ಮೇಕಪ್ಪೂ ಇಲ್ದೇ, ಎಣ್ಣೆ ತಲೆಯಲ್ಲೇ, ಮನೆ ಬಟ್ಟೆಯಲ್ಲೇ ಫಿಲ್ಮ್‌ಫೇರ್ ಪ್ರಶಸ್ತಿ ಸ್ವೀಕರಿಸಿದ ನಟಿ! ವಿಡಿಯೋ ವೈರಲ್‌

By Suchethana D  |  First Published Nov 26, 2024, 11:51 AM IST

ಮೇಕಪ್ಪೂ ಇಲ್ದೇ, ತಲೆಗೆ ಎಣ್ಣೆ ಬಳಿದು ಮನೆಯ ಬಟ್ಟೆಯಲ್ಲೇ ಪ್ರಶಸ್ತಿ ಸ್ವೀಕರಿಸಿದ್ದರು ನಟಿ ಕಾಜೋಲ್‌. ಅದರ ವಿಡಿಯೋ ವೈರಲ್‌ ಆಗಿದ್ದು, ಫ್ಯಾನ್ಸ್‌ ಕಣ್‌ ಕಣ್‌ ಬಿಡುವಂತಾಗಿದೆ! 
 


ಇಂದು ಬಹುತೇಕ ಹೆಣ್ಣುಮಕ್ಕಳಿಗೆ ಮೇಕಪ್‌ ಇಲ್ಲದೇ ಜೀವನವೇ ಇಲ್ಲ ಎನ್ನುವ ಮಟ್ಟಿಗೆ ಆಗಿದೆ. ಅದರಲ್ಲಿಯೂ ಸೆಲೆಬ್ರಿಟಿಗಳು ಎಂದ ಮೇಲೆ ಕೇಳಬೇಕೆ? ಕೆಜಿಗಟ್ಟಲೆ ಮೇಕಪ್‌ ಅವರ ಮುಖದ ಮೇಲೆಯೇ ಇರುತ್ತದೆ. ತಾವು ಸುಂದರವಾಗಿ ಕಾಣಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೇಹದ ಅಂಗಾಂಗಗಳಿಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಳ್ಳುವುದೂ ಅಲ್ಲದೇ, ಮೇಕಪ್‌ ಇಲ್ಲದೇ ಹೊರಗೆ ಕಾಲಿಡಲಾರರು. ಇನ್ನು ಸ್ವಲ್ಪ ವಯಸ್ಸಾಗುತ್ತಿದ್ದಂತೆಯೇ ಮೇಕಪ್‌ ಅವತಾರಗಳೂ ಹೆಚ್ಚಾಗುತ್ತವೆ. ನೋಡುಗರಿಗೆ ವ್ಹಾವ್‌ ಇಷ್ಟು ವಯಸ್ಸಿನಲ್ಲಿಯೂ ಇಷ್ಟು ಸುಂದರ ಇದ್ದಾರೆ ಎನ್ನಿಸಿದರೂ, ಅಸಲಿಯತ್ತು ಗೊತ್ತಿರುವುದು ಅವರಿಗೆ ಮಾತ್ರ ತೀರಾ ಹತ್ತಿರದಿಂದ ಬಲ್ಲವರಿಗೆ ಮಾತ್ರ! ಇನ್ನು ಅವಾರ್ಡ್ ಫಂಕ್ಷನ್‌ ಎಂದರೆ ಸುಮ್ಮನೇನಾ? ಕೋಟಿಗಟ್ಟಲೆ ಬೆಲೆಬಾಳುವ ಬಟ್ಟೆ, ಮೇಕಪ್‌ ಎಲ್ಲವೂ ಇದ್ದರೂ ಅತಿಶಯೋಕ್ತಿ ಅಲ್ಲ.

ಆದರೆ ಮನೆಯಲ್ಲಿನ ಬಟ್ಟೆಯನ್ನೇ ತೊಟ್ಟು ಒಂದು ಸ್ವಲ್ಪವೂ ಮೇಕಪ್‌ ಇಲ್ಲದೇ ಬಹುದೊಡ್ಡ ಅವಾರ್ಡ್ ಫಂಕ್ಷನ್‌ಗೆ ಬಾಲಿವುಡ್‌ ನಟಿ ಬರ್ತಾರೆ ಎಂದರೆ ನಂಬುವಿರಾ? ನಂಬಲೇ ಬೇಕು. ಅವರೇ ಕೃಷ್ಣ ಸುಂದರಿ ಕಾಜೋಲ್‌. ಅಷ್ಟಕ್ಕೂ  ಪ್ರಶಸ್ತಿ ಫಂಕ್ಷನ್ ಗಳ ಕ್ರೇಜ್ ಇಂದು ಎಷ್ಟರಮಟ್ಟಿಗೆ ಇದೆಯೋ, ಅಂದು ಕೂಡ ಅಷ್ಟೇ ಇತ್ತು. 90ರ ದಶಕದಲ್ಲಿ, ಹೆಚ್ಚಿನ ನಟಿಯರು ಈಗಿನಂತೆ ಆಡಂಬರವಾಗಿ ಬರುತ್ತಿರಲಿಲ್ಲ, ಸಿಂಪಲ್‌ ಆಗಿ ಬರುತ್ತಿದ್ದರು, ಸಿಂಪಲ್ ಬಟ್ಟೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಎಲ್ಲರೂ ಅಲ್ಲದಿದ್ದರೂ ಬಹುತೇಕ ಮಂದಿಗೆ ಇದು ಕಾಮನ್‌ ಆಗಿತ್ತು. ಅಂಥವರಲ್ಲಿ ಒಬ್ಬರಾಗಿದ್ದ ನಟಿ ಕಾಜೋಲ್‌.   ಸರಳವಾದ ಕಿತ್ತಳೆ ಬಣ್ಣದ ಸೂಟ್‌ನಲ್ಲಿ ಪ್ರಶಸ್ತಿ ಕಾರ್ಯಕ್ರಮಕ್ಕೆ ಹಾಜರಾಗಿದ್ದ ವಿಡಿಯೋ ಒಂದು ವೈರಲ್‌ ಆಗಿದೆ. ಇದು ಸೀದಾ ಸಾದಾ ಮನೆಯಲ್ಲಿ ಹಾಕುವ ಬಟ್ಟೆಯಂತೆ ಇದ್ದು, ನಟಿ ಮೇಕಪ್‌ ಕೂಡ ಮಾಡಿರಲಿಲ್ಲ. ಅಷ್ಟೇ ಅಲ್ಲದೆ ಕೂದಲಿಗೆ ಎಣ್ಣೆಯನ್ನೂ ಬಳಿದುಕೊಳ್ಳಲಾಗಿತ್ತು. 

Latest Videos

undefined

ಎ.ಆರ್.ರೆಹಮಾನ್‌ ಜೊತೆಗಿರುವ ಸಂಬಂಧವೇನು? ವಿಡಿಯೋ ಮೂಲಕ ಸ್ಪಷ್ಟಪಡಿಸಿದ ಮೋಹಿನಿ ಡೇ!

ಅಂದಹಾಗೆ ಈ ವಿಡಿಯೋ 1997ರದ್ದು.  ಗುಪ್ತ: ದಿ ಹಿಡನ್ ಟ್ರುತ್  ಚಿತ್ರದಲ್ಲಿನ ನೆಗೆಟಿವ್‌ ರೋಲ್‌ಗೆ ಕಾಜೋಲ್ ಅವರಿಗೆ ಪ್ರತಿಷ್ಠಿತ  ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿತ್ತು. ಆ ಸಂದರ್ಭದಲ್ಲಿನ ಫೋಟೋ ಇದು.  ಕಾಜೋಲ್ ಹೊರತಾಗಿ, ಗುಪ್ತ: ದಿ ಹಿಡನ್ ಟ್ರುತ್ ಪ್ರಮುಖ ಪಾತ್ರಗಳಲ್ಲಿ ಬಾಬಿ ಡಿಯೋಲ್ ಮತ್ತು ಮನೀಶಾ ಕೊಯಿರಾಲಾ ನಟಿಸಿದ್ದಾರೆ. ಈ ಚಿತ್ರವನ್ನು ಬಾಲಿವುಡ್‌ನ ಅತ್ಯುತ್ತಮ ಕೊಲೆ ರಹಸ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಋಣಾತ್ಮಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದ ಮೊದಲ ನಟಿ ಕಾಜೋಲ್. ಗುಪ್ತ್ ಅತ್ಯುತ್ತಮ ಹಿನ್ನೆಲೆ ಸಂಗೀತಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದ ಅತ್ಯುತ್ತಮ ಚಲನಚಿತ್ರವಾಯಿತು, ಇದನ್ನು ಸಂಗೀತ ನಿರ್ದೇಶಕ ವಿಜು ಶಾ ಅವರಿಗೆ ನೀಡಲಾಯಿತು.

ಚಿತ್ರದ ಹಾಡುಗಳಾದ ದುನಿಯಾ ಹಸಿನೋ ಕಾ ಮೇಲಾ, ಮುಷ್ಕಿಲ್ ಬಡಾ ಯೇ ಪ್ಯಾರ್ ಹೈ, ಮೇರೆ ಖ್ವಾಬೋನ್ ಮೇ ತೂ ಮತ್ತು ಯೇ ಪ್ಯಾರ್ ಕ್ಯಾ ಹೈ ಆ ಸಮಯದಲ್ಲಿ ಬ್ಲಾಕ್ಬಸ್ಟರ್ ಆಯಿತು. ಇದಲ್ಲದೆ, ಗುಪ್ತ್‌ನ ಕ್ಲೈಮ್ಯಾಕ್ಸ್ ಎಲ್ಲರನ್ನು ಬೆಚ್ಚಿಬೀಳಿಸಿತು. ಅದರ ರೋಮಾಂಚಕ ಸಸ್ಪೆನ್ಸ್ ಮತ್ತು ಕುತೂಹಲಕಾರಿ ಕ್ಲೈಮ್ಯಾಕ್ಸ್‌ನಿಂದಾಗಿ, ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. 9 ಕೋಟಿಯಲ್ಲಿ ತಯಾರಾದ ಗುಪ್ತ್ ವಿಶ್ವಾದ್ಯಂತ 33 ಕೋಟಿ ಗಳಿಸಿದೆ. 

ಆ ಮೂಲ, ಈ ಮೂಲ ಕೇಳಬಾರ್ದು ಎನ್ನುತ್ತಲೇ ಅಮ್ಮನ ಮಲಗುವ ಕೋಣೆ ರಹಸ್ಯ ತೆರೆದಿಟ್ಟ ವಿನೋದ್‌ ರಾಜ್!

click me!