ಬಾತ್ರೂಮ್‌ ಫೋಟೋ ಮೂಲಕ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಕಾಮಸೂತ್ರ ನಟಿ ಅಭಾ ಪೌಲ್

First Published Jan 3, 2023, 5:09 PM IST

XXX ತಾರೆ ಅಭಾ ಪೌಲ್ (Abha Paul) ತನ್ನ ಕಿಲ್ಲರ್‌ ಸ್ಟೈಲ್‌ ಮೂಲಕ  ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹವಾ ಸೃಷ್ಟಿಸಿದ್ದಾರೆ.  ಅಭಾ ತನ್ನ ಅಭಿಮಾನಿಗಳನ್ನು ಮೆಚ್ಚಿಸಲು  ತನ್ನ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ನಡುವೆ  ಅವರ ಕೆಲವು  ಬಾತ್‌ರೂಮ್‌ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ,  ಇದನ್ನು ನೋಡಿ ಅವರ ಅಭಿಮಾನಿಗಳು ಹುಚ್ಚರಾಗುತ್ತಿದ್ದಾರೆ.

ವೈರಲ್ ಆಗುತ್ತಿರುವ ಫೋಟೋಗಳಲ್ಲಿ, ಅಭಾ ಬಾತ್‌ಟಬ್‌ನಲ್ಲಿ ಕುಳಿತು ಫೋಟೋಶೂಟ್ ಮಾಡಿದ್ದಾರೆ. ಕ್ಯಾಮೆರಾ ನೋಡುತ್ತಾ ಪೋಸ್ ಕೊಡುತ್ತಿದ್ದಾರೆ. ಇದರಿಂದ ಅಭಿಮಾನಿಗಳ ಎದೆಬಡಿತ ಹೆಚ್ಚಾಗಿದೆ. 
 

35 ನೇ ವಯಸ್ಸಿನಲ್ಲಿಯೂ ಅಭಾ ತುಂಬಾ ಮಾದಕವಾಗಿ ಕಾಣುತ್ತಾರೆ. ಗಂಧಿ ಬಾತ್ ನಾಯಕಿ ಅಭಾ ಪೌಲ್ ಅವರ ಬಾತ್ ರೂಂ ಫೋಟೋಶೂಟ್‌ನ  ಹಾಟ್ ಫೋಟೋಗಳು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿವೆ.

ಅಭಾ ಪಾಲ್ ಅವರ Instagram ಪೇಜ್‌ ನೋಡಿದರೆ, ಅವರು ಅನೇಕ ಬೋಲ್ಡ್ ಮತ್ತು ಗ್ಲಾಮರಸ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
 

ಅಭಾ ಪೌಲ್ ಅವರ ವೃತ್ತಿ ಜೀವನದಲ್ಲಿ ಹೆಚ್ಚಿನದೇನು ಮಾಡಿಲ್ಲ ಅಥವಾ ಅವರು ವಿಶೇಷ ಚಿತ್ರಗಳಲ್ಲಿ ಕೆಲಸ ಮಾಡಿಲ್ಲ. ಆದರೆ ಅವರ ಬೋಲ್ಡ್‌ನೆಸ್‌  ಕಾರಣದಿಂದಾಗಿ ಅಭಾ ಪೌಲ್‌ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ.

ಏಕ್ತಾ ಕಪೂರ್ ಅವರ ಕಾಮಪ್ರಚೋದಕ ವೆಬ್ ಸರಣಿ ಕಾಮಸೂತ್ರದಲ್ಲಿ  ಕೆಲಸ ಮಾಡುವ ಮೂಲಕ ಅಭಾ ಪಾಲ್ ಬೆಳಕಿಗೆ ಬಂದರು ಮತ್ತು ನಂತರ  ತಮ್ಮ ಬೋಲ್ಡ್‌ ಆವತಾರದಿಂದ  ಟ್ರೆಂಡ್‌ ಆಗಿದ್ದಾರೆ.

ಮಾಡೆಲಿಂಗ್‌ನೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದ ಅಭಾ ಪೌಲ್, 2010 ರಲ್ಲಿ ಸಲ್ಮಾನ್ ಖಾನ್ ಅಭಿನಯದ ವೀರ್ ಚಿತ್ರದಲ್ಲಿ ಸಣ್ಣ ಪಾತ್ರವನ್ನು ಮಾಡುವ ಅವಕಾಶವನ್ನು ಪಡೆದರು.

ಆದರೆ ಅವರ ಪಾತ್ರವನ್ನು ಸಲ್ಮಾನ್ ಖಾನ್ ಚಿತ್ರದಲ್ಲಿ ಎಡಿಟ್‌ ಮಾಡಲಾಯಿತು. ನಂತರ ಅವರು 2013 ರಲ್ಲಿ ಬಿಡುಗಡೆಯಾದ ಕಾಮಸೂತ್ರ 3D ಚಿತ್ರದಲ್ಲಿ ಕಾಣಿಸಿಕೊಂಡರು.
 

2019 ರಲ್ಲಿ, ಅಭಾ ಪೌಲ್‌ಗೆ ವೆಬ್ ಸರಣಿ ಗಂಧಿ ಬಾತ್‌ನಲ್ಲಿ ಅವಕಾಶ ನೀಡಲಾಯಿತು. ಅದರಲ್ಲಿ ಕೆಲಸ ಮಾಡುವ ಮೂಲಕ ಅವರು ಸಾಕಷ್ಟು ಸುದ್ದಿ ಮಾಡಿದರು. ಈ ಸರಣಿಯ ನಂತರ, ಅಭಾ  ಗಂಧಿ ಬಾತ್ ನಟಿ ಎಂದೇ ಫೇಮಸ್‌ ಆಗಿದ್ದಾರೆ.ಟರು.
 

Abha Paul

ಅಭಾ ಪೌಲ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ವಿಡಿಯೋ ಶೇರ್ ಮಾಡುವ ಮೂಲಕ ಹೊಸ ವರ್ಷ ಆಚರಿಸಿದ್ದಾರೆ. ಅಭಾ ವಿಡಿಯೋ ಪಡ್ಡೆ ಯುವಕರ ನಿದ್ದೆ ಗೆಡಿಸಿದೆ.

click me!