ಬಿಯರ್ ಬಾಟಲಿ ಬ್ರೌನ್ ಹಾಗೂ ಹಸಿರು ಬಣ್ಣದಲ್ಲೇ ಯಾಕಿದೆ? ಇದರಲ್ಲಿದೆ ಗುಟ್ಟು!

By Chethan Kumar  |  First Published Nov 17, 2024, 8:14 PM IST

ಬಿಯರ್ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಬಿಯರ್ ಕುಡಿಯುವಾಗ ಯಾವತ್ತಾದರೂ ಬಾಟಲಿ ಕಡು ಕಂದು ಅಥವಾ ಹಸಿರು ಬಣ್ಣದಲ್ಲೇ ಯಾಕಿದೆ ಅನ್ನೋದು ಯೋಚಿಸಿದ್ದೀರಾ? ಇದರ ಹಿಂದಿದೆ ಮಹತ್ವದ ವಿಚಾರ.
 


ಕರ್ನಾಟಕ ಸೇರಿದಂತೆ ದೇಶಾದ್ಯಂತ ಬಿಯರ್ ಮಾರಾಟ ಗಣನೀಯ ಹೆಚ್ಚಳವಾಗಿದೆ. ಬಿಯರ್ ಟೇಸ್ಟ್ ಹೇಗಿದೆ, ಕಿಕ್ ಹೇಗಿದೆ ಅನ್ನೋದನ್ನು ಕೂಲಂಕುಷವಾಗಿ ಗಮನಿಸುತ್ತಾರೆ. ಆದರೆ ಬಿಯರ್ ಕುಡಿಯುವಾಗ ಬಿಯರ್ ಬಾಟಲ್ ಕಡು ಕಂದು ಹಾಗೂ ಗ್ರೀನ್ ಬಣ್ಣದಲ್ಲಿ ಯಾಕಿದೆ ಅನ್ನೋ ಮಾಹಿತಿ ಹಲವರಿಗೆ ಗೊತ್ತಿಲ್ಲ. ಇದರ ಹಿಂದೆ ಮಹತ್ವದ ರಹಸ್ಯವೊಂದು ಅಡಗಿದೆ. ಪ್ಲೇನ್ ಗಾಜಿನ ಬಾಟಲಿ ಆಗಿದ್ದರೆ ಸೂರ್ಯನ ಅಲ್ಟ್ರಾವಾಯಿಲೆಟ್ ಕಿರಣಗಳು ನೇರವಾಗಿ ಬಾಟಲಿ ಒಳಗೆ ಪ್ರವೇಶಿಸಿ ಮದ್ಯದ ಮೇಲೆ ರಿಯಾಕ್ಷನ್ ಮಾಡಲಿದೆ. ಇಷ್ಟೇ ಅಲ್ಲ ಬಿಯರ್ ಟೇಸ್ಟ್‌ನಲ್ಲೂ ವ್ಯತ್ಯಾಸವಾಗಲಿದೆ. ಪ್ರಮುಖವಾಗಿ ಬಿಯರ್ ಗುಣಮಟ್ಟ ಹಾಳಾಗಲಿದೆ. 

ಇಷ್ಟೇ ಅಲ್ಲ ಇದರ ಜೊತೆಗೂ ಹಲವು ಕಾರಣಗಳಿವೆ. ಬಿಯರ್‌ಗೆ ಬರೋಬ್ಬರಿ 13,000 ವರ್ಷಗಳ ಇತಿಹಾಸವಿದೆ. ಸಾಂಪ್ರಾದಾಯಿಕ ಕಾರ್ಯಕ್ರಮ ಸೇರಿಂತೆ ಹಲವು ಕಾರ್ಯಕ್ರಮಗಳಲ್ಲಿ ಬಿಯರ್ ಬಳಕೆ ಮಾಡುತ್ತಿದ್ದರು. ಆರಂಭದಲ್ಲಿ ಟ್ರಾನ್ಸಪರೆಂಟ್ ಗಾಜಿನ ಬಾಟಲಿಯಲ್ಲಿ ಬಿಯರ್ ಶೇಖರಿಸಿಡಲಾಗುತ್ತಿತ್ತು. ಆದರೆ ಸೂರ್ಯನ ಅಲ್ಟ್ರಾವಾಯಿಲೆಟ್ ಕಿರಣಗಳು ಪ್ರವೇಶಿಸಿ ಬಿಯರ್ ಮೇಲೆ ರಿಯಕ್ಷನ್ ಮಾಡುತ್ತಿತ್ತು. ಇದರಿಂದ ಬಿಯರ್ ವಾಸನೆ, ಟೇಸ್ಟ್ ಎಲ್ಲವೂ ಬದಲಾಗುತ್ತಿತ್ತು. ಹೀಗಾಗಿ ಕಡು ಬಾಟಲಿಯಲ್ಲಿ ಬಿಯರ್ ಶೇಖರಿಸಿಡುವ ಪದ್ದತಿ ಆರಂಭಗೊಡಿತು.

Latest Videos

undefined

.ರೈಲಿನಲ್ಲಿ ಪ್ರಯಾಣಿಕರು ಎಷ್ಟು ಬಾಟಲಿ ಮದ್ಯ ಒಯ್ಯಲು ಅವಕಾಶವಿದೆ? ಇಲ್ಲಿದೆ ನಿಯಮ!

ಕಡು ಬಣ್ಣದ ಗಾಜಿನ ಬಾಟಲಿಯಲ್ಲಿ ಸೂರ್ಯನ ಅಲ್ಟ್ರಾವಾಯಿಟೆಲ್ ಕಿರಣಗಳು ಪ್ರವೇಶಿಸುವುದು ಕಡಿಮೆ. ಇದರಿಂದ ಬಿಯರ್ ಸುರಕ್ಷಿತವಾಗಿರಲಿದೆ. ಕಡು ಕಂದು ಗಾಜಿನ ಬಾಟಲಿ ಒಳಗೆ ಅಲ್ಟ್ರಾವಾಯ್ಲೆಟ್ ಕಿರಣಗಳು ಪ್ರವೇಶಿಸುವುದಿಲ್ಲ. ಆ್ಯಂಬರ್(ಕಡು ಕಂದು) ಬಾಟಲಿ ಅತೀ ಹೆಚ್ಚು ಇತಿಹಾಸ ಹೊಂದಿರುವ ಬಾಟಲಿಯಾಗಿದೆ. ಬಹುತೇಕ ಎಲ್ಲಾ ಬ್ರ್ಯಾಂಡ್ ಬಿಯರ್‌ಗಳು ಕಡು ಕಂದು ಬಣ್ಣಧ ಬಾಟಲಿಯನ್ನು ಹೆಚ್ಚು ಬಳಸುತ್ತಿದೆ.  

ಗ್ರೀನ್ ಕಲರ್ ಯಾಕೆ? ಹೌದು, ಕಡು ಕಂದು ಹಾಗೂ ಹಸಿರು ಬಣ್ಣದ ಬಾಟಲಿಯಲ್ಲಿ ಬಿಯರ್ ಲಭ್ಯವಿದೆ. ಹಸಿರು ಬಣ್ಣವನ್ನು ಪ್ರೀಮಿಯಂ ಬಿಯರ್ ಬಾಟಲಿಗಾಗಿ ಬಳಲಾಗುತ್ತಿದೆ. ಅಲ್ಕೋಹಾಲ್ ಪರ್ಸೆಂಟೇಜ್ ಕಡಿಮೆ ಇರುವ ಪ್ರಿಮಿಯಂ ಬ್ರಿಯರ್‌ಗೆ ಗ್ರೀನ್ ಬಾಟಲಿ ಬಳಸುತ್ತಾರೆ. ಆದರೆ ಗ್ರೀನ್ ಬಾಟಲಿಗಳು ಅಲ್ಟಾವಾಯ್ಲೆಟ್ ಕಿರಣಗಳು ಪ್ರವೇಶವನ್ನು ಸಂಪೂರ್ಣವಾಗಿ ತಡೆಯುವುದಿಲ್ಲ. ಆದರೂ ಹೆಚ್ಚಿನ ಜನ ಪ್ರಿಮಿಯಂ ಬಿಯರ್ ಬಳಸುವ ಗ್ರಾಹಕರಿಗೆ ಫ್ಯಾಶನ್‌ಗಾಗಿ ಗ್ರೀನ್ ಬಾಟಲಿ ಬಳಸಲಾಗುತ್ತದೆ. 

ಬಿಯರ್ ಗುಣಮಟ್ಟ ಹಾಳುವಾಗ ಕಾರಣ ಈ ರೀತಿ ಬಣ್ಣ ಬಳಸಲಾಗುತ್ತದೆ. ಈ ಪೈಕಿ ಅತೀ ಹೆಚ್ಚು ಸುರಕ್ಷಿತ ಬಿಯರ್ ಕ್ಯಾನ್ ಅಥವಾ ಟಿನ್ ಬಿಯರ್. ಟಿನ್ ಅಥವಾ ಕ್ಯಾನ್ ಬಿಯರ್‌ನಲ್ಲಿ ಸೂರ್ಯನ ಅಲ್ಟಾವಾಯ್ಲೆಟ್ ಕಿರಣಗಳು ಪ್ರವೇಶಿಸುವುದಿಲ್ಲ. ಹೀಗಾಗಿ ಇದು ಹೆಚ್ಚು ಸುರಕ್ಷಿತ. ಆದರೆ ಬಿಯರ್ ಟ್ರಾನ್ಸಪರೆಂಟ್ ಗಾಜಿನ ಬಾಟಲಿಯಲ್ಲಿದ್ದರೆ ಅದು ಪ್ಯೂರಿಟಿ ಅಳೆಯಲಾಗುತ್ತದೆ. ಇದೀಗ ಬಿಯರ್ ಬಾಟಲಿಯಲ್ಲಿ ಹಲವು ಬದಲಾವಣೆಗಳಾಗಿವೆ. ವೈಟ್ ಬಿಯರ್(ಗೋಧಿ) ಬಾಟಲಿ ಬಣ್ಣವೇ ಕೊಂಚ ಲೈಟ್. ಗೋಲ್ಡನ್ ಅಥವಾ ಹಳದಿ ಮಿಶ್ರಿತ ಬಣ್ಣದಲ್ಲಿರುತ್ತದೆ. 
 

click me!