ಒಂದು ಮಿಲಿಯನ್​ ಮಂದಿಗೆ ಉದ್ಯೋಗ ನೀಡ್ತಿರೋ ಸೋಮಾರಿಗಳು! ಇವರಿಂದ್ಲೇ 35 ಸಾವಿರ ಕೋಟಿ ಲಾಭ

By Suchethana D  |  First Published Nov 16, 2024, 4:19 PM IST

ಮನೆಯಿಂದ ಹೊರಗಡೆ ಕಾಲಿಡುವ ಸೋಮಾರಿಗಳಿಂದ ಒಂದು ಮಿಲಿಯನ್​ ಉದ್ಯೋಗ ಸೃಷ್ಟಿಯಾಗ್ತಿದ್ರೆ, ಇವರಿಂದ್ಲೇ 35 ಸಾವಿರ ಕೋಟಿ ಲಾಭವೂ ಆಗಿದೆ. ಏನಿದು ವಿಷ್ಯ? 
 


ಈಗ ಮನೆಯಲ್ಲಿ ಅಡುಗೆ ಮಾಡುವುದು ಎಂದರೆ ಹಲವರಿಗೆ ಅಲರ್ಜಿ. ಗಂಡಾಗಲೀ, ಹೆಣ್ಣು ಮಕ್ಕಳಾಗಲಿ ಈಗಿನವರಿಗೆ ಅಡುಗೆ ಮಾಡುವುದಕ್ಕೆ ಬರುವುದೂ ಅಷ್ಟಕ್ಕಷ್ಟೇ. ಅದರಲ್ಲಿಯೂ ಹೆಣ್ಣುಮಕ್ಕಳಿಗೆ ಮ್ಯಾಗಿ ಮಾಡುವುದು ಬಿಟ್ಟರೆ ಬೇರೇನೂ ಬರುವುದಿಲ್ಲ ಎನ್ನುವ ಸಾಕಷ್ಟು ರೀಲ್ಸ್​, ಮೀಮ್ಸ್​ಗಳೂ ಬರುವುದು ಇದೆ. ವಿಷಪೂರಿತ ಮಿಕ್ಸಿಂಗ್​ನಿಂದಾಗಿ ಎರಡು ವರ್ಷಗಳ ಹಿಂದೆ ಮ್ಯಾಗಿ ನೂಡಲ್ಸ್​ ಅನ್ನು ಬ್ಯಾನ್ ಮಾಡಿದಾಗ ಅದೆಷ್ಟೋ ಹೆಣ್ಣುಮಕ್ಕಳು ಕಣ್ಣೀರು ಹಾಕಿದ್ದೂ ಇದೆ. ಇದೇ ಇಂದಿನ ಮಕ್ಕಳ ಪರಿಸ್ಥಿತಿಯನ್ನು ತೋರಿಸುತ್ತದೆ. ಇನ್ನು ಧಾವಂತದ ಯಾಂತ್ರಿಕದ ಈ ಕಾಲಘಟ್ಟದಲ್ಲಿ ನಗರ, ಮಹಾಗರ ಪ್ರದೇಶಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಅಡುಗೆ ಮಾಡುವುದು ಕಷ್ಟಸಾಧ್ಯವೂ ಆಗುವಂತಿದೆ. ಕೂಡು ಕುಟುಂಬ ಬೇಡ ಎಂದು ಪ್ರತ್ಯೇಕವಾಗಿಯೇ ವಾಸಮಾಡಬಯಸುವ ಕುಟುಂಬಗಳಲ್ಲಿ  ಸಹಜವಾಗಿ ಈ ಕಷ್ಟ ಕಂಡುಬರುತ್ತಿದೆ.

ಅದೇನೇ ಇದ್ದರೂ, ಒಂದೇ ಮಾತಿನಲ್ಲಿ ಹೇಳುವುದಾದರೆ ಅಗತ್ಯವಿದ್ದರೂ, ಅಗತ್ಯ ಇಲ್ಲದಿದ್ದರೂ,  ಅನಿವಾರ್ಯತೆಯಿಂದಲೋ... ಒಟ್ಟಿನಲ್ಲಿ ಹೆಚ್ಚಿನವರು ಅಡುಗೆ ಮಾಡುವುದರಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಇದೇ ಕಾರಣಕ್ಕೆ  ಸಂದಿ ಗುಂದಿಗಳಲ್ಲಿಯೂ ಹೋಟೆಲ್​ಗಳು ತಲೆ ಎತ್ತಿ ನಿಂತಿದೆ. ಬೀದಿ ಬದಿಯ ತಿನಿಸುಗಳ ಬಳಿಯೂ ಜನಜಾತ್ರೆಯೇ ನೆರೆದಿರುವುದನ್ನು ನಗರ ಪ್ರದೇಶಗಳಲ್ಲಿ ನೋಡಬಹುದಾಗಿದೆ. 

Tap to resize

Latest Videos

undefined

ಶಾರುಖ್​ ಖಾನ್​ ಹಣವೇ ಕೊಡದಿದ್ರೂ ಬೀದಿ ವ್ಯಾಪಾರಿಗಳು ಮಾಲಾಮಾಲ್​- ಇದು ನಟನ ಕಮಾಲ್​!

ಇದು ಒಂದೆಡೆಯಾದರೆ, ಹೋಟೆಲ್​ವರೆಗೆ ನಡೆದುಕೊಂಡು ಅಥವಾ ಗಾಡಿಯಲ್ಲಿ ಯಾರು ಹೋಗುತ್ತಾರೆ ಎನ್ನುವ ಸೋಮಾರಿಗಳಿಗೆ ವರದಾನ ಆಗಿರುವುದು ಫುಡ್​ ಆ್ಯಪ್​ಗಳು, ಜೊಮ್ಯಾಟೊ, ಸ್ವಿಗ್ಗಿ, ಬ್ಲಿಂಕಿಟ್​, ಜೆಪ್ಟೋ ಅಂಥ ಕಂಪೆನಿಗಳಿಗೆ ಇಂಥ ಸೋಮಾರಿಗಳೇ ಬಂಡವಾಳ. ಮನೆಯಿಂದ ಹೊರಕ್ಕೆ ಒಂದಿಷ್ಟು ದೂರ ಹೋಗಲಾಗದ ಸೋಮಾರಿಗಳಿಂದಾಗಿಯೇ ಸಹಸ್ರಾರು ಮಂದಿ ಈ ಫುಡ್​ ಆ್ಯಪ್​ಗಳಲ್ಲಿ ಡಿಲೆವರಿ ಕೆಲಸ ಮಾಡಿ ಉದ್ಯೋಗ ಪಡೆಯುತ್ತಿದ್ದಾರೆ ಎನ್ನುವುದು ನಿಜವಾದರೂ, ಈ ಫುಡ್​ ಆ್ಯಪ್​ಗಳು ಮಿಲೇನಿಯರ್​ ಆಗುತ್ತಿವೆ. ಅದಕ್ಕೆ ಸಾಕ್ಷಿಯಾದದ್ದು ಈಗ ಬಿಡುಗಡೆಯಾಗಿರುವ ವರದಿ. ಮೇಲೆ ತಿಳಿಸಿರುವ ಫುಡ್​ ಆ್ಯಪ್​ಗಳು 2023ರಲ್ಲಿ 35 ಸಾವಿರ ಕೋಟಿ ರೂಪಾಯಿಗಳ ವ್ಯಾಪಾರ ನಡೆಸಿರುವುದಾಗಿ ವರದಿಯಾಗಿದೆ!

ಅಂದ ಮೇಲೆ ಎಷ್ಟು ಮಂದಿ ಈ ಆ್ಯಪ್​ಗಳ ಮೊರೆ ಹೋಗುತ್ತಿದ್ದಾರೆ ಎನ್ನುವುದನ್ನು ನೋಡಬಹುದಾಗಿದೆ. ಕೈ-ಕಾಲುಗಳು ಗಟ್ಟಿಯಾಗಿದ್ದರೂ ಕುಳಿತಲ್ಲಿಯೇ ಆಹಾರ ತರಿಸಿಕೊಳ್ಳುವ ಜನರಿಗೆ ಇಂಥ ಕಂಪೆನಿಗಳು ಎಷ್ಟು ವ್ಯವಹಾರ ಮಾಡುತ್ತಿದೆ ನೋಡಿ! ಕೆಲವೊಮ್ಮೆ ಹತ್ತಿರದಲ್ಲಿ ಹೋಟೆಲ್​ಗಳು ಇಲ್ಲದಿದ್ದರೆ ಅಥವಾ ತಮ್ಮಿಷ್ಟದ ತಿನಿಸು ಸಮೀಪ ಸಿಗದೇ ಇದ್ದರೆ ಆ್ಯಪ್​ಗಳ ಮೊರೆ ಹೋಗುವುದು ಸಹಜ. ಆದರೆ ಈಗಿನ ಸ್ಥಿತಿ ನೋಡಿದರೆ ಹಾಗೆ ಕಾಣಿಸುತ್ತಿಲ್ಲ. ಇದಕ್ಕೆ ಸಾಕ್ಷಿಯಾಗಿದೆ ಈ ವರದಿ. ಈ 35 ಸಾವಿರ ಕೋಟಿ ರೂಪಾಯಿಗಳು ಪಾಕಿಸ್ತಾನದ 1,15,000 ಕೋಟಿ ರೂಪಾಯಿಗಳಿಗೆ ಸಮನಾಗಿದೆ! 2030ರಲ್ಲಿ ಭಾರತದಲ್ಲಿ 2 ಲಕ್ಷ ಕೋಟಿ ಲಾಭ ಮಾಡುವ ನಿರೀಕ್ಷೆ ಇದೆ! ಇನ್ನೂ ಒಂದು ಇಂಟರೆಸ್ಟಿಂಗ್​ ವಿಷ್ಯ ಏನೆಂದರೆ, ಉದ್ಯಮದ ಅಂದಾಜಿನ ಪ್ರಕಾರ, ಭಾರತದಲ್ಲಿ ಜೊಮೆಟ್ಯೋ ಮತ್ತು  ಸ್ವಿಗ್ಗಿ ಕಂಪೆನಿಗಳಲ್ಲಿ  1 ಮಿಲಿಯನ್ ಆಹಾರ ಡಿಲೆವರಿ ಬಾಯ್ಸ್​-ಗರ್ಲ್ಸ್​ ಇದ್ದಾರೆ! 

ಹಾಸನದ ಹುಡ್ಗೀರು ನಟ ಜೆಕೆಗೆ ಚಿವುಟಿ, ಕಚ್ಚಿ, ಹರಿದು ತಿಂದೇಬಿಟ್ರು! ಆ ದಿನ ನೆನೆದ ನಿರ್ದೇಶಕ ಆರೂರು ಜಗದೀಶ್​
 
 

click me!