ಭಾರತದ ನಂ.1 ಶ್ರೀಮಂತ ಯುಟ್ಯೂಬರ್​ ಮಹಿಳೆ! ಖಿನ್ನತೆಗೆ ಜಾರಿದ್ದಾಕೆ ಅಡುಗೆ ಮಾಡಿ ಕೋಟ್ಯಧಿಪತಿಯಾದರು

By Suchethana D  |  First Published Nov 7, 2024, 10:22 PM IST

ಭಾರತದ ನಂ.1 ಶ್ರೀಮಂತ ಮಹಿಳಾ ಯುಟ್ಯೂಬರ್​ ಈಕೆ! ಖಿನ್ನತೆಗೆ ಜಾರಿದ್ದಾಕೆ ಅಡುಗೆ ಮಾಡಿ ಕೋಟ್ಯಧಿಪತಿಯಾದ ಕಥೆ ಕೇಳಿ... 
 


ಸೋಷಿಯಲ್​ ಮೀಡಿಯಾ ಅದರಲ್ಲಿಯೂ ಇನ್​ಸ್ಟಾಗ್ರಾಮ್​, ಯುಟ್ಯೂಬ್​ಗಳು ಅದೆಷ್ಟೋ ಮಂದಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಯಾವುದೋ ಮೂಲೆಯಲ್ಲಿ ಇರುವವರು ಇಂದು ಆಯಾ ರಾಜ್ಯಗಳಲ್ಲೋ ಅಥವಾ ದೇಶದಲ್ಲಿಯೋ ಫೇಮಸ್​ ಆಗಿದ್ದಾರೆ. ನಂಬಲಸಾಧ್ಯ ರೀತಿಯ ಪ್ರತಿಭೆಗಳು ಬೆಳಕಿಗೆ ಬಂದಿವೆ. ಕೆಲವರು ಇಲ್ಲ ಸಲ್ಲದ ವಿಡಿಯೋ ಮಾಡಿಕೊಂಡೇ ರಾತ್ರೋರಾತ್ರಿ ಸ್ಟಾರ್​ಗಳಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳು ಹುಡುಕಿ ಬಂದಿವೆ. ಮತ್ತೊಂದಿಷ್ಟು ಮಂದಿ ಟ್ರೋಲ್​ ಆಗುತ್ತಲೇ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕಾಂಟ್ರವರ್ಸಿ ರಿಯಾಲಿಟಿ ಷೋಗಳಲ್ಲಿ ಆಫರ್​ಗಳು ಹುಡುಕಿ ಬಂದಿವೆ. ಆದರೆ ಅಡ್ಡದಾರಿ ಹಿಡಿದವರ ಕಥೆ ಅಡ್ಡಾದಿಡ್ಡಿಯಾಗಿಯೇ ಅರ್ಧದಲ್ಲಿಯೇ ಮುಗಿಯುತ್ತೆ ಎನ್ನುವುದು ಅಷ್ಟೇ ಸತ್ಯ. ಆದರೆ ಸೋಷಿಯಲ್​ ಮೀಡಿಯಾದಲ್ಲಿ ಪ್ರತಿಭೆಯನ್ನು ಮೆರೆದು ಬೆಳೆದವರೂ ಅಷ್ಟೇ  ಪ್ರಮಾಣದಲ್ಲಿ ಇದ್ದಾರೆ.

ಅಂಥವರಲ್ಲಿ ಒಬ್ಬರು ನಿಶಾ ಮಧುಲಿಕಾ. ಉತ್ತರ ಪ್ರದೇಶದ ನಿಶಾ ಈಗ ದೇಶಾದ್ಯಂತ ಖ್ಯಾತಿ ಗಳಿಸಿದ್ದಾರೆ. ಇದಕ್ಕೆ ಕಾರಣ ಅವರ ಯೂಟ್ಯೂಬ್​. ಇನ್ನೂ ಒಂದು ಕುತೂಹಲದ ಸಂಗತಿ ಏನೆಂದರೆ, ಯೂಟ್ಯೂಬ್​ ಮೂಲಕವೇ ಆದಾಯ ಗಳಿಸುತ್ತಿರುವ ಇವರು ಈಗ ಭಾರತದ ನಂಬರ್​ 1 ಶ್ರೀಮಂತ ಮಹಿಳಾ ಯೂಟ್ಯೂಬರ್​ ಎನ್ನಿಸಿಕೊಂಡಿದ್ದಾರೆ! ಹೌದು. 2011 ರ ಮಧ್ಯ ಭಾಗದಲ್ಲಿ ಯೂಟ್ಯೂಬ್‌ ಚಾನಲ್ ಆರಂಭಿಸಿ ಅಲ್ಲಿ ಪಾಕ ವೈವಿಧ್ಯಗಳನ್ನು ತೋರಿಸಿಕೊಂಡು ಬರುತ್ತಿರುವ ನಿಶಾ ಮಧುಲಿಕಾ ಅವರು, ಈ 13 ವರ್ಷಗಳಲ್ಲಿ ಗಳಿಸಿರುವ ಆದಾಯ ಎಷ್ಟು ಗೊತ್ತಾ? 43 ಕೋಟಿ ರೂಪಾಯಿಗಳು! ಈ ಮೂಲಕ ದೇಶದ ಶ್ರೀಮಂತ ಯುಟ್ಯೂಬರ್​ ಎನ್ನಿಸಿಕೊಂಡಿದ್ದಾರೆ.  ಅವರು ತಮ್ಮ ಯೂಟ್ಯೂಬ್​ ಚಾನಲ್​ನಲ್ಲಿ ಎರಡೂವರೆ ಸಾವಿಕ್ಕೂ ಅಧಿಕ ಅಡುಗೆ  ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ.  

Tap to resize

Latest Videos

undefined

ಪಕ್ಕದ್ಮನೆ ಆಂಟಿ ಕಮಾಲ್‌, ರಸಿಕ ಗಂಡ ಬಚಾವ್‌! ಪತ್ನಿಯರೇ ಹುಷಾರ್‌, ಯಾಮಾರಿದ್ರೆ ಜೋಕೆ..

ಸದ್ಯ ಇವರು 14.4 ಮಿಲಿಯನ್​ ಅಂದರೆ ಸುಮಾರು 1.44 ಕೋಟಿ ಚಂದಾದಾರರನ್ನು ಪಡೆದುಕೊಂಡಿದ್ದಾರೆ.  ಆರಂಭದಲ್ಲಿ   ಹಿಂದುಳಿದ ಮಕ್ಕಳಿಗೆ ಪಾಠ ಮಾಡುತ್ತಿದ್ದ ಇವರು, ನಂತರ ಆಹಾರದ ಬ್ಲಾಗ್ ಶುರು ಮಾಡಿದರು. 2007ರಲ್ಲಿ  ವೆಬ್‌ಸೈಟ್  ಪ್ರಾರಂಭಿಸಿದರು. ನಂತರ 2011ರಲ್ಲಿ ಅಡುಗೆ ಕುರಿತ ಯೂಟ್ಯೂಬ್​ ಆರಂಭಿಸಿದರು.  ಇದಕ್ಕೆ ತಮ್ಮ  ಪತಿ ಮತ್ತು ಮಕ್ಕಳ ಬೆಂಬಲ ಇರುವುದಾಗಿ ಹೇಳುತ್ತಾರೆ.  ಆರಂಭದಲ್ಲಿ ತುಂಬಾ ಕಷ್ಟವಾಯಿತು. ಕೊನೆ ಕೊನೆಗೆ ಛಲ ಬಿಡದೇ ಅಡುಗೆ ವಿಡಿಯೋ ಹಾಕಲು ಶುರು ಮಾಡಿದ್ದು, ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರುವುದಾಗಿ ನಿಶಾ ಹೇಳುತ್ತಾರೆ.  ಸದ್ಯ ಐದು ವೃತ್ತಿಪರರ ತಂಡವು ನಿಶಾ ಅವರ ಆನ್‌ಲೈನ್ ಕೆಲಸವನ್ನು ನೋಡಿಕೊಳ್ಳುತ್ತಿದೆ.  ನಿಶಾ ಅವರ ಪತಿ ಮುಂಜಾನೆಯ ವಿಡಿಯೋ ಶೂಟ್‌ ಮಾಡಿ  ಯೂಟ್ಯೂಬ್ ಚಾನಲ್​ಗೆ ಅಪ್ಲೋಡ್​ ಮಾಡಿ ಕೆಲಸಕ್ಕೆ ಹೋಗುವುದಾಗಿ ಹೇಳುತ್ತಾರೆ ನಿಶಾ. 

65 ವರ್ಷದ ನಿಶಾ ಅವರು, ಆನ್​ಲೈನ್​ ಸ್ಟಾರ್​ ಆಗಿದ್ದಾರೆ. ಅಂದಹಾಗೆ ನಿಶಾ ಮಧುಲಿಕಾ ಅವರು ಚಿಕ್ಕ ವಯಸ್ಸಿನಲ್ಲೇ ಅಡುಗೆ ಮಾಡಲು ಪ್ರಾರಂಭಿಸಿದ್ದರು. ಆರಂಭದಲ್ಲಿ ಪತಿಯೊಂದಿಗೆ ನೋಯ್ಡಾದಲ್ಲಿ ವಾಸಿಸುತ್ತಿದ್ದರು. ಮಕ್ಕಳು ಕಲಿಯಲು ದೂರ ಹೋದಾಗ, ಮನೆಯಲ್ಲಿ ಒಂಟಿತನ ಅನುಭವಿಸಿದರು ನಿಶಾ (empty nest syndrome). ಒಂದು ರೀತಿಯ ಖಿನ್ನತೆಗೆ ಜಾರಿದ್ದ ಅವರು, ಅದರಿಂದ ಹೊರಕ್ಕೆ ಬರಲು ಸೋಷಿಯಲ್​ ಮೀಡಿಯಾದ ಮೊರೆ ಹೋದರು.  2014 ರಲ್ಲಿ, ಅವರು ಭಾರತದ ಟಾಪ್ ಯೂಟ್ಯೂಬ್ ಷೆಫ್‌ಗಳಲ್ಲಿ ಒಬ್ಬರಾಗಿದ್ದರು.  ಅವರಿಗೆ ಇದಾಗಲೇ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. 

ಬಿಗ್​ಬಾಸ್​ನಲ್ಲಿ ಸಿಕ್ಕ ಪೇಮೆಂಟ್​ ಎಷ್ಟು? ಮಾಧ್ಯಮದ ಮುಂದೆ ಅಸಮಾಧಾನ ತೋಡಿಕೊಂಡ ಮಾನಸಾ!
 

click me!