Nov 25, 2024, 3:07 PM IST
ಬೈ ಎಲೆಕ್ಷನ್ ಬ್ಯಾಟಲ್ ಗೆದ್ದು ಬೀಗಿರೋ ಕೈ ಪಡೆ.. ಸಿದ್ದು-ಡಿಕೆ ಜೋಡಿ ಮಂತ್ರ.. ದೇಶಕ್ಕೆ ದೊಡ್ಡ ಸಂದೇಶ..ದೇಶದಲ್ಲಿ ಗೆಲುವು ಕಾಣೋಕೆ ನರಳಾಡ್ತಾ ಇರೋ ಕಾಂಗ್ರೆಸ್ ಪಕ್ಷ.. ರಾಜ್ಯದಲ್ಲಿ ರಣಾರ್ಭಟವನ್ನ ನಡೆಸ್ತಿದೆ. ಟಗರು-ಬಂಡೆ ಜೋಡೆತ್ತು ಕೈ ಹೈಕಮಾಂಡ್ಗೆ ಮಾಡೆಲ್ ಆಗ್ತಿದೆ. ತ್ರಿಬಲ್ ಗೆಲುವಿನ ಮೂಲಕ ಟ್ರಬಲ್ಗೆ ಟ್ರಬಲ್ ಆಗಿದ್ದಾರೆ ಹಂಟರ್ ಡಿಕೆ. ಆರೋಪಗಳ ಅಗ್ನಿಯಲ್ಲಿಯೇ ಗೆಲುವಿನ ಚಿನ್ನ ಹುಡುಕಿದ್ದು ಹೇಗೆ ಸಿಎಂ ಸಿದ್ದರಾಮಯ್ಯ. ? ದೇಶದ ಕೈ ತೂಕವೇ ಒಂದಾದ್ರೆ, ಕರುನಾಡಿನ ಕೈ ತೂಕವೇ ಮತ್ತೊಂದಾಗಿರೋದು ಹೇಗೆ.? ಇದೇ ಈ ಇವತ್ತಿನ ಸುವರ್ಣ ಸ್ಪೆಷಲ್ ಕರ್ನಾಟಕವೇ ಪವರ್.
ರಾಜ್ಯ ಉಪ ಚುನಾವಣೆಯಲ್ಲಿ ಕ್ಲೀನ್ ಸ್ವಿಪ್ ಮಾಡಿರೋದ್ರಿಂದ ಸಿದ್ದರಾಮಯ್ಯ ದೊಡ್ಡ ನಿಟ್ಟುಸಿರು ಬಿಟ್ಟಿದ್ದಾರೆ. ಕುರ್ಚಿ ಗಟ್ಟಿಯಾಯ್ತು ಅನ್ನೋ ನಿರಾಳತೆಯಲ್ಲಿ ಅವರಿದ್ದಾರೆ. ಹಾಗಿದ್ರೆ, ಉಪಚುನಾವಣೆಯ ಗೆಲುವಿನ ಬಳಿಕ ಶೇಕ್ ಆಗ್ತಿದ್ದ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಕೊಂಚ ಗಟ್ಟಿಯಾಗಿರೋದು ಹೇಗೆ ಅಂತ ತೋರಿಸ್ತೀವಿ. ರಾಜ್ಯದ ಮೂರು ಉಪಚುನಾವಣೆ ಗೆಲ್ಲೋ ಮೂಲಕ ಸಿಎಂ ಸಿದ್ದರಾಮಯ್ಯ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ. ವಿಪಕ್ಷಗಳು ಏನೇ ಆರೋಪ ಮಾಡಿದ್ರು ಜನ ಕೈ ಬಿಟ್ಟಿಲ್ಲ ಅನ್ನೋದು ಒಂದಾದ್ರೆ, ಇನ್ನೊಂದು, ತಮ್ಮ ಸಿಎಂ ಕುರ್ಚಿಯನ್ನ ಕೂಡ ಈ ಗೆಲುವಿನ ಮೂಲಕ ಗಟ್ಟಿ ಮಾಡ್ಕೊಂಡಿದ್ದಾರೆ ಸಿದ್ದರಾಮಯ್ಯ.
ಮೂರು ಕ್ಷೇತ್ರದ ಗೆಲುವಿನ ಅಲೆಯಲ್ಲಿಯೇ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಕುರ್ಚಿ ಬಲಪಡಿಸಿಕೊಳ್ಳೋಕೆ ಮತ್ತೊಂದು ಹೆಜ್ಜೆಯನ್ನ ಇಟ್ಟಿದ್ದಾರೆ. ಬೈ ಎಲೆಕ್ಷನ್ ಬ್ಯಾಟಲ್ ಗೆಲುವಿನ ಬೆನ್ನಲ್ಲೆ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಉಪಕದನದ ಗೆಲುವಿನ ಕಿಚ್ಚಿನಲ್ಲೇ ತಮ್ಮ ಕುರ್ಚಿಯನ್ನ ಗಟ್ಟಿ ಮಾಡಿಕೊಳ್ಳೋಕೆ ಮತ್ತೊಂದು ಹೆಜ್ಜೆಯನ್ನ ಸಿಎಂ ಸಿದ್ದರಾಮಯ್ಯ ಇಟ್ಟಿದ್ದಾರೆ.