Breaking: ಮುರಿದುಬಿದ್ದ ಎಆರ್‌ ರೆಹಮಾನ್‌ ದಾಂಪತ್ಯ, ವಿಚ್ಛೇದನ ಘೋಷಿಸಿದ ಪತ್ನಿ ಸಾಯಿರಾ

By Santosh Naik  |  First Published Nov 19, 2024, 10:04 PM IST

ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಪತ್ನಿ ಸಾಯಿರಾ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಭಾವನಾತ್ಮಕ ಒತ್ತಡ ಮತ್ತು ಸಮಸ್ಯೆಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಾಯಿರಾ ಅವರ ವಕೀಲರು ತಿಳಿಸಿದ್ದಾರೆ.


ಚೆನ್ನೈ (ನ.19):ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಪತ್ನಿ ಸಾಯಿರಾ ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಸಾಯಿರಾ ಅವರ ವಕೀಲ ವಂದನಾ ಶಾ ದಂಪತಿಗಳು ಬೇರ್ಪಟ್ಟ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದರು. “ಮದುವೆಯಾಗಿ ಹಲವು ವರ್ಷಗಳ ನಂತರ, ಸಾಯಿರಾ ಅವರು ತಮ್ಮ ಪತಿ ಎಆರ್ ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇವರ ಸಂಬಂಧದಲ್ಲಿ ಆಳವಾದ ಭಾವನಾತ್ಮಕ ಒತ್ತಡದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಒಬ್ಬರಿಗೊಬ್ಬರ ನಡುವೆ ಪ್ರೀತಿ ಇದ್ದರೂ, ತಮ್ಮ ನಡುವೆ ಆಗುವ ಮನಸ್ತಾಪಗಳು ಹಾಗೂ ಸಮಸ್ಯೆಗಳು ದೊಡ್ಡ ಅಂತರವನ್ನು ಸೃಷ್ಟಿಸಿದೆ ಎಂಧು ದಂಪತಿಗಳು ಕಂಡುಕೊಂಡಿದ್ದಾರೆ. ಈ ಹಂತದಲ್ಲಿ ಯಾರೂ ಕೂಡ ತಮ್ಮ ನಡುವೆ ಸೇತುವೆಯಾಗಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದಾರೆ. ಈ ಕಾರಣದಿಂದಾ ಸಾಯಿರಾ ಅವರು ನೋವು ಹಾಗೂ ಸಂಕಟದಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ' ಎಂದು ಹೇಳಲಾಗಿದೆ.

ಸಾಯಿರಾ ಅವರ ಈ ಸವಾಲಿನ ಸಮಯದಲ್ಲಿ ಅಭಿಮಾನಿಗಳು ತಮ್ಮ ಪ್ರೈವಸಿಯನ್ನು ಗೌರಿಸವೇಕು ಎಂದು ಬಯಸುತ್ತಾರೆ. ಏಕೆಂದರೆ, ಅವರೀಗ ತಮ್ಮ ಜೀವನದ ಅತ್ಯಂತ ಕಷ್ಟಕರ ಅಧ್ಯಾಯದಲ್ಲಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಸಾಯಿರಾ ಗುಜರಾತಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಉತ್ತರ ಭಾರತದ ಸಂಪ್ರದಾಯಗಳು ಮತ್ತು ಸಂಸ್ಕೃತಿಯಲ್ಲಿ ಬೆಳೆದವರಾಗಿದ್ದಾರೆ.  ಇವರಿಬ್ಬರು ಖತೀಜಾ, ರಹೀಮಾ ಮತ್ತು ಅಮೀನ್ ಎನ್ನುವ ಮೂರು ಮಕ್ಕಳಿಗೆ ತಂದೆ-ತಾಯಿ ಆಗಿದ್ದಾರೆ.. 

29 ವರ್ಷಗಳ ಕಾಲ ಎಆರ್‌ ರೆಹಮಾನ್‌ ಹಾಗೂ ಸಾಯಿರಾ ಜೊತೆಯಾಗಿ ಬದುಕಿದ್ದರು. 1995ರ ಮಾರ್ಚ್‌ 12 ರಂದು ಇವರಿಬ್ಬರ ವಿವಾಹ ನೆರವೇರಿತ್ತು. ಕೇರಳದ ಪ್ರಖ್ಯಾತ ನಟ ರಾಶಿನ್‌ ರೆಹಮಾನ್‌, ಸಾಯಿರಾ ಬಾನು ಅವರ ಅಕ್ಕ ಮಹ್ರುನ್ನಿಸಾ ಅವರನ್ನು ವಿವಾಹವಾಗಿದ್ದಾರೆ.

Tap to resize

Latest Videos

undefined

ಎಆರ್‌ ರೆಹಮಾನ್‌ ಪತ್ನಿ ಸಾಯಿರಾ ಬಾನು ಅವರೊಂದಿಗೆ ಕಾಣಿಸಿಕೊಳ್ಳುವುದು ಬಹಳ ಅಪರೂಪವಾಗಿತ್ತು. ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಅವರು ಏಕಾಂಗಿಯಾಗಿ ಭಾಗವಹಿಸುತ್ತಿದ್ದರು. 2024ರ ಜುಲೈನಲ್ಲಿ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹದ ವೇಳೆ ಇಬ್ಬರೂ ಜೊತೆಯಾಗಿ ಇರುವ ಫೋಟೋವನ್ನು ಎಆರ್‌ ರೆಹಮಾನ್‌ ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದರು.

ಕುಳ್ಳಿಯಾಗಿದ್ರೆ ಚಿಂತೆ ಬೇಡ, ಹುಡುಗರು ಇಷ್ಟಪಡೋದು ನಿಮ್ಮನ್ನೇ..! ಇಲ್ಲಿದೆ ನೋಡಿ ಕಾರಣ

ಕೆಲಸದ ವಿಚಾರದಲ್ಲಿ ನೋಡುವುದಾದರೆ, ಎಆರ್‌ ರೆಹಮಾನ್‌ ಕೊನೆಯದಾಗಿ ಧನುಷ್‌ ಅವರ ನಿರ್ದೇಶನದ 2ನೇ ಚಿತ್ರ ರಾಯನ್‌ನಲ್ಲಿ ಕೊನೆಯ ಬಾರಿಗೆ ಕೆಲಸ ಮಾಡಿದ್ದರು. ಛವ್ವಾ, ಥಗ್‌ ಲೈಫ್‌, ಗಾಂಧಿ ಟಾಕ್ಸ್‌ ಹೆಸರಿನ ಸಿನಿಮಾಗಳಲ್ಲಿ ಸದ್ಯ ಕೆಲಸ ಮಾಡುತ್ತಿದ್ದಾರೆ. 

Rajajinagar Fire: ಬರ್ತ್‌ಡೇಗೆ ಮುನ್ನ ಮಸಣದ ದಾರಿ ಹಿಡಿದ ಪ್ರಿಯಾ!

click me!