ಬಹುಶಃ ಆ ಕ್ಷಣವೇ ನಾನು ವಿಘ್ನೇಶನನ ಪ್ರೀತಿಯಲ್ಲಿ ಬಿದ್ದಿದ್ದೆ. ನಮ್ಮಿಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿದ್ದು ನಾನೇ. ಈ ವೇಳೆ ವಿಘ್ನೇಶ್ ನನ್ನ ಜೊತೆ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದರೆ... ಸಿನಿಮಾದ ಬಗ್ಗೆ ಆಮೇಲೆ ಮಾತನಾಡಬಹುದು...ಏನಾದರೂ ಖಾಸಗಿಯಾಗಿ ಮಾತನಾಡೋಣ ಎಂದು ಸುಳಿವು ನೀಡಿದ್ದೆ. ಪರೋಕ್ಷವಾಗಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದೆ, ಶೂಟಿಂಗ್‌ನ ಕೊನೆಯ ದಿನ ನಾವಿಬ್ಬರೂ ತುಂಬಾ ದುಃಖಿತರಾಗಿದ್ದೆವು. ನಾವು ಪರಸ್ಪರ ಭೇಟಿಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ವಿಘ್ನೇಶ್ ಜೊತೆ ನಯನತಾರಾ ಆ ರೀತಿ ಮಾತನಾಡಿದಾಗಿನಿಂದ ಅವರಿಗೂ ಅವನ ಮೇಲೆ ಒಲವು ಬೆಳೆದಿತ್ತು. ಆ ನಂತರ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ನಯನತಾರಾ ಹೇಳಿದ್ದಾರೆ. ಆರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು 2022 ರಲ್ಲಿ ವಿವಾಹವಾದರು. ಸದ್ಯ ನಯನ ಎರಡು ಮಕ್ಕಳ ತಾಯಿಯಾಗಿದ್ದು ಸುಖಿ ಜೀವನ ನಡೆಸುತ್ತಿದ್ದಾರೆ.