ಮೆಸ್ಸಿ & ರೊನಾಲ್ಡೊ ಜತೆ ಲವ್ ಟ್ರಯಾಂಗಲ್ ನಡೆಸಲು ಮಾದಕ ನಟಿ ಉರ್ವಶಿ ರೌಟೇಲಾಗೆ ಆಸೆಯಂತೆ!

Published : Nov 15, 2024, 11:31 AM IST

ಬಾಲಿವುಡ್ ಮಾದಕ ನಟಿ ಉರ್ವಶಿ ರೌಟೇಲಾ ಯಾರ ಜೊತೆ ಲವ್ ಟ್ರಯಾಂಗಲ್‌ನಲ್ಲಿ ಇರಲು ಬಯಸುತ್ತೀರಿ ಅಂತ ಕೇಳಿದಾಗ, ಲಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಅಂತ ಹೇಳಿ ಸುದ್ದಿಯಾಗಿದ್ದಾರೆ

PREV
17
ಮೆಸ್ಸಿ & ರೊನಾಲ್ಡೊ ಜತೆ ಲವ್ ಟ್ರಯಾಂಗಲ್ ನಡೆಸಲು ಮಾದಕ ನಟಿ ಉರ್ವಶಿ ರೌಟೇಲಾಗೆ ಆಸೆಯಂತೆ!

ಉರ್ವಶಿ ರೌಟೇಲಾ ಅವರ ವೈಯಕ್ತಿಕ ಜೀವನ, ವಿಶೇಷವಾಗಿ ಅವರ ಡೇಟಿಂಗ್ ಜೀವನದ ಬಗ್ಗೆ ಊಹಾಪೋಹಗಳು ಆಗಾಗ್ಗೆ ಸುದ್ದಿಯಾಗುತ್ತವೆ. ಒಂದು ಸಂದರ್ಶನದಲ್ಲಿ ಫುಟ್ಬಾಲ್ ದಿಗ್ಗಜರಾದ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಯೊನೆಲ್ ಮೆಸ್ಸಿ ಅವರನ್ನು ಟ್ರಯಾಂಗಲ್ ಲವ್ ಸಂಭಾವ್ಯ ಸ್ಪರ್ಧಿಗಳೆಂದು ಹೇಳಿ ಸುದ್ದಿಯಾಗಿದ್ದಾರೆ. 

27

ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಜನಪ್ರಿಯ ಆಟಗಾರರು. ಈ ಫುಟ್ಬಾಲ್ ಆಟಗಾರರ ಜೊತೆ ಲವ್ ಟ್ರಯಾಂಗಲ್‌ನಲ್ಲಿ ಇರಲು ಇಷ್ಟಪಡುತ್ತೇನೆ ಎಂದು ನಟಿ ಊರ್ವಶಿ ಹೇಳಿಕೆ ಸಾಕಷ್ಟು ಸಂಚಲನವನ್ನೇ ಹುಟ್ಟುಹಾಕಿದೆ.

37

ಐಡಿವಾ ಟಾಕಿಂಗ್ ಸ್ಟೇಜ್ ಕಾರ್ಯಕ್ರಮದಲ್ಲಿ ಉರ್ವಶಿ ರೌಟೇಲಾ ಅವರು ಈ ವಿಚಾರದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಬಾಲಿವುಡ್ ಲವ್ ಟ್ರಯಾಂಗಲ್‌ನಲ್ಲಿ ಯಾರ ಜೊತೆ ಇರಲು ಬಯಸುತ್ತೀರಿ ಎಂದು ನಟಿಯನ್ನು ಕೇಳಲಾಯಿತು. ಆಗ ಇಬ್ಬರು ಫುಟ್ಬಾಲ್ ದಿಗ್ಗಜರನ್ನು ನೆನಪಿಸಿಕೊಂಡಿದ್ದಾರೆ. 

47

ಉರ್ವಶಿ ರೌಟೇಲಾ ಅವರ ಹೆಸರು ಆಗಾಗ್ಗೆ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಜೊತೆ ಥಳುಕು ಹಾಕಿಕೊಂಡಿತ್ತು. ಈ ವದಂತಿಗಳನ್ನು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಉರ್ವಶಿ ಉತ್ತರಿಸಿದ್ದಾರೆ.

57

ಕೆಲವರು ನನ್ನ ಎತ್ತರ(ಹೈಟ್)‌ಕ್ಕೆ ಸರಿಸಮಾನಲಾಗಿಲ್ಲ ಎಂದು ಹೇಳಿದ್ದಾರೆ. ಇದು ಪಂತ್ ಉದ್ದೇಶಿಸಿ ಹೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೋಲ್ ಆಗಿತ್ತು.

67

ಉರ್ವಶಿ ರೌಟೇಲಾ ಮುಂದೆ NBK109 ನಲ್ಲಿ ನಂದಮೂರಿ ಬಾಲಕೃಷ್ಣ ಜೊತೆ ನಟಿಸಲಿದ್ದಾರೆ. ಅವರ ಇತರ ಚಿತ್ರಗಳಲ್ಲಿ ಅಹ್ಮದ್ ಖಾನ್ ಅವರ ಬಾಪ್, ಅಕ್ಷಯ್ ಕುಮಾರ್ ಚಿತ್ರ ವೆಲ್ಕಮ್ ಟು ದಿ ಜಂಗಲ್ ಮತ್ತು ಕಸೂರ್ 2 ಸೇರಿವೆ.

77
ಉರ್ವಶಿ ರೌಟೇಲಾ

ವೆಲ್ಕಮ್ ಟು ದಿ ಜಂಗಲ್‌ನಲ್ಲಿ, ಅವರು ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ದಿಶಾ ಪಟಾನಿ, ರವೀನಾ ಟಂಡನ್, ಲಾರಾ ದತ್ತಾ, ಜಾಕ್ವೆಲಿನ್ ಫರ್ನಾಂಡಿಸ್, ಪರೇಶ್ ರಾವಲ್, ಅರ್ಷದ್ ವಾರ್ಸಿ, ತುಷಾರ್ ಕಪೂರ್, ಶ್ರೇಯಸ್ ತಲ್ಪಾಡೆ, ಕೃಷ್ಣ ಅಭಿಷೇಕ್, ಜಾಕಿ ಶ್ರಾಫ್ ಮತ್ತು ಆಫ್ತಾಬ್ ಶಿವದಾಸನಿ ಜೊತೆ ನಟಿಸಲಿದ್ದಾರೆ. ಅವರು ಇತ್ತೀಚೆಗೆ ಅನನ್ಯ ಪಾಂಡೆಯವರ ಕಾಲ್ ಮಿ ಬೇಯಲ್ಲಿ ಬಾಲಿವುಡ್ ತಾರೆಯಾಗಿ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories