ಒಂದು ಕಪ್ ಕಾಫಿಗೆ 6000 ರೂಪಾಯಿ ಅಂದರೆ ಅಶ್ಚರ್ಯವಾಗಲ್ವಾ? ಅದಕ್ಕಿಂತ ಇನ್ನೂ ಅಶ್ಚರ್ಯವೆಂದರೆ ಇದನ್ನು ತಯಾರಿಸುವ ವಿಧಾನ. ವಿಶ್ವದ ಅತಿ ದುಬಾರಿ ಕಾಫಿ ಕೊಪಿ ಲುವಾಕ್ ಮತ್ತು ಅದು ತಯಾರಿಸುವುದು ಪ್ರಾಣಿ ಮಲದಿಂದ.
ವಿಶ್ವದ ಅತ್ಯಂತ ದುಬಾರಿ ಕಾಫಿಯಾಗಿದ ಲುವಾಕ್ ಅನ್ನು ಮಲದಿಂದ ತಯಾರಿಸಲಾಗುತ್ತದೆ . ಅಂದರೆ ಬೆಕ್ಕಿನಂಥ ಪ್ರಾಣಿ ಸಿವೆಟ್ ತಿಂದು ಹೊರಹಾಕುವ ಅರ್ಧ ಜೀರ್ಣವಾದ ಕಾಫಿ ಬೀಜಗಳಿಂದ ಈ ಕಾಫಿ ಪುಡು ತಯಾರಾಗುತ್ತೆ.
ಇಂಡೋನೇಷ್ಯಾದಿಂದ, ವಿಶೇಷವಾಗಿ ಸುಮಾತ್ರಾ, ಜಾವಾ ಮತ್ತು ಸುಲವೆಸಿ ದ್ವೀಪಗಳಿಂದ ಹುಟ್ಟಿಕೊಂಡಿರುವ ಕೊಪಿ ಲುವಾಕ್ ಎಂಬ ಕಾಫಿ ತನ್ನ ವಿಶಿಷ್ಟತೆಗಾಗಿ ವಿಶ್ವಾದ್ಯಂತ ಮನ್ನಣೆ ಗಳಿಸಿದೆ.
ಈ ಕಾಫಿ ಹೆಚ್ಚು ಬೆಲೆ ಬಾಳಲು ಮತ್ತೊಂದು ಕಾರಣವೆಂದರೆ ಇದರ ವಿಸೇಷ ಉತ್ಫಾದನೆ. ಇಂಡೋನೇಷಿಯಾದ ಪಾಮ್ ಸಿವೆಟ್ ಎಂಬ ಪ್ರಾಣಿ ಮಲವೇ ಇದರ ಮೂಲ. ಅಂದರೆ ಪಾಮ್ ಸಿವೆಟ್ ತಿಂದು ಅರ್ಧ ಜೀರ್ಣವಾಗಿರುವ ಹೊರಹಾಕಿದ ಕಾಫಿ ಬೀಜಗಳಿಂದ ಈ ಕಾಫಿ ಇದನ್ನು ಉತ್ಪಾದಿಸಲಾಗುತ್ತದೆ.
ಈ ಕಾಫಿಯನ್ನು ಉತ್ಪಾದಿಸುವ ಸಾಂಪ್ರದಾಯಿಕ ವಿಧಾನಗಳಿಂದಾಗಿ ಇದರ ಬೆಲೆ ಹೆಚ್ಚಾಗಿದೆ. ಈ ಉತ್ಪಾದನೆಯು ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಏಷ್ಯನ್ ಪಾಮ್ ಸಿವೆಟ್‌ಗಳು ಹಣ್ಣಾದ ಕಾಫಿ ಹಣ್ಣುಗಳನ್ನು ಸೇವಿಸುತ್ತವೆ ಮತ್ತು ರೈತರು ಸಾಮಾನ್ಯವಾಗಿ ಕಾಡುಗಳಲ್ಲಿ ಈ ರೀತಿಯ ಸೂಕ್ತವಾದ ಕಾಫಿ ಬೀಜ ಸಿಗುತ್ತವೆ.
ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಸಂಭವಿಸುವ ಹುದುಗುವಿಕೆಯು ಬೀನ್ಸ್ ಪರಿಮಳವ ಹೆಚ್ಚುತ್ತದೆ, ಇದರ ಪರಿಣಾಮ ಇದು ಪ್ರಪಂಚದಲ್ಲೇ ಅತ್ಯಂತ ದುಬಾರಿ ಕಾಫಿ.
ವೈಲ್ಡ್ ಕಾಪಿ ಲುವಾಕ್‌ನ ಬೆಲೆ ಪ್ರತಿ ಕಪ್‌ಗೆ $20 ಮತ್ತು $100 ನಡುವೆ ಏರಿಳಿತಗೊಳ್ಳುತ್ತದೆ ಮತ್ತು ಕೃಷಿ ಮಾಡಿದ ಕೊಪಿ ಲುವಾಕ್‌ಗೆ ಬೆಲೆ ಸಹ $10 ಮತ್ತು $50 ನಡುವೆ ಇರುತ್ತದೆ.
ಭಾರತವು ವಿಶ್ವದ ಏಳನೇ ಅತಿದೊಡ್ಡ ಕಾಫಿ ಉತ್ಪಾದಕ ರಾಷ್ಟ್ರ. ನಮ್ಮ ರಾಷ್ಟ್ರವು ಸಿವೆಟ್ ಕಾಫಿ ಅನ್ನು ಸಹ ಉತ್ಪಾದಿಸುತ್ತದೆ. ಬೀನ್ಸ್ ಅರೇಬಿಕಾ ಮತ್ತು ರೋಬಸ್ಟಾ ಬ್ಲೆಂಡ್ ಸಿವೆಟ್ ಕಾಫಿ ಕಾಪಿ ಲುವಾಕ್ ಒಂದು 1 ಕೆಜಿಗೆ ಭಾರತದಲ್ಲಿ ಸುಮಾರು 10000 ರೂಪಾಯಿ ಇದೆ.
Luwak
19 ನೇ ಶತಮಾನದ ವಸಾಹತುಶಾಹಿ ಅವಧಿಯಲ್ಲಿ ಡಚ್ಚರು ತಮ್ಮ ಸ್ವಂತ ಕಾಫಿ ಕೊಯ್ಲು ಮಾಡುವುದನ್ನು ಇಂಡೋನೇಷಿಯಾದ ಸ್ಥಳೀಯ ಕಾರ್ಮಿಕರನ್ನು ನಿಷೇಧಿಸಿದ್ದರು. ಆ ಸಮಯದಲ್ಲಿ ಕಾಫಿ ಬೀಜಗಳನ್ನು ಸಂಗ್ರಹಿಸಿ ಈ ರೀತಿಯಲ್ಲಿ ಕಾಫಿ ತಯಾರಿಸುವುದನ್ನು ಇಂಡೋನೇಷ್ಯಾದ ಸ್ಥಳೀಯ ರೈತರು ಕಂಡು ಹಿಡಿದರು.