ಮೆಗಾಸ್ಟಾರ್ ಚಿರಂಜೀವಿಯಲ್ಲಿ ವಿಷ್ಣು ಅಂಬಿಯನ್ನ ಕಾಣ್ತೀನಿ: ಡಾಲಿ ಧನಂಜಯ್

ಮೆಗಾಸ್ಟಾರ್ ಚಿರಂಜೀವಿಯಲ್ಲಿ ವಿಷ್ಣು ಅಂಬಿಯನ್ನ ಕಾಣ್ತೀನಿ: ಡಾಲಿ ಧನಂಜಯ್

Published : Nov 14, 2024, 04:17 PM IST

ಡಾಲಿ ಧನಂಜಯ್​ ಅದೆಂಥಾ ಅದ್ಭುತ ನಟ ಅನ್ನೋದು ಗೊತ್ತೇ ಇದೆ. ಅಂತೆಯೇ ಡಾಲಿಗೆ ನಟರಾಕ್ಷಸ ಅನ್ನೋ ಬಿರುದೇ ಸಿಕ್ಕಿದೆ. ಸದ್ಯ ಈ ನಟರಾಕ್ಷಸನನ್ನ ಇಂಡಿಯನ್ ಸಿನಿಲೋಕದ ಲೆಜೆಂಡ್ ಮೆಗಾಸ್ಟಾರ್ ಚಿರು ಕೂಡ ಹಾಡಿ ಹೊಗಳಿಸಿದ್ದಾರೆ. 

ಡಾಲಿ ಧನಂಜಯ್​ ಅದೆಂಥಾ ಅದ್ಭುತ ನಟ ಅನ್ನೋದು ಗೊತ್ತೇ ಇದೆ. ಅಂತೆಯೇ ಡಾಲಿಗೆ ನಟರಾಕ್ಷಸ ಅನ್ನೋ ಬಿರುದೇ ಸಿಕ್ಕಿದೆ. ಸದ್ಯ ಈ ನಟರಾಕ್ಷಸನನ್ನ ಇಂಡಿಯನ್ ಸಿನಿಲೋಕದ ಲೆಜೆಂಡ್ ಮೆಗಾಸ್ಟಾರ್ ಚಿರು ಕೂಡ ಹಾಡಿ ಹೊಗಳಿಸಿದ್ದಾರೆ. ಡಾಲಿ ಟಾಲಿವುಡ್​ನಲ್ಲಿ ಸ್ಟಾರ್ ಆಗಿ ಮಿಂಚೋದು ಫಿಕ್ಸ್ ಅಂತ ಭವಿಷ್ಯ ನುಡಿದಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ನಟರಾಕ್ಷಸ ಅನ್ನೋ ಬಿರುದು ಪಡೆದಿರೋ ಡಾಲಿ ಧನಂಜಯ್​ಗೆ ಒಂದು ಬಿಗ್ ಅವಾರ್ಡ್ ಸಿಕ್ಕಿದೆ. ಅದು ಅಂತಿಂಥಾ ಅವಾರ್ಡ್ ಅಲ್ಲ ಇಂಡಿಯನ್ ಸಿನಿಇಂಡಸ್ಟ್ರಿಯ ಲೆಜೆಂಡ್ ಮೆಗಾಸ್ಟಾರ್ ಚಿರಂಜೀವಿಯಿಂದ ಸಿಕ್ಕಿರೋ ಮೆಚ್ಚುಗೆಯ, ಬೆಲೆಕಟ್ಟಲಾಗದ ಅವಾರ್ಡ್. 

ಡಾಲಿ ಸ್ಯಾಂಡಲ್​ವುಡ್​​ ಜೊತೆಗೆ ಪಕ್ಕದ ಟಾಲಿವುಡ್​ನಲ್ಲೂ ಹಲವು ಬಿಗ್ ಸಿನಿಮಾಗಳಲ್ಲಿ ನಟಿಸ್ತಾ ಇರೋದು ನಿಮಗೆ ಗೊತ್ತೇ ಇದೆ. ಈಗಾಗ್ಲೇ ಪುಷ್ಪ ಸಿನಿಮಾದಲ್ಲಿ ಜಾಲಿರೆಡ್ಡಿಯಾಗಿ ತೆಲುಗು ಆಡಿಯನ್ಸ್ ಮನಕದ್ದಿರೋ ಡಾಲಿ, ಝಿಬ್ರಾ ಮೂವಿ ಮೂಲಕ ಮತ್ತೊಮ್ಮೆ ತೆಲುಗು ನಾಡಲ್ಲಿ ಕಮಾಲ್ ಮಾಡೋಕೆ ಸಿದ್ದವಾಗಿದ್ದಾರೆ. ಸತ್ಯದೇವ್ ನಟನೆಯ ಪ್ಯಾನ್ ಇಂಡಿಯಾ ಮೂವಿ ಝಿಬ್ರಾನಲ್ಲಿ ಡಾಲಿಗೆ ನಾಯಕನ ಇಕ್ವೆಲ್ ರೋಲ್ ಇದೆ. ಇನ್ನೇನು ರಿಲೀಸ್​​ಗೆ ಸಜ್ಜಾಗಿರೋ ಝೀಬ್ರಾ ಮೂವಿಯ ಪ್ರೀ-  ರಿಲೀಸ್ ಇವೆಂಟ್ ಆಂಧ್ರದ​​ ವೈಜಾಗ್​ನಲ್ಲಿ ನಡೆದಿದ್ದು, ಅದ್ರಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ಚಿರಂಜೀವಿ , ಡಾಲಿಯನ್ನ ಹಾಡಿಹೊಗಳಿದ್ದಾರೆ. 

ಡಾಲಿ ಧನಂಜಯ್ ಟಾಲಿವುಡ್​ನಲ್ಲಿ ಬಿಗ್ ಸ್ಟಾರ್ ಆಗಿ ಸೆಟಲ್ ಆಗ್ತಾರೆ ಅಂತ ಚಿರು ಭವಿಷ್ಯ ನುಡಿದಿದ್ದಾರೆ. ಇನ್ನೂ ಮೆಗಾಸ್ಟಾರ್ ಮೆಚ್ಚುಗೆಯ ಮಾತುಗಳಿಂದ ಖುಷ್ ಆಗಿರೋ ಡಾಲಿ, ಸಿಪಾಯಿ ಸಿನಿಮಾದ ನಾನು ಪ್ರೇಮಜೀವಿ.. ನೀನು ಸ್ನೇಹಜೀವಿ ಹಾಡನ್ನ ನೆನಪಿಸಿಕೊಂಡು ಚಿರು ಬಗ್ಗೆ ತಮಗಿರೋ ಗೌರವ ಅಭಿಮಾನವನ್ನ ಹಂಚಿಕೊಂಡಿದ್ದಾರೆ. ಚಿರಂಜೀವಿಯಲ್ಲಿ ವಿಷ್ಣು ಅಂಬಿಯನ್ನ ಕಾಣ್ತಿನಿ ಎಂದ ಡಾಲಿ, ತಾನು ಯಾವ ಹಿನ್ನೆಲೆಯಿಲ್ಲದೇ ನೆಲೆಕಂಡುಕೊಂಡಿದ್ದು, ಅದಕ್ಕೆ ಚಿರುನೇ ಸ್ಪೂರ್ತಿ ಅಂದಿದ್ದಾರೆ. ಒಟ್ಟಾರೆ ಕನ್ನಡದ ನಟನಿಗೆ ಲೆಜೆಂಡ್ ಚಿರಂಜೀವಿಯಿಂದ ಸಿಕ್ಕಿರೋ ಪ್ರಶಂಸೆ ಕೇಳಿ ಇಡೀ ಸೌತ್ ಇಂಡಿಯಾನೇ ಬೆರಗಾಗಿದೆ.  ಮುಂದಿನ ವಾರ ಝಿಬ್ರಾ ಮೂವಿ  ರಿಲೀಸ್ ಆಗಲಿದ್ದು, ಡಾಲಿ ಪ್ಯಾನ್ ಇಂಡಿಯಾ ರೂಲ್ ಮಾಡೋಕೆ ಸಜ್ಜಾಗಿದ್ದಾರೆ. 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more