ಇಂದು ಬೆಳಗ್ಗೆ 8.30ರವರೆಗೂ ಬಾಣಂತಿ ಕಲ್ಪನಾ ರಾಠೋಡ ಆರೋಗ್ಯವಾಗಿದ್ದರು. ಬಳಿಕ ಬಾಣಂತಿ ಆರೋಗ್ಯದಲ್ಲಿ ಏಕಾಏಕಿ ಏರುಪೇರಿನಿಂದ ಸಾವುನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದರು. 

Tap to resize

Latest Videos

ಬೆಳಗಾವಿ: ವೇಶ್ಯಾವಾಟಿಕೆ ಆರೋಪ, ರಸ್ತೆಯಲ್ಲೇ ಮಹಿಳೆಯ ಬಟ್ಟೆ ಹರಿದು ಹಲ್ಲೆ

ಹೀಗಾಗಿ ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವನ್ನಪ್ಪಿದ್ದಾಳೆ. ಬಾಣಂತಿಗೆ ಎರಡೆರಡು ಬಾರಿ ಸಿಜಿರಿಯನ್ ಮಾಡಿದ್ದಾರೆ ಎಂದು ಮೃತ ಕಲ್ಪನಾ ರಾಠೋಡ ಕುಟುಂಬಸ್ಥರು ಆರೋಪಿಸಿದ್ದಾರೆ. ಆಪರೇಷನ್ ಸಂದರ್ಭದಲ್ಲಿ ಧರಿಸುವ ವಸ್ತ್ರ ಧರಿಸಿಲ್ಲ, ತರಾತುರಿಯಲ್ಲಿ ಸಿಜಿರಿಯನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.  

ಬಾಣಂತಿ ಆರೋಗ್ಯದಲ್ಲಿ ಏರುಪೇರಾದಗ ಡಿಸ್ಚಾರ್ಜ್ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದರು. ಕುಟುಂಬಸ್ಥರು ಮನವಿ ಮಾಡಿದ್ರೂ ಬಾಣಂತಿಯನ್ನು ಬೇರೆ ಆಸ್ಪತ್ರೆಗೆ ಕಳುಹಿಸದೇ ವೈದ್ಯರು ನಿರ್ಲಕ್ಷ್ಯವಹಿಸಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರನ್ನು ಈ ಕೂಡಲೇ ವಜಾ ಮಾಡುವಂತೆ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. 

ಯಾರಾದ್ರೂ ಸಿಎಂ ಸಿದ್ದರಾಮಯ್ಯರನ್ನು ಮುಟ್ಟಲು ಆಗ್ತದಾ?: ಕೇಂದ್ರ ಸಚಿವ ಸೋಮಣ್ಣ

ಮೃತ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆಯತ್ತ ಜಮಾಯಿಸುತ್ತಿದ್ದಾರೆ. ಆಸ್ಪತ್ರೆ ಮುಂಭಾಗದಲ್ಲಿ ನೂರಾರು ಜನ ಜಮಾವನೆಯಾದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಮ್ಸ್ ಮುಂಭಾಗದಲ್ಲಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಬೆಳಗಾವಿ ಎಪಿಎಂಸಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಬಾಣಂತಿ ಮೃತದೇಹ ಆಸ್ಪತ್ರೆ ಮುಂದಿಟ್ಟು ಪ್ರತಿಭಟನೆ!

ನ್ಯಾಯ ಸಿಗೋವರೆಗೂ ಮೃತದೇಹ ತೆಗೆಯೋದಿಲ್ಲ ಎಂದು ಕುಟುಂಬಸ್ಥರ ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಬರುವಂತೆ ಮೃತ ಬಾಣಂತಿಯ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಬೆಳಗಾವಿ ಬಿಮ್ಸ್ ಆಸ್ಪತ್ರೆ ಮುಂದೆ ಮೃತ ಬಾಣಂತಿ ಕಲ್ಪನಾ ಲಮಾಣಿ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. 

click me!