ಬ್ಲಡ್ ಡೊನೇಟ್ ಮಾಡಿದ್ರಾ? ಹಾಗಿದ್ರೆ ನಂತರ ಏನೇನ್ ಮಾಡಬೇಕು ನೋಡೋಣ

First Published | Mar 3, 2024, 1:58 PM IST

ಒಬ್ಬರ ಜೀವವನ್ನು ಉಳಿಸುವುದು ಬಹಳ ಒಳ್ಳೆಯ ಕಾರ್ಯ. ಆದರೆ, ಒಬ್ಬರ ಸ್ವಂತ ಜೀವವನ್ನು ರಕ್ಷಿಸುವುದು ಅಷ್ಟೇ ಉತ್ತಮ ಕಾರ್ಯ. ನಮ್ಮಲ್ಲಿ ಅನೇಕರು ಅಗತ್ಯವಿದ್ದಾಗ ರಕ್ತದಾನ ಮಾಡುತ್ತಾರೆ. ರಕ್ತದಾನವನ್ನು ಮಹಾನ್ ದಾನ ಎಂದೂ ಕರೆಯಲಾಗುತ್ತದೆ. ರಕ್ತದಾನ ಮಾಡುವ ವ್ಯಕ್ತಿ ಯಾವೆಲ್ಲಾ ವಿಷಯದ ಬಗ್ಗೆ ಗಮನ ಹರಿಸಬೇಕು ನೋಡೋಣ.
 

ರಕ್ತದಾನ (blood donation) ಮಾಡೋದರಿಂದ ಒಬ್ಬರ ಜೀವ ಉಳಿಸಬಹುದು ನಿಜ. ಅದರ ಜೊತೆಗೆ ಇದು ದಾನಿಯ ಆರೋಗ್ಯಕ್ಕೂ ಉತ್ತಮ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪ್ರಯೋಜನಕಾರಿ. ರಕ್ತದಾನವು ದೇಹದಲ್ಲಿರುವ ಹೆಚ್ಚುವರಿ ಕಬ್ಬಿಣವನ್ನು (Additional Iron) ತೆಗೆದುಹಾಕುತ್ತದೆ, ಇ ಹೆಚ್ಚುವರಿ ಕಬ್ಬಿಣವು ಆರೋಗ್ಯಕ್ಕೆ ಹಾನಿಕಾರಕ. ಅಮೇರಿಕನ್ ಜರ್ನಲ್ ಆಫ್ ಎಪಿಡೆಮಿಯಾಲಜಿ ಪ್ರಕಟಿಸಿದ ವರದಿಯ ಪ್ರಕಾರ, ವರ್ಷಕ್ಕೊಮ್ಮೆ ರಕ್ತದಾನ ಮಾಡುವುದರಿಂದ ಹೃದಯಾಘಾತದ ಅಪಾಯ ಶೇಕಡಾ 88 ರಷ್ಟು ಕಡಿಮೆಯಾಗುತ್ತೆ. ಆದರೆ ರಕ್ತದಾನಿಗಳು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಇದರಿಂದ ಅವರ ಆರೋಗ್ಯವೂ ಉತ್ತಮವಾಗಿರುತ್ತದೆ ಮತ್ತು ನೀವು ದೀರ್ಘಕಾಲದವರೆಗೆ ರಕ್ತದಾನ ಮಾಡಬಹುದು.
 

ರಕ್ತದಾನದ ನಂತರ ಏನು ಮಾಡಬೇಕು?
ರಕ್ತದಾನ ಮಾಡಿದ ತಕ್ಷಣ ದಾನಿ ನಡೆಯಬಾರದು ಅಥವಾ ಕೂಡಲೇ ಮನೆಗೆ ಹೊರಡಬಾರದು. ನೀವು ಸ್ವಲ್ಪ ಸಮಯದವರೆಗೆ ಅದೇ ಸ್ಥಳದಲ್ಲಿ ವಿಶ್ರಾಂತಿ ಪಡೆಯಬೇಕು. 15 ರಿಂದ 20 ನಿಮಿಷಗಳ ಕಾಲ ವಿಶ್ರಾಂತಿ ಪಡೆದ ನಂತರ, ಮೊದಲು ಸ್ವಲ್ಪ ಜ್ಯೂಸ್  ಕುಡಿಯಿರಿ. ಇದಲ್ಲದೆ, ಉತ್ತಮ ಆರೋಗ್ಯಕ್ಕಾಗಿ, ಮುಂದಿನ ಕೆಲವು ದಿನಗಳವರೆಗೆ ನೀರು, ಜ್ಯೂಸ್ ನಂತಹ ದ್ರವಗಳನ್ನು ಹೆಚ್ಚು ಸೇವಿಸಿ. ಎರಡರಿಂದ ಮೂರು ವ್ಯಾಯಾಮಗಳು ಅಥವಾ ಶ್ರಮದಾಯಕ ಕೆಲಸವನ್ನು (hardwork)ತಪ್ಪಿಸಿ. ರಕ್ತದಾನ ಮಾಡಿದ ನಂತರ ನಿಮಗೆ ತಲೆತಿರುಗಿದಂತೆ ಅನಿಸಿದರೆ, ಕೂಡಲೇ ಅಲ್ಲಿನ ವೈದ್ಯರಿಗೆ ತಿಳಿಸಿ, ಅದನ್ನು ನಿರ್ಲಕ್ಷಿಸಬೇಡಿ.

Latest Videos


ರಕ್ತದಾನ ಮಾಡಿದ ನಂತರ ಏನು ತಿನ್ನಬೇಕು
ರಕ್ತದಾನದ ನಂತರ, ವೈದ್ಯರು ಕೆಲವು ದಿನಗಳವರೆಗೆ ಫೋಲಿಕ್ ಆಮ್ಲದಂತಹ (folic acid medicine) ಔಷಧಿಗಳನ್ನು ತೆಗೆದುಕೊಳ್ಳಲು ಶಿಫಾರಸು ಮಾಡಬಹುದು. ಈ ಔಷಧಿಯು ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಣ್ಣುಗಳು ಮತ್ತು ಸೊಪ್ಪು ತರಕಾರಿಗಳನ್ನು ಒಳಗೊಂಡ ಆರೋಗ್ಯಕರ ಆಹಾರವನ್ನು ನೀವು ಸೇವಿಸಬೇಕು. ಹಾಲು ಅಥವಾ ಮೊಸರನ್ನು ಸಹ ಸೇವಿಸಬೇಕು. ಇದರಲ್ಲಿ ವಿಟಮಿನ್ ಬಿ-2 ಕೂಡ ಸಿಗುತ್ತದೆ. ಉತ್ಕರ್ಷಣ ನಿರೋಧಕ ಸಮೃದ್ಧ ಆಹಾರವು ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
 

ರಕ್ತದಾನ ಮಾಡುವ ಮೊದಲು ಏನು ಮಾಡಬೇಕು
ರಕ್ತದಾನ ಮಾಡುವ ಮೊದಲು, ನಿಮ್ಮ ಆರೋಗ್ಯ ಹೇಗಿದೆ, ಅನ್ನುವ ಬಗ್ಗೆ ಈ ಸಮಯದಲ್ಲಿ ಅಗತ್ಯ ಗಮನ ನೀಡಬೇಕು. ರಕ್ತದಾನ ಮಾಡುವ ಮೊದಲು, ವೈದ್ಯರು ನೀಡಿದ ಫಾರ್ಮ್ ನಲ್ಲಿ ಕಳೆದ ಕೆಲವು ಗಂಟೆಗಳಲ್ಲಿ ನಿಮ್ಮ ವೈದ್ಯಕೀಯ ಇತಿಹಾಸ ಮತ್ತು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ನೀವು ಸರಿಯಾಗಿ ಉತ್ತರಿಸಬೇಕು.

ರಕ್ತದಾನ ಮಾಡುವ ಮೊದಲು ವೈದ್ಯರ ಸಲಹೆಯಿಲ್ಲದೆ ಸ್ಟೀರಾಯ್ಡ್ಗಳು ಅಥವಾ ಯಾವುದೇ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಬೇಡಿ. ನೀವು ಈ ಮೊದಲೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರೆ, ನೀವು ರಕ್ತದಾನ ಮಾಡಬಾರದು. ನೀವು ರಕ್ತದಲ್ಲಿರುವ ಪ್ಲೇಟ್‌ಲೆಟ್ಸ್ ದಾನ ಮಾಡಲು ಬಯಸಿದರೆ, ಆಸ್ಪಿರಿನ್ ಅನ್ನು ಎರಡು ದಿನಗಳವರೆಗೆ ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ.

ನೀವು ಎಚ್ಐವಿ ಸೋಂಕಿತ ವ್ಯಕ್ತಿಯೊಂದಿಗೆ (HIV Infected Person) ಅಥವಾ ವೈರಲ್ ಹೆಪಟೈಟಿಸ್ ಸೋಂಕಿಗೆ ಒಳಗಾದ ಯಾರೊಂದಿಗಾದರೂ ಸಂಬಂಧ ಹೊಂದಿದ್ದರೆ ಅಥವಾ ನೀವೇ ಬಾಧಿತರಾಗಿದ್ದರೆ ಸಹ ನೀವು ರಕ್ತದಾನ ಮಾಡಬಾರದು. ನೀವು ಅಧಿಕ ರಕ್ತದೊತ್ತಡ (High Blood Pressure) ಅಥವಾ ಮಧುಮೇಹವನ್ನು (diabetes)ಹೊಂದಿದ್ದರೆ, ಈ ಬಗ್ಗೆ ವೈದ್ಯರಿಗೆ ತಿಳಿಸಿ. ಅಂತಹ ಪರಿಸ್ಥಿತಿಯಲ್ಲಿ, ರಕ್ತದಾನ ಮಾಡದಂತೆ ವೈದ್ಯರು ನಿಮಗೆ ಸಲಹೆ ನೀಡಬಹುದು.
 

ಯಾರು ರಕ್ತದಾನ ಮಾಡಬಹುದು
ರಕ್ತದಾನ ಮಾಡುವ ಮೊದಲು, ವ್ಯಕ್ತಿಯು ತನ್ನ ಫಿಟ್ನೆಸ್ (fitness) ಬಗ್ಗೆ ಗಮನ ಹರಿಸಬೇಕು. ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ರಕ್ತದಾನಿಗಳು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಅವರ ದೇಹದ ತೂಕ 50 ಕೆಜಿಗಿಂತ ಹೆಚ್ಚಿರಬೇಕು. ಇದಲ್ಲದೆ, ಆ ವ್ಯಕ್ತಿಯ ದೈಹಿಕ ಮತ್ತು ಆರೋಗ್ಯ ಇತಿಹಾಸ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸಹ ಅವಶ್ಯಕ.

click me!