ಡಾ ರಾಜ್‌ಕುಮಾರ್ ಅವರಿಗೆ ಸಿನಿಮಾ ನಿರ್ಮಾಣ, ವ್ಯವಹಾರ ಇವುಗಳಲ್ಲಿ ಆಸಕ್ತಿಯೇ ಇರಲಿಲ್ಲ ಎನ್ನಲಾಗಿದೆ. ಆ ಕಾರಣಕ್ಕೆ ಅವರು ಮುಂದೆ ಯಾರದೇ ಜೊತೆ ಸಿನಿಮಾ ನಿರ್ಮಾಣ ಮಾಡಲೇ ಇಲ್ಲ ಎನ್ನಲಾಗಿದೆ. ಆದರೆ, ಆ ನಿರ್ಮಾಪಕರ ಜೊತೆ ಅಣ್ಣಾವ್ರಿಗೆ..
'ಜಿವಿ ಅಯ್ಯರ್ ಜೊತೆ ಡಾ ರಾಜ್‌ಕುಮಾರ್ (Dr Rajkumar) ಅವರಿಗೆ ಮನಸ್ತಾಪವಿತ್ತು. 'ರಣಧೀರ ಕಂಠೀರವ' (1960) ಸಿನಿಮಾ ನಿರ್ಮಾಣದಲ್ಲಿ ಜಿವಿ ಅಯ್ಯರ್ (GV Iyer) ಅವರ ಜೊತೆ ಭಾಗಿಯಾಗಿದ್ದ ಡಾ ರಾಜ್, ಆ ಬಳಿಕ ಅವರ ಜೊತೆ ಅಂತರ ಕಾಯ್ದುಕೊಂಡಿದ್ದರು ಎಂದೆಲ್ಲಾ ಹೇಳಲಾಗುತ್ತಿತ್ತು. ರಣಧೀರ ಕಂಠೀರವ (Ranadheera Kanteerava) ಸಿನಿಮಾ ನಿರ್ಮಾಣದಲ್ಲಿ ಜಿವಿ ಅಯ್ಯರ್ ಜೊತೆ ಡಾ ರಾಜ್, ಬಾಲಣ್ಣ ಹಾಗು ನರಸಿಂಹರಾಜು ಈ ಮೂವರೂ ಕೈ ಜೋಡಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಆದರೆ, ಬಿಡುಗಡೆ ಬಳಿಕ ಸಿನಿಮಾದ ಲಾಭ ಹಂಚಿಕೆ ವಿಷಯದಲ್ಲಿ ಅವರೆಲ್ಲರ ಮಧ್ಯೆ ಒಮ್ಮತ ಮೂಡದೇ ಬಳಿಕ ಅವರೆಲ್ಲರೂ ಬೇರೆಬೇರೆ ಆದರು' ಎನ್ನಲಾಗುತ್ತದೆ. ಆದರೆ, ಅದು ಸುಳ್ಳು ಎಂಬುದು ಮೆಲ್ನೋಟಕ್ಕೇ ಕಂಡು ಬರುತ್ತದೆ. ಕಾರಣ, 1960ರಲ್ಲಿ ಬಿಡುಗಡೆಯಾಗಿದ್ದು ಡಾ ರಾಜ್‌ಕುಮಾರ್ ಅಭಿನಯದ ರಣಧೀರ ಕಂಠೀರವ ಸಿನಿಮಾ. ಆದರೆ, ಜಿವಿ ಅಯ್ಯರ್ ನಿರ್ಮಾಣದಲ್ಲಿ ಸೋದರಿ (Sodari) ಸಿನಿಮಾ ಬಂದಿದ್ದು 1995ರಲ್ಲಿ. ಅಷ್ಟರಲ್ಲಿಯೇ ಡಾ ರಾಜ್ ಅವರು ತಮ್ಮ ಹೋಂ ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಿದ್ದರು.
undefined
ದರ್ಶನ್-ಉಪೇಂದ್ರ ಜೋಡಿ 'ಕಪಾಲಿ' ಚಿತ್ರ ಸದ್ಯದಲ್ಲೇ ಶುರು; ಈ ಶುಭ ಸುದ್ದಿಗೆ ಬೆಚ್ಚಿಬಿದ್ದ ಕರುನಾಡು!
ಆದ್ದರಿಂದ, ಒಮ್ಮೆ ಜಿವಿ ಅಯ್ಯರ್ ಹಾಗೂ ಡಾ ರಾಜ್‌ಕುಮಾರ್ ಮಧ್ಯೆ ಬೇಸರ ಆಗಿದ್ದಿರಬಹುದು. ಆದರೆ, ಬಳಿಕ ಅವರಿಬ್ಬರ ಮಧ್ಯೆ ಯಾವುದೇ ಮನಸ್ತಾಪ ಇರಲಿಲ್ಲ ಎನ್ನಬಹುದು. ಇದ್ದರೂ ಕೂಡ ಒಟ್ಟಿಗೆ ಸಿನಿಮಾ ಮಾಡಲಾಗದಷ್ಟು ಖಂಡಿತ ಇರಲಿಲ್ಲ ಎನ್ನಬಹುದು. ಒಂದು ವರ್ಗದ ಅಭಿಪ್ರಾಯದ ಪ್ರಕಾರ, ಡಾ ರಾಜ್‌ಕುಮಾರ್ ಅವರಿಗೆ ಸಿನಿಮಾ ನಿರ್ಮಾಣ, ವ್ಯವಹಾರ ಇವುಗಳಲ್ಲಿ ಆಸಕ್ತಿಯೇ ಇರಲಿಲ್ಲ ಎನ್ನಲಾಗಿದೆ. ಆ ಕಾರಣಕ್ಕೆ ಅವರು ಮುಂದೆ ಯಾರದೇ ಜೊತೆ ಸಿನಿಮಾ ನಿರ್ಮಾಣ ಮಾಡಲೇ ಇಲ್ಲ ಎನ್ನಲಾಗಿದೆ. ಆದರೆ, ಜಿವಿ ಅಯ್ಯರ್ ಜೊತೆ ಅಣ್ಣಾವ್ರಿಗೆ ಯಾವುದೇ ಜಗಳ-ಮನಸ್ತಾಪ ಇರಲೇ ಇಲ್ಲ.
ಆದರೆ, ಡಾ ರಾಜ್‌ಕುಮಾರ್ ಪತ್ನಿ ಪಾರ್ವತಮ್ಮನವರು ಮಾತ್ರ ಅದಕ್ಕೆ ತದ್ವಿರುದ್ಧ ಎಂಬಂತೆ, ಕನ್ನಡದ ಖ್ಯಾತ ನಿರ್ಮಾಪಕಿಯಾಗಿ ಬೆಳೆದರು. ಕನ್ನಡದಲ್ಲಿ 80ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ಹಲವರ ಸಿನಿಮಾ ಎಂಟ್ರಿ ಹಾಗೂ ಕೆರಿಯರ್‌ಗೆ ಕಾರಣರಾದರು ಪಾರ್ವತಮ್ಮನವರು. ಡಾ ರಾಜ್ ಅವರು ಮಾತ್ರ ತಾವು ಸಿನಿಮಾದ ವ್ಯವಹಾರದಲ್ಲಿ ಭಾಗಿಯಾಗದೇ ನಟನೆಯನ್ನೇ ಸರ್ವಸ್ವ ಎಂದು ಆರಾಧಿಸಿದರು.
ತಮಾಷೆ, ಆಟಗಳು ಮುಗಿದಿವೆ, ಈಗ ಬಿಸಿನೆಸ್ ಶುರು ಮಾಡೋಣ: ಕ್ಯಾ ಬಾತ್ ಹೈ ರಶ್ಮಿಕಾ ಅಂದ್ರಾ?
ಒಟ್ಟಿನಲ್ಲಿ ಡಾ ರಾಜ್‌ಕುಮಾರ್ ಅವರು ಕನ್ನಡಿಗರ 'ಅಣ್ಣಾವ್ರು' ಎನಿಸಿ, 200ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳ ಮೂಲಕ ಸಿನಿಮಾಪ್ರಿಯರನ್ನು ರಂಜಿಸಿದರು. ಹಿಂದೆ ಯಾರೂ ಇರಲಿಲ್ಲ, ಮುಂದೆ ಬರುವುದೂ ಕಷ್ಟ ಎಂಬಂತೆ ಬಾಳಿ ಬದುಕಿ ಚರಿತ್ರೆ ಸೃಷ್ಟಿಸಿಬಿಟ್ಟರು. ಅಂಥ ಡಾ ರಾಜ್‌ಕುಮಾರ್ ಅವರು ಜಿವಿ ಅಯ್ಯರ್ ಜೊತೆ ಒಮ್ಮೆ ಮನಸ್ತಾಪ ಆಗಿದ್ದರೂ ಅದನ್ನು ಮರೆತು ಮತ್ತೆ ಕೈ ಜೋಡಿಸಿರಬಹುದು. ಅಥವಾ, ಅವರಿಬ್ಬರ ಮಧ್ಯೆ ಮನಸ್ತಾಪ ಇತ್ತು ಎಂಬುದೇ ಸುಳ್ಳಾಗಿರಬಹುದು. ಈ ಬಗ್ಗೆ ನೀವೇನಂತೀರಾ?