ನಟಿ ರಶ್ಮಿಕಾ ಮಂದಣ್ಣ ಸೀರೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿದ್ದಾರೆ. ಬರ್ಗ್ಯಾಂಡಿ ಬಣ್ಣದ ಸೀರೆಯುಟ್ಟು ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ಪುಷ್ಪಾ-2 ಟ್ರೇಲರ್ ಲಾಂಚ್ ಇವೆಂಟ್‌ನಲ್ಲಿ ಕಾಣಿಸಿಕೊಂಡಿದ್ದರು.
ತಮ್ಮ ಆಕರ್ಷಕ ಸೀರೆಯ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲೂ ರಶ್ಮಿಕಾ ಹಂಚಿಕೊಂಡಿದ್ದು, ನೆನಪಿನಲ್ಲಿಡಬೇಕಾದ ಈ ರಾತ್ರಿ ಎಂದು ಬರರೆದುಕೊಂಡಿದ್ದಾರೆ. ಅದರೊಂದಿಗೆ ಪಾಟ್ನಾದ ಜನತೆಗೆ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ.
ಪಾಟ್ನಾದಲ್ಲಿ ಪುಷ್ಪ-2 ಸಿನಿಮಾದ ಟ್ರೇಲರ್ ಲಾಂಚ್ ಇವೆಂಟ್ ನಡೆದಿತ್ತು. ಇಲ್ಲಿ ರಶ್ಮಿಕಾಳನ್ನು ನೋಡುವ ಸಲುವಾಗಿ ನೂಕುನುಗ್ಗಲು ಏರ್ಪಾಡಾಗಿ ಕೊನೆಗೆ ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ.
ರಶ್ಮಿಕಾ ಅವರೊಂದಿಗೆ ಪುಷ್ಪ-2 ಸಿನಿಮಾದ ಹೀರೋ ಅಲ್ಲು ಅರ್ಜುನ್ ಕೂಡ ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ರಶ್ಮಿಕಾ ಉಟ್ಟಿದ್ದ ಸೀರೆಯ ಮೇಲೆಯೇ ಹಲವರ ಕಣ್ಣು ನೆಟ್ಟಿತ್ತು. 6 ಗಜದ ಸೀರೆಯಲ್ಲಿ ರಶ್ಮಿಕಾ ಸಖತ್ ಬೋಲ್ಡ್ ಆಗಿ ಕಾಣಿಸಿದ್ದರು.
ಬರ್ಗ್ಯಾಂಡಿ ಬಣ್ಣದ ಸೀರೆ, ಅದಕ್ಕೆ ಒಪ್ಪುವಂತ ಸ್ಲೀವ್‌ಲೆಸ್ ವೆಲ್ವೆಟ್ ಬ್ಲೌಸ್ ಹಾಗೂ ಸ್ಟ್ರೇಟ್ ನೆಕ್‌ಲೈನ್ ನೆಕ್ಲೇಸ್ ಧರಿಸಿ ಕಾರ್ಯಕ್ರಮದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದರು. ಇದು ಅವರ ಲುಕ್‌ಗೆ ಬೋಲ್ಡ್‌ನೆಸ್ ನೀಡಿತ್ತು.
ರಶ್ಮಿಕಾ ಅವರ ಲುಕ್, ಗ್ರೇಸ್ ಮತ್ತು ಆಧುನಿಕ ಶೈಲಿಯನ್ನು ಹೇಗೆ ವಿಲೀನಗೊಳಿಸಬೇಕು ಎಂಬುದಕ್ಕೆ ಒಂದು ಪರಿಪೂರ್ಣ ಉದಾಹರಣೆಯಾಗಿದೆ, ಇದು ಮುಂಬರುವ ಯಾವುದೇ ಹಬ್ಬ ಅಥವಾ ಔಪಚಾರಿಕ ಸಂದರ್ಭಕ್ಕೆ ಸೂಕ್ತವಾದ ಆಯ್ಕೆಯಾಗಿದೆ.