ಕೇಂದ್ರದ ಈ 2 ಲಕ್ಷದ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಹರು ಅರ್ಜಿ ಸಲ್ಲಿಸುವುದು ಹೇಗೆ?

Published : Nov 15, 2024, 11:16 AM IST

ಐಐಟಿ, ಐಐಎಂ, ಐಐಐಟಿ, ಎನ್‌ಐಟಿ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ರಾಜ್ಯದ  ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ನೀಡುವ ಈ 2 ಲಕ್ಷ ಮೌಲ್ಯದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

PREV
15
ಕೇಂದ್ರದ ಈ 2 ಲಕ್ಷದ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಹರು ಅರ್ಜಿ ಸಲ್ಲಿಸುವುದು ಹೇಗೆ?

ಐಐಟಿ, ಐಐಎಂ, ಐಐಐಟಿ, ಎನ್‌ಐಟಿ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಓದುತ್ತಿರುವ ರಾಜ್ಯದ  ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ನೀಡುವ ಈ 2 ಲಕ್ಷ ಮೌಲ್ಯದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

25

ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ, ಐಐಐಟಿ, ಎನ್ಐಟಿ ಮತ್ತು ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ರಾಜ್ಯದ  ವಿದ್ಯಾರ್ಥಿಗಳು 2024-25ನೇ ಶೈಕ್ಷಣಿಕ ವರ್ಷದ ಹೊಸ ಮತ್ತು ನವೀಕರಣ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು.

35

ಕುಟುಂಬದ ವಾರ್ಷಿಕ ಆದಾಯ ₹2.50 ಲಕ್ಷಕ್ಕಿಂತ ಕಡಿಮೆ ಇದ್ದರೆ, ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ, ವಿಶೇಷ ಶುಲ್ಕ, ಪರೀಕ್ಷಾ ಶುಲ್ಕ ಮತ್ತು ಇತರ ಕಡ್ಡಾಯ ಶುಲ್ಕಗಳಿಗಾಗಿ ವಿದ್ಯಾರ್ಥಿಗಳು ಪಾವತಿಸಿದ ಮೊತ್ತ ಅಥವಾ ವರ್ಷಕ್ಕೆ ಗರಿಷ್ಠ ₹2 ಲಕ್ಷದವರೆಗೆ ಶಿಷ್ಯವೇತನವಾಗಿ ನೀಡಲು ಸರ್ಕಾರ ಆದೇಶಿಸಿದೆ.

45

2024-2025ನೇ ಶೈಕ್ಷಣಿಕ ವರ್ಷದಲ್ಲಿ ಹೊಸ ಮತ್ತು ನವೀಕರಣ ಶಿಷ್ಯವೇತನಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವವರು ಹಿಂದುಳಿದ ವರ್ಗಗಳ ಕಲ್ಯಾಣ ನಿರ್ದೇಶನಾಲಯ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಕಚೇರಿಯಲ್ಲಿ ಅಥವಾ  https://www.education.gov.in/scholarships-education-loan-0ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗೆ ಸಲ್ಲಿಸಬಹುದು.

55

ಶಿಕ್ಷಣ ಸಂಸ್ಥೆಗಳು ತಮ್ಮ ದೃಢೀಕರಣದೊಂದಿಗೆ ಅರ್ಹ ಅರ್ಜಿಗಳನ್ನು ಶಿಫಾರಸು ಮಾಡಿ ನವೀಕರಣ ಅರ್ಜಿಗಳನ್ನು ಮುಂದಿನ ತಿಂಗಳ 15ನೇ ತಾರೀಖಿನೊಳಗೆ, ಹೊಸ ಅರ್ಜಿಗಳನ್ನು ಜನವರಿ 15ರೊಳಗೆ  ಕಳುಹಿಸಬೇಕು ಎಂದು ಅದರಲ್ಲಿ ತಿಳಿಸಲಾಗಿದೆ.

Read more Photos on
click me!

Recommended Stories