ಪ್ರಭಾಸ್, ಅಲ್ಲು ಅರ್ಜುನ್, NTR ಜೊತೆ ನಟಿಸಿದ ಖ್ಯಾತ ನಟಿಯ ಬಾಲ್ಯದ ಫೋಟೋಸ್‌ ವೈರಲ್‌!

First Published | Nov 19, 2024, 10:25 PM IST

ನಾಗಚೈತನ್ಯ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದು ಪ್ರಭಾಸ್, NTR, ಬನ್ನಿ ಜೊತೆ ನಟಿಸಿ ಇಂದು ಸ್ಟಾರ್ ನಟಿಯಾದ ಪೂಜಾ ಹೆಗ್ಡೆ ಅವರ ಬಾಲ್ಯದ ಫೋಟೋಗಳು ಇದೀಗ ಭಾರೀ ವೈರಲ್ ಆಗುತ್ತಿವೆ.

ನಾಯಕಿಯರಿಗೆ ಹೆಚ್ಚು ಕಾಲ ಕ್ರೇಜ್ ಇರಲ್ಲ. ಅದನ್ನ ಸರಿಯಾಗಿ ಉಪಯೋಗಿಸಿಕೊಂಡವರೇ ಸ್ಟಾರ್ ನಟಿ ಆಗ್ತಾರೆ. ಪೂಜಾ ಹೆಗ್ಡೆ ಕೂಡ ಹಾಗೆ. ನಟಿಸಿದ ಸಿನಿಮಾಗಳೆಲ್ಲಾ ಫ್ಲಾಪ್ ಆದ್ರೂ ಟಾಲಿವುಡ್ ಚಿತ್ರರಂಗದಲ್ಲಿ ಮಾತ್ರ ಸ್ಟಾರ್ ನಟಿಯಾಗಿದ್ದಾರೆ.

ಟಾಲಿವುಡ್‌ನಲ್ಲಿ ಒಳ್ಳೆ ಕ್ರೇಜ್ ಇರೋ ಪೂಜಾ ಹೆಗ್ಡೆ. ಕಾಲಿವುಡ್‌ನಲ್ಲೂ ಟಾಪ್ ನಟರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಮುದ್ದಾದ ಹುಡುಗಿ ಬಾಲ್ಯದ ಫೋಟೋಗಳು ವೈರಲ್ ಆಗ್ತಿವೆ. 2012ರಲ್ಲಿ 'ಮುಗಮೂಡಿ' ಸಿನಿಮಾದ ಮೂಲಕ ಕಾಲಿವುಡ್‌ಗೆ ಪ್ರವೇಶ ಪಡೆದಿದ್ದರು. 

Tap to resize

ಎರಡು ವರ್ಷಗಳ ನಂತರ ಟಾಲಿವುಡ್‌ಗೆ ಬಂದ ಪೂಜಾ ಹೆಗ್ಡೆ ನಾಗಚೈತನ್ಯ ಜೊತೆ `ಒಕ ಲೈಲಾ ಕೋ` ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅದೇ ವರ್ಷ ವರುಣ್ ತೇಜ್ ಜೊತೆ `ಮುಕುಂದ` ಚಿತ್ರದಲ್ಲಿ ನಟಿಸಿದ್ರು ಪೂಜಾ.

ತೆಲುಗಿನಲ್ಲಿ ಎರಡು ಸಿನಿಮಾಗಳನ್ನ ಮಾಡಿದ ಬಳಿಕ ಬಾಲಿವುಡ್‌ಗೆ ಹೋದ್ರು. `ಮೊಹೆಂಜೋದಾರೋ` ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ನಟಿಸಿದ್ರು. ಆ ಸಿನಿಮಾ ಕೂಡ ಸೋತಿತ್ತು. ಮತ್ತೆ ಗ್ಯಾಪ್ ತಗೊಂಡು ಅಲ್ಲು ಅರ್ಜುನ್ ಜತೆ ನಟಿಸಲು ಅವಕಾಶ ಸಿಕ್ಕಿತು. `DJ` ಚಿತ್ರದ ಮೂಲಕ ಮತ್ತೆ ತೆಲುಗು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು ಪೂಜಾ ಹೆಗ್ಡೆ. 

NTR ಜೊತೆ `ಅರವಿಂದ ಸಮೇತ`, ಬನ್ನಿ ಜೊತೆ ಮತ್ತೊಮ್ಮೆ `ಅಲ ವೈಕುಂಠಪುರಮುಲೋ` ಸಿನಿಮಾಗಳು ಹಿಟ್‌ ಆಗಿ. ಸ್ಟಾರ್ ನಟಿ ಆದ್ರು. ಮಹೇಶ್ ಜೊತೆ `ಮಹರ್ಷಿ`, ಅಖಿಲ್ ಜೊತೆ `ಮೋಸ್ಟ್ ಎಲಿಜಿಬಲ್ ಬ್ಯಾಚುಲರ್` ಸಿನಿಮಾಗಳಲ್ಲಿ ನಟಿಸಿ ಜನರಿಗೆ ಇಷ್ಟ ಆದ್ರು. ವರುಣ್ ತೇಜ್ ಜೊತೆ ಮಾಡಿದ `ಗದ್ದಲಕೊಂಡ ಗಣೇಶ್` ಸಿನಿಮಾ ಸೋತಿತ್ತು.

ಕಾಲಿವುಡ್‌ನಲ್ಲಿ ವಿಜಯ್ ಜೊತೆ 'ಬೀಸ್ಟ್'ನಲ್ಲಿ ನಟಿಸಿದ್ರು. ಆದ್ರೆ ಆ ಸಿನಿಮಾವೂ ಸೋತಿತ್ತು. ಅದೇ ವರ್ಷ ಟಾಲಿವುಡ್‌ನಲ್ಲಿ ಪ್ರಭಾಸ್ ಜೊತೆ `ರಾಧೇಶ್ಯಾಮ್‌` ಸಿನಿಮಾ ಮಾಡಿದ್ರು, ಅದು ಕೂಡ ಸೋತಿತ್ತು. ರಾಮ್ ಚರಣ್ ಜೊತೆ ಮಾಡಿದ `ಆಚಾರ್ಯ` ಕೂಡ ಸೋತಿತ್ತು. ಹೀಗಾಗಿ ಪೂಜಾ ಸೋಲಿನ ಹಾದಿಯಲ್ಲಿದ್ದಾರೆ.

Pooja Hegde

ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಪೂಜಾ ಹೆಗ್ಡೆ, ಸೂರ್ಯ 44ರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಜಯ್ ಜೊತೆ 'ತಲಪತಿ 69'ಲ್ಲೂ ನಟಿಸುತ್ತಿದ್ದಾರೆ. H.ವಿನೋದ್ ನಿರ್ದೇಶನದ ಈ ಸಿನಿಮಾ ನಂತರ ವಿಜಯ್ ಸಿನಿಮಾಗಳಿಗೆ ಗುಡ್ ಬೈ ಹೇಳಲಿದ್ದಾರೆ. ತೆಲುಗಿನಲ್ಲಿ ನಾಗಚೈತನ್ಯ ಜೊತೆ ಒಂದು ಸಿನಿಮಾ ಕೂಡ ಮಾಡಲಿದ್ದಾರೆ.
 

Latest Videos

click me!